`ಹುಟ್ಟಿದ ಮನೆಯಲ್ಲೇ ಅತ್ಯಾಚಾರಕ್ಕೊಳಗಾಗುತ್ತಾರಂತೆ ಪಾಕ್ ಮಹಿಳೆಯರು!
ಪಾಕಿಸ್ತಾನ; ಪಾಕಿಸ್ತಾನದಲ್ಲಿ ಶೇಕಡಾ 82ರಷ್ಟು ಮಹಿಳೆಯರು ತಮ್ಮ ಮನೆಯ ಪುರುಷರಿಂದಲೇ ಅತ್ಯಾಚಾರಕ್ಕೊಳಗಾಗುತ್ತಾರಂತೆ.. ತನ್ನದೇ ಮನೆಯ ತಂದೆ, ಸಹೋದರ, ಅಜ್ಜ ಹೀಗೆ ಮನೆಯ ಗಂಡಸರೇ ಮನೆ ಹೆಣ್ಣು ಮಗಳನ್ನು ಮುಕ್ಕಿ ತಿನ್ನುತ್ತಾರಂತೆ.. ಹೀಗಂತ ಹೇಳಿದ್ದು ಬೇರೆ ಯಾರೋ ಅಲ್ಲ, ಪಾಕಿಸ್ತಾನ ಸರ್ಕಾರದ ಸಂಸದೆ ಷಂಡನಾ ಗುಲ್ಜಾರ್..
ಪಾಕಿಸ್ತಾನದ ಖಾಸಗಿ ಟಿವಿ ನ್ಯೂಸ್ ಡಿಬೇಟ್ ನಲ್ಲಿ ಪಾಲ್ಗೊಂಡಿದ್ದ ಆಕೆ, ಪಾಕಿಸ್ತಾನದ ಮಹಿಳೆಯರನ್ನು ತಮ್ಮ ಸಹೋದರರು, ಮನೆಯ ಗಂಡಸರು ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸಿದ್ದಾಳೆ.. ಆಕೆಯ ಈ ಹೇಳಿಕೆಗೆ ಪಾಕಿಸ್ತಾನದಲ್ಲಿ ಭಾರೀ ವಿರೋಧ ಕೂಡಾ ವ್ಯಕ್ತವಾಗಿದೆ..
ಪಾಕಿಸ್ತಾನದಲ್ಲಿ ಹುಡುಗಿಯರ ಮೇಲೆ ಅತ್ಯಾಚಾರ ಆಗುತ್ತಿದೆ.. ಅದನ್ನು ಬೇರೆ ಯಾರೋ ಮಾಡುತ್ತಿಲ್ಲ.. ತನ್ನದೇ ಮನೆಯ ಗಂಡಸರ ಕಾಮದಾಸೆಗೆ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಸಂಸದೆ ಹೇಳಿದ್ದಾರೆ.. ತಂದೆ, ಸಹೋದರರು, ಅಜ್ಜ ಮತ್ತು ಚಿಕ್ಕಪ್ಪ ಮುಂತಾದವರೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಸಂಸದೆ ಷಂಡನಾ ಗುಲ್ಜಾರ್ ವಾರ್ ಆನ್ ರೇಪ್ (WAR) ಸಂಸ್ಥೆಯ ವರದಿಯನ್ನು ಪ್ರಸ್ತಾಪ ಮಾಡಿದ್ದಾರೆ..
ತನ್ನ ಮನೆಯವರ ಕಾಮದಾಸೆಗೆ ಹೆಣ್ಣು ಮಕ್ಕಳು ಮದುವೆಗೂ ಮುಂಚೆಯೇ ಗರ್ಭ ಧರಿಸುತ್ತಾರೆ.. ಆದರೂ ಆ ಹೆಣ್ಣು ಮಕ್ಕಳು ಪೊಲೀಸರಿಗೆ ದೂರು ಕೊಡುವುದಿಲ.. ವೈದ್ಯರ ಬಳಿ ಹೋಗಿ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ.. ತಾಯಿ ಮುಂದೆಯೇ ತನ್ನ ಅಪ್ಪನೇ ಮಗಳ ಮೇಲೆ ಅತ್ಯಾಚಾರ ಮಾಡಿದರೂ, ತಾಯಿ ನೋಡಿ ನೋವು ನುಂಗಿಕೊಂಡು ಸುಮ್ಮನಿರುತ್ತಾಳೆ.. ಅತ್ಯಾಚಾರ ಆಗುತ್ತಿದ್ದರೂ ಭಯದಿಂದ ಪ್ರತಿಭಟಿಸುವುದಿಲ್ಲ.. ಈ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ ಎಂದು ಆಘಾತಕಾರಿ ವಿಚಾರವನ್ನು ಪಾಕಿಸ್ತಾನದ ಸಂಸದೆ ಹೇಳಿಕೊಂಡಿದ್ದಾರೆ..