HistoryLifestyle

ಬಿಸಿ ನೀರಲ್ಲಿ ತುಪ್ಪ ಬೆರೆಸಿ ಕುಡಿದರೆ ಇಷ್ಟೊಂದು ಪ್ರಯೋಜನಗಳಿವೆಯಾ..?

ತುಪ್ಪ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಇದು ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.. ಆಯುರ್ವೇದದಲ್ಲಿ ಇದನ್ನು ಔಷಧಿಯಾಗಿ ಕೂಡಾ ಬಳಸುತ್ತಾರೆ.. ಪ್ರತಿನಿತ್ಯ ನಿಯಮಿತವಾಗಿ ತುಪ್ಪವನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.. ಅನೇಕ ಆರೋಗ್ಯ ಸಮಸೆಯಗಳು ಸುಧಾರಿಸುತ್ತವೆ.. ಜೊತೆಗೆ ನಮ್ಮ ಚರ್ಮ ಕಾಂತಿಯುತವಾಗುತ್ತಾ ಬರುತ್ತದೆ..

ಇನ್ನು ಉರುಗು ಬೆಚ್ಚಗಿನ ನೀರಿನಲ್ಲಿನ ತುಪ್ಪ ಬೆರೆಸಿ ಕುಡಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ.. ದಿನವೂ ಇದನ್ನು ರೂಢಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡೂ ವೃದ್ಧಿಯಾಗುತ್ತವೆ.. ಅದ್ರಲ್ಲೂ ಕೂಡಾ ದೇಸಿ ಹಸುವಿನ ತುಪ್ಪ ಉಪಯೋಗಿಸುವುದು ತುಂಬಾ ಒಳ್ಳೆಯದು..

ದೇಸಿ ಹಸುವಿನ ತುಪ್ಪದಲ್ಲಿ ವಿಟಮಿನ್ ಎ, ಡಿ ಮತ್ತು ಇ ಇರುತ್ತವೆ.. ಹೀಗಾಗಿ ತುಪ್ಪ ತಿನ್ನುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಅನೇಕ ಸೋಂಕುಗಳು ಬರದಂತೆ ತಡೆಯುತ್ತದೆ.. ಹಸುವಿನ ತುಪ್ಪದಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯವನ್ನು ಕೂಡಾ ಹೆಚ್ಚಿಸುತ್ತವೆ.. ಚರ್ಮವನ್ನು ಮೃದುವಾಗಿ ಮಾಡುವುದರ ಜೊತೆಗೆ, ಹೊಳೆಯುವಂತೆ ಮಾಡುತ್ತದೆ.. ವಯಸ್ಸಾಗುತ್ತಿದ್ದರೂ ಹಾಗೆ ಕಾಣುವುದಿಲ್ಲ.. ತುಪ್ಪ ಸೇವನೆಯಿಂದ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.. ಮೆದುಳು ಚುರುಕಾಗಿ, ನಮ್ಮ ಕೆಲಸ ಕಾರ್ಯಗಳು ಕೂಡಾ ಸರಾಗವಾಗಿ ನಡೆಯುತ್ತವೆ.. ನಮ್ಮಲ್ಲಿ ಹುಮ್ಮಸ್ಸು ಹೆಚ್ಚಾಗುತ್ತದೆ..

ಹಸುವಿನ ತುಪ್ಪದಲ್ಲಿ ಬ್ಯುಟರಿಕ್ ಆಮ್ಲವಿದೆ. ಇದು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬನ್ನು ಕರಗಿಸಲು ಸಹ ಸಹಾಯ ಮಾಡುತ್ತದೆ. ಜೊತೆಗೆ ನಮ್ಮ ಕರುಳನ್ನು ತುಪ್ಪವು ಆರೋಗ್ಯವಾಗಿರಿಸುತ್ತದೆ..

Share Post