ಜೆಲೆನ್ ಸ್ಕಿ, ಪುಟಿನ್ ಕಾಲು ಹಿಡಿದು ಕ್ಷಮಾಪಣೆ ಕೇಳಬೇಕಂತೆ- ಚೆಚೆನ್ಯಾ ನಾಯಕನ ಕರೆ
ಚೆಚೆನ್ಯಾ: ರಷ್ಯಾ-ಉಕ್ರೇನ್ ಯುದ್ಧ ದಿನ ದಿನಕ್ಕೂ ಉದ್ವಿಗ್ನತೆ ಪಡೆದುಕೊಳ್ತಿದೆ. ಇತ್ತ ಮಾತುಕತೆ ನಡೆಸುವುದಾಗಿ ಎರಡೂ ರಾಷ್ಟ್ರಗಳು ಒಪ್ಪಿಕೊಂಡ್ರೂ ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ. ಶಸ್ತ್ರಾಸ್ತರ ತ್ಯಾಗ ಮಾಡಿದ್ರೆ ನಾವು ಯುದ್ಧ ನಿಲ್ಲಿಸುತ್ತೇವೆ ಅಂತ ರಷ್ಯಾ ಹೇಳಿದ್ರೆ. ಮಾತುಕತೆಗೆ ನಾವು ಸಿದ್ದ ಎಂದು ಉಕ್ರೇನ್ ಹೇಳಿದೆ. ಆದರೆ ಇದು ಕೇವಲ ಮಾತಿಗೆ ಸೀಮಿತವಾಗಿದೆ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ, ಯುದ್ಧ ಮುಂದುವರೆದಿದೆ. ಈ ನಡುವೆ ಚೆಚೆನ್ಯಾ ಗಣರಾಜ್ಯದ ನಾಯಕ ರಂಜಾನ್ ಕದಿರೋವ್ ಜೆಲೆನ್ ಸ್ಕಿ ಒಂದು ಕರೆಯನ್ನು ನೀಡಿದ್ದಾನೆ. ʻನೀನು ಹೋಗಿ ಪುಟಿನ್ ಕಾಲು ಹಿಡಿದಿಕೋʼ ಯುದ್ಧ ನಿಲ್ಲುತ್ತದೆ ಎಂಬ ಮಾತನ್ನು ಹೇಳಿದ್ದಾನೆ.
ಚೆಚೆನ್ಯಾದ ಸೆಂಟ್ರಲ್ ಗ್ರೋಜ್ನಿಯಲ್ಲಿ ಸಭೆ ನಡೆಸಿ ಈ ಮೂಲಕ ಉಕ್ರೇನ್ ಅಧ್ಯಕ್ಷನಿಗೆ ಒಂದು ಸಂದೇಶ ನೀಡಬಯಸುತ್ತೇನೆ ಅದೇನಪ್ಪಾ ಅಂದ್ರೆ ನಮ್ಮ ಅಧ್ಯಕ್ಷ ಪುಟಿನ್ ಅವರ ಕಾಲುಗಳನ್ನು ಹಿಡಿದು ಜೆಲೆನ್ ಸ್ಕಿ ಕ್ಷಮಾಪಣೆ ಕೇಳಬೇಕು. ಉಕ್ರೇನ್ ಮೇಲೆ ಯುದ್ಧ ನಿಲ್ಲಿಸುವಂತೆ ಬಂದು ಮನವಿ ಮಾಡಿಬೇಕು. ರಷ್ಯಾ ವಿಧಿಸುವ ಎಲ್ಲಾ ಷರತ್ತುಗಳನ್ನು ಒಪ್ಪಿಕೊಳ್ಳೇಕು. ಉಕ್ರೇನ್ ಅಧ್ಯಕ್ಷನಿಗೆ ಇದೊಂದೆ ಮಾರ್ಗ ಎಂಬ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ.
ರಷ್ಯಾದ ಒಂದು ಭಾಗವಾದ ಚೆಚೆನ್ಯಾದ 12,000 ಸ್ವಾತಂತ್ರ್ಯ ಸೇನಾನಿಗಳು ಕೂಡ ಉಕ್ರೇನ್ ಮೇಲೆ ಯುದ್ಧ ಮಾಡಲು ರೆಡಿಯಾಗಿವೆ. ಪುಟಿನ್ ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ. ಜೆಲೆನ್ ಸ್ಕಿ ಈ ಕೂಡಲೇ ಬಂದು ನಮ್ಮ ಅಧ್ಯಕ್ಷನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಬೇಕು ಇಲ್ಲವಾದಲ್ಲಿ ನಾವು ನಮ್ಮ 12,000ಸಾವಿರ ಸೇನೆಯನ್ನು ಉಕ್ರೇನ್ ಯುದ್ಧ ಕಣದಲ್ಲಿ ಇಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.