CrimeInternational

ಜಪಾನ್‌ನಲ್ಲಿ ಅಗ್ನಿದುರಂತ: 27ಮಂದಿ ಸಜೀವ ದಹನ

ಜಪಾನ್:‌ ಕಟ್ಟಡವೊಂದರಲ್ಲಿ ವ್ಯಾಪಿಸಿದ ಅಗ್ನಿದುರಂತಕ್ಕೆ 27 ಮಂದಿ ಸಾವನ್ನಪ್ಪಿದ ಘಟನೆ ಜಪಾನ್‌ ಒಸಾಕಾ ನಗರದಲ್ಲಿ ನಡೆದಿದೆ. ಇನ್ನು 70ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ್ರು. ಕಿಟಾಸಿಂಚಿ ಎಂಟರ್‌ಟೈನ್‌ಮೆಂಟ್‌ ಏರಿಯಾದಲ್ಲಿರುವ 8ಬಹುಮಹಡಿ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಬಿದ್ದಿದ್ದು, 28ಮಂದಿಯಲ್ಲಿ 27ಜನ ಉಸಿರಾಡದೇ ಅಸುನೀಗಿದ್ದಾರೆ. ಈ ಕಟ್ಟಡದಲ್ಲಿ ಇಂಟರ್ನಲ್‌ ಮೆಡಿಸಿನ್‌ ಕ್ಲಿನಿಕ್‌, ಇಂಗ್ಲಿಷ್‌ ಪಾಠಶಾಲೆ, ಇತರೆ ವ್ಯಾಪಾರ ವಹಿವಾಟು ಸಂಸ್ಥೆಗಳಿದ್ದವು ಎನ್ನಲಾಗಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಅಲ್ಲಿದ್ದವರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಗ್ನಿದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಅಲ್ಲಿನ ಪೊಲೀಸ್‌ ಮೂಲಗಳು ತಿಳಿಸಿವೆ.

Share Post