CrimeDistricts

ಪಿಎಸ್‌ಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು!

ಕಾರವಾರ; ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಕಿರಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರದ ಹನುಮಾನ್‌ ಗಲ್ಲಿ ನಿವಾಸಿ ಭಾಸ್ಕರ್‌ ಬೋಂಡೆಲ್ಕರ್‌ ಸಾವನ್ನಪ್ಪಿದವರು..

ಪಿಎಸ್‌ಐ ಬಸವರಾಜು ವಿರುದ್ಧ ಭಾಸ್ಕರ್‌ ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು.. ಇದರಿಂದಾಗಿ ಪಿಎಸ್‌ಐ ಬಸವರಾಜು ನಿರಂತರವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.. ಈ ಕಾರಣದಿಂದ ಭಾಸ್ಕರ್‌ ಅವರು ಜೋಯಿಡಾದಲ್ಲಿ ಕೆಲಸ ಹುಡಿಕೊಂಡು ಅಲ್ಲಿಗೆ ಶಿಫ್ಟ್‌ ಆಗಿದ್ದರು.. ಇದರ ನಡುವೆ ಜಮೀನು ವಿಚಾರವಾಗಿ ಭಾಸ್ಕರ್‌ ಮಾವನಿಗೆ ಪೊಲೀಸರು ನೋಟಿಸ್‌ ಕೊಟ್ಟಿದ್ದರು.. ನನ್ನ ಕಾರಣದಿಂದಲೇ ಮಾವನಿಗೆ ನೋಟಿಸ್‌ ಕೊಟ್ಟಿದ್ದಾರೆ ಎಂದು ಭಾವಿಸಿದ ಭಾಸ್ಕರ್‌ ಕುಡಿದು ಪೊಲೀಸ್‌ ಠಾಣೆಗೆ ಹೋಗಿ ನೋಟಿಸ್‌ ಬಗ್ಗೆ ಪ್ರಶ್ನೆ ಮಾಡಿದ್ದರು..

ಈ ವೇಳೆ ಪೊಲೀಸರು ಭಾಸ್ಕರ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.. ಇದರಿಂದಾಗಿ ನೊಂದ ಭಾಸ್ಕರ್‌ ಪೊಲೀಸ್‌ ಠಾಣೆ ಎದುರು ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.. ಕೂಡಲೇ ಪೊಲೀಸರು ಬೆಂಕಿ ನಂದಿಸಿ, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿದ್ದರು..

ಆದ್ರೆ ಘಟನೆ ನಡೆದು ಮೂರು ದಿನದ ನಂತರ ಭಾಸ್ಕರ್‌ ಸಾವನ್ನಪ್ಪಿದ್ದಾರೆ..

 

Share Post