International

ಉಕ್ರೇನ್‌ ಮೇಲೆ ಹಿಡಿತ ಸಾಧಿಸಲು ರಷ್ಯಾದಿಂದ ತ್ರಿಷೂಲ ತಂತ್ರ: ಉಕ್ರೇನ್‌ಗೆ ದಿಗ್ಭಂಧನ

Russia/Ukraine War: ಉಕ್ರೇನ್ ಮೇಲೆ ಹಿಡಿತ ಸಾಧಿಸಲು ರಷ್ಯಾ ‘ತ್ರಿಶೂಲ ತಂತ್ರ’ವನ್ನು ಅನುಸರಿಸುತ್ತಿದೆ.   ಈಗಾಗಲೇ ರಷ್ಯಾ ಸೇನಾ ಪಡೆಗಳು ಉಕ್ರೇನ್ ಅನ್ನು ಮೂರು ಕಡೆಯಿಂದ ಸುತ್ತುವರಿದಿದೆ ಎನ್ನಲಾಗಿದೆ ಭೂ, ವಾಯು ಹಾಗೂ ಜಲ ದಿಗ್ಭಂಧನ ಹಾಕಲು ಕಸರತ್ತು ನಡೆಸಿದೆ ಎನ್ನಲಾಗ್ತಿದೆ. ರಷ್ಯಾದ ಫೈಟರ್ ಜೆಟ್‌ಗಳು ಉಕ್ರೇನ್‌ಗೆ ಉಸಿರಾಡಲು ಬಿಡದೆ ಉಕ್ರೇನಿಯನ್ ವಾಯುನೆಲೆಗಳು ಮತ್ತು ವಿಮಾನ ನಿಲ್ದಾಣಗಳ ಮೇಲೆ ದಾಳಿ ಮಾಡುತ್ತಿವೆ. ವಿದ್ಯುತ್ ವ್ಯವಸ್ಥೆಯೂ ಅಲ್ಲಲ್ಲಿ ಕಡಿತಗೊಂಡಿದೆ. ರಷ್ಯಾದ ಸಾವಿರಾರು ಅರೆಸೇನಾಪಡೆಗಳು ಈಗಾಗಲೇ ಉಕ್ರೇನ್ ಭೂಪ್ರದೇಶಕ್ಕೆ ಬಂದಿಳಿದಿವೆ.

ಮತ್ತೊಂದೆಡೆ, ರಷ್ಯಾದ ಟ್ಯಾಂಕ್‌ಗಳು ಮತ್ತು ಮಿಲಿಟರಿ ವಾಹನಗಳು ಗಡಿಯನ್ನು ದಾಟಿ ಉಕ್ರೇನ್‌ಗೆ ಕೀವ್‌ನತ್ತ ಸಾಗುತ್ತಿವೆ. ಮತ್ತೊಂದೆಡೆ ರಷ್ಯಾದ ನೌಕಾಪಡೆ ಕೂಡ ಈಗಾಗಲೇ ಪ್ರತಿದಾಳಿಯನ್ನು ಎದುರಿಸಲು ಸಿದ್ಧವಾಗಿದೆ.  ಈಗಾಗಲೇ ಯುದ್ಧ ತಂತ್ರಗಳೊಂದಿಗೆ ರಷ್ಯಾ ನೌಕಾಪಡೆ ಯುದ್ಧ ಮಾಡಲು ಸನ್ನದ್ದವಾಗಿದೆ.

ದಿನದಿಂದ ದಿನಕ್ಕೆ ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಉಲ್ಬಣಗೊಂಡು ಯುದ್ಧಕ್ಕೆ ಕಾರಣವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ರಷ್ಯಾದ ನಿಲುವನ್ನು ವಿರೋಧಿಸುತ್ತಿದೆ. ಈ ನಡುವೆ ಉಕ್ರೇನ್‌ನಲ್ಲಿ ಯುದ್ಧದ ಕಾವು ಹೆಚ್ಚಾಗತೊಡಗಿದೆ.  ಯುದ್ಧ ಟ್ಯಾಂಕರ್‌ಗಳು, ಫಿರಂಗಿಗಳು, ಮದ್ದುಗುಂಡುಗಳು, ವಾಯು ಶಕ್ತಿಯಂತಹ ಎಲ್ಲಾ ಭದ್ರತಾ ಸಂಪನ್ಮೂಲಗಳೊಂದಿಗೆ ರಷ್ಯಾ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದೆ.

ಉಕ್ರೇನ್ ಸುಮಾರು 1.30,000 ರಷ್ಯಾದ ಸೈನಿಕರಿಂದ ಸುತ್ತುವರಿದಿದೆ. ಪುಟಿನ್ ತನ್ನ ಶೇಕಡಾ 70 ರಷ್ಟು ಸೇನಾ ಪಡೆಗಳನ್ನು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಬಳಸಿದ್ದಾರೆ.  ಉಕ್ರೇನ್‌ನಲ್ಲಿ ಎರಡು ಮಿಲಿಯನ್ ಸೈನ್ಯದೊಂದಿಗೆ ರಷ್ಯಾ ನಗರಗಳನ್ನು ಆಕ್ರಮಿಸುತ್ತಿವೆ, ಉಕ್ರೇನ್ ರಾಜಧಾನಿ ಇತರ ನಗರಗಳ ಮೇಲೆ ದಾಳಿ ಮಾಡುತ್ತಿದೆ. ಉಕ್ರೇನ್‌ಗೆ ಸಹಾಯ ಮಾಡಲು ನ್ಯಾಟೋ ಪಡೆಗಳು ಸಿದ್ಧವಾಗಿವೆ.

Share Post