ಅಮೆರಿಕದಲ್ಲಿ ಗುಂಡಿನ ದಾಳಿ; ಐದು ಮಂದಿ ದುರ್ಮರಣ
ನ್ಯೂಯಾರ್ಕ್; ಅಮರಿಕದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಆಗಂತುಕರು ಗುಂಡಿನ ದಾಳಿ ನಡೆಸುವುದು ಆಗಾಗ ನಡೆಯುತ್ತಲೇ ಇರುತ್ತವೆ. ನಿನ್ನೆ ಕೂಡಾ ಇಂತಹ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಪೊಲೀಸರ ಗುಂಡಿಗೆ ಬಂದೂಕುದಾರಿಯೂ ಸಾವನ್ನಪ್ಪಿದ್ದಾನೆ.
ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ಬ್ಯಾಂಕ್ ಒಂದರಲ್ಲಿ ಈ ಕೃತ್ಯ ಎಸಗಲಾಗಿದೆ. ಬ್ಯಾಂಕ್‌ನಲ್ಲಿ ಹಲವಾರು ಗ್ರಾಹಕರಿದ್ದರು. ಈ ವೇಳೆ ಆಗಮಿಸಿದ ಬಂದೂಕುದಾರಿ ಜನರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಲೂಯಿಸ್ ವಿಲ್ಲೆ ಮೆಟ್ರೋ ಪೊಲೀಸ್ ಮುಖ್ಯಸ್ಥ ಜಾಕ್ವೆಲಿನ್ ಗ್ವಿನ್ ಅವರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಪೊಲೀಸರ ಗುಂಡಿಗೆ ಆರೋಪಿ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.