ಉಕ್ರೇನ್ ರಾಜಧಾನಿ ಕೀವ್ನಲ್ಲಿ ಕರ್ಫ್ಯೂ ಜಾರಿ: ಜನ ರಸ್ತೆಗೆ ಬರದಂತೆ ಕೀವ್ ಮೇಯರ್ ಸೂಚನೆ
ಕೀವ್: ಉಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಕೀವ್ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಯುದ್ಧದ ಸಮಯವಾದ್ದರಿಂದ ಯಾರೂ ರಸ್ತೆಗಳಲ್ಲಿ ಓಡಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಸಂಜೆ 5 ರಿಂದ ಬೆಳಿಗ್ಗೆ 8 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಉಕ್ರೇನ್ನ ಕೀವ್ ಮೇಯರ್ ಹೇಳಿದ್ದಾರೆ. ಕರ್ಫ್ಯೂ ಸಮಯದಲ್ಲಿ ರಸ್ತೆಗಳಲ್ಲಿ ಓಡಾಡುವವರನ್ನು ದೇಶ ದ್ರೋಹಿಗಳೆಂದು ಪರಿಗಣಿಸಲಾಗುವುದು ಎಂದು ಕೀವ್ ಮೇಯರ್ ಸ್ಪಷ್ಟಪಡಿಸಿದ್ದಾರೆ.
ರಷ್ಯಾ ಸೇನೆ ಕಟ್ಟಡಗಳ ಮೇಲೆ ಕ್ಷಿಪಣಿಗಳನ್ನು ಉಡಾಯಿಸುತ್ತಿವೆ. ಈಗಾಗಲೇ ಹಲವು ಕಟ್ಟಡಗಳು ನೆಲಸಮವಾಗಿವೆ. ಕೀವ್ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ನಗರವನ್ನು ರಷ್ಯಾ ಪಡೆಗಳು ಸುತ್ತುವರೆದಿವೆ. ಉಕ್ರೇನಿಯನ್ ಪಡೆಗಳು ರಷ್ಯಾದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಯೋಜನೆಗಳನ್ನು ಸಿದ್ಧಪಡಿಸುತ್ತಿವೆ. ಉಕ್ರೇನ್ ಕೀವ್ ನಗರದ ಸುತ್ತಲಿನ ಪ್ರಮುಖ ಸ್ಥಳಗಳ ಮೇಲೆ ಹಿಡಿತ ಸಾಧಿಸಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಜ್ಕಿ ಅವರು ಕೀವ್ ಮೇಲೆ ನಾವು ಇನ್ನೂ ನಿಯಂತ್ರಣವನ್ನು ಕಳೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಉಕ್ರೇನಿಯನ್ ಸೈನ್ಯಕ್ಕೆ ಮತ್ತು ನಾಗರಿಕರಿಗೆ ಯುದ್ಧದಲ್ಲಿ ಭಾಗವಹಿಸಲು ಜೆಲೆನ್ ಸ್ಕಿ ಕರೆ ನೀಡಿದ್ದಾರೆ. ಯುದ್ಧ ನಿಂತರೆ ಮಾತ್ರ ಶಾಂತಿ ನೆಲೆಸುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.