International

ಉಕ್ರೇನ್‌ ಹಾಗೂ ರಷ್ಯಾ ಸೇನಾ ಸಾಮರ್ಥ್ಯ ಎಷ್ಟು..?; ಯಾರ ಸೇನೆ ಪ್ರಾಬಲ್ಯವಿದೆ..?

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದೆ. ಆದ್ರೆ ಸೇನಾ ಸಾಮರ್ಥ್ಯದಲ್ಲಿ ಸಾಕಷ್ಟು ಪ್ರಾಬಲ್ಯವಿರುವ ರಷ್ಯಾ, ಉಕ್ರೇನ್‌ನ ಹಲವು ನಗರಗಳ ಮೇಲೆ ದಾಳಿ ನಡೆಸುತ್ತಿದೆ. ಇತ್ತ ಉಕ್ರೇನ್‌ ಕೂಡಾ ನಾವು ರಷ್ಯಾಗೆ ತಲೆಬಾಗೋದಿಲ್ಲ. ನಾವೂ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳುತ್ತಿದೆ. ಹಾಗಾದ್ರೆ, ರಷ್ಯಾ ಹಾಗೂ ಉಕ್ರೇನ್‌ ಸೇನಾ ಸಾಮರ್ಥ್ಯ ಎಷ್ಟಿದೆ ನೋಡೋಣ ಬನ್ನಿ.

ರಷ್ಯಾ ಸೇನಾ ಸಾಮರ್ಥ್ಯ

೧. ಎಲ್ಲಾ ಸೇನಾ ವಿಭಾಗದಲ್ಲಿ 8.5 ಲಕ್ಷ ಸೈನಿಕರಿದ್ದಾರೆ
೨. ರಷ್ಯಾದ ಬಳಿ ಒಟ್ಟು 12,500 ಸೇನಾ ಟ್ಯಾಂಕರ್‌ಗಳಿವೆ
೩. 30,000ಕ್ಕೂ ಹೆಚ್ಚು ಸಶಸ್ತ್ರ ವಾಹನಗಳು ರಷ್ಯಾ ಬಳಿ ಇವೆ
೪. 14 ಸಾವಿರಕ್ಕೂ ಅಧಿಕ ಫಿರಂಗಿಗಳು ರಷ್ಯಾ ಬಳಿ ಇವೆ
೫. 600ಕ್ಕೂ ಹೆಚ್ಚು ಬೃಹತ್‌ ನೌಕಾ ವಾಹನಗಳಿವೆ
೬. 70 ಜಲಾಂತರ್ಗಾಮಿಗಳು ರಷ್ಯಾ ಬಳಿ ಇವೆ
೭. ರಷ್ಯಾ ಬಳಿ 4,100 ಯುದ್ಧ ವಿಮಾನಗಳಿವೆ
೮. 722 ಫೈಟರ್‌ ಜೆಟ್‌ಗಳು ರಷ್ಯಾ ಬಳಿ ಇವೆ

ಉಕ್ರೇನ್‌ ಬಳಿ ಇರುವ ಸೇನಾ ಸಾಮರ್ಥ್ಯ

೧. ಉಕ್ರೇನ್‌ ಬಳಿ ಕೇವಲ 2.50 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಇದ್ದಾರೆ
೨. ಉಕ್ರೇನ್‌ ಕೇವಲ 2,600 ಸೇನಾ ಟ್ಯಾಂಕ್‌ಗಳನ್ನು ಹೊಂದಿದೆ
೩. ಉಕ್ರೇನ್ 12,000 ಸಶಸ್ತ್ರ ವಾಹನಗಳನ್ನು ಮಾತ್ರ ಹೊಂದಿದೆ
೪. ಉಕ್ರೇನ್ ಬಳಿ ಕೇವಲ 3,000 ಫಿರಂಗಿಗಳಿವೆ
೫. ಕೇವಲ 30 ಬೃಹತ್ ನೌಕಾ ವಾಹನಗಳನ್ನು ಉಕ್ರೇನ್ ಹೊಂದಿದೆ
೬. ಉಕ್ರೇನ್ ಬಳಿ ರಷ್ಯಾ ಹೊಂದಿರುವಂತಹ ಶಕ್ತಿಶಾಲಿ ಜಲಾಂತರ್ಗಾಮಿ ಒಂದೂ ಕೂಡ ಇಲ್ಲ
೭. ಉಕ್ರೇನ್‌ ಬಳಿ ಕೇವಲ 318 ಯುದ್ಧ ವಿಮಾನಗಳು ಮಾತ್ರ ಇವೆ
೮. ಉಕ್ರೇನ್‌ ಹೊಂದಿರೋದು ಕೇವಲ 69 ಫೈಟರ್‌ ಜೆಟ್‌ಗಳು

Share Post