ರಸ್ತೆಯಲ್ಲಿ ಹೋಗುತ್ತಿದ್ದಾಗ ಹಣ ಸಿಕ್ಕರೆ ಅದು ಯಾವುದರ ಸಂಕೇತ..?; ಶಾಸ್ತ್ರ ಈ ಬಗ್ಗೆ ಏನು ಹೇಳುತ್ತೆ..?
ಬೆಂಗಳೂರು; ನಾವು ಹೆಚ್ಚಾಗಿ ನಂಬಿಕೆಗಳ ಮೇಲೆ ಬದುಕುತ್ತಿದ್ದೇವೆ.. ಭಾರತೀಯರಾದ ನಮ್ಮಲ್ಲಿ ಬಹುತೇಕ ಶಾಸ್ತ್ರ, ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುತ್ತೇವೆ.. ಶಾಸ್ತ್ರ ಹೇಳಿದಂತೆಯೇ ನಡೆಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.. ಬಹುತೇಕ ಸಂದರ್ಭದಲ್ಲಿ ನಾವು ನಂಬಿದಂತೆಯೇ ನಡೆಯುತ್ತದೆ ಕೂಡಾ.. ಅಂದಹಾಗೆ, ರಸ್ತೆಯಲ್ಲಿ ಹೋಗುವಾಗ ಕೆಲವೊಮ್ಮೆ ನಮಗೆ ಹಣ ಸಿಗುತ್ತದೆ.. ಅದು ಯಾವುದರ ಸಂಕೇತ ಎಂಬುದು ಹೆಚ್ಚಿನ ಜನಕ್ಕೆ ಗೊತ್ತಿಲ್ಲ.. ರಸ್ತೆಯಲ್ಲಿ ಹಣ ಸಿಕ್ಕಿದರೆ ಕೆಲವರು ದೇವರ ಹುಂಡಿಗೆ ಹಾಕುತ್ತಾರೆ.. ಕೆಲವರು ಅದನ್ನು ಖರ್ಚು ಮಾಡಿಕೊಳ್ಳುತ್ತಾರೆ.. ಆದ್ರೆ ಸಿಕ್ಕ ಹಣ ಏನು ಮಾಡಬೇಕು, ಹೀಗೆ ರಸ್ತೆಯಲ್ಲಿ ಹಣ ಸಿಕ್ಕರೆ ಅದು ಯಾವುದರ ಸಂಕೇತ..? ಈ ಬಗ್ಗೆ ತಿಳಿಯೋಣ ಬನ್ನಿ..
ಇದನ್ನೂ ಓದಿ; ವರನ ಅಪ್ಪನಿಗೂ ವಧುವಿನ ತಾಯಿಗೂ ಪ್ರೇಮಾಂಕುರ!; ಮುಂದೇನಾಯ್ತು..?
ಶಾಸ್ತ್ರದ ಪ್ರಕಾರ ರಸ್ತೆಯಲ್ಲಿ ಸಿಗುವ ಹಣಕ್ಕೂ, ನಮ್ಮ ಮುಂದಿನ ಭವಿಷ್ಯಕ್ಕೂ ಸಂಬಂಧವಿದೆಯಂತೆ.. ಪದೇ ಪದೇ ನಮಗೆ ರಸ್ತೆಯಲ್ಲಿ ಹಣ ಸಿಗುತ್ತಿದ್ದರೆ ಅದು ಶುಭ ಸಂಕೇತ ಎಂದು ಶಾಸ್ತ್ರ ಹೇಳುತ್ತದೆ.. ರಸ್ತೆಯಲ್ಲಿ ಹಣ ಸಿಕ್ಕರೆ ಮುಂದೆ ನಮಗೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಅಂತ ಶಾಸ್ತ್ರ ಹೇಳುತ್ತದೆ.. ವ್ಯಾಪಾರದಲ್ಲಿ ಪ್ರಗತಿ, ಹಿಡಿದ ಕೆಲಸ ಸುಗಮವಾಗಿ ನಡೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ.. ಯಾವುದಾದರೂ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಹಣ ಸಿಕ್ಕರೆ ಹಿಡಿದ ಕೆಲಸ ಆಗುತ್ತದೆ ಎಂದೂ ಹೇಳಲಾಗುತ್ತದೆ..
ಇದನ್ನೂ ಓದಿ; Daily Horoscope; ಈ ರಾಶಿಯವರು ಇವತ್ತು ದೂರ ಪ್ರಯಾಣ ಮಾಡಲೇಬಾರದು..!
ರಸ್ತೆಯಲ್ಲಿ ಹಣ ಸಿಗೋದು ಮಂಗಳಕರ ವಿಚಾರ.. ಹಾಗೆ ಸಿಕ್ಕ ಹಣವನ್ನು ಖರ್ಚು ಮಾಡದೆ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜಿಸುವುದು ಅಥವಾ ಹತ್ತಿರದ ದೇವಸ್ಥಾನದ ಹುಂಡಿಗೆ ಹಾಕಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಕೆಲ ಜ್ಯೋತಿಷ್ಯರು ಹೇಳುತ್ತಾರೆ..