ಉದ್ಯಮಿಯನ್ನು ದಿಢೀರ್ ಅಂತ ಎಡರನೇ ಮದುವೆಯಾದ ನಟಿ ಅಮಲಾ ಪೌಲ್
ಮುಂಬೈ; ಬಹುಭಾಷಾ ತಾರೆ ಅಮಲಾ ಪೌಲ್ ಎರಡನೇ ವಿವಾಹವಾಗಿದ್ದಾರೆ. ಉದ್ಯಮಿ ಜಗತ್ ದೇಸಾಯಿ ಎಂಬುವವರು ಒಂದು ವಾರದ ಹಿಂದೆಯಷ್ಟೇ ಅಮಲಾ ಪೌಲ್‌ಗೆ ಲವ್ ಪ್ರಪೋಸ್ ಮಾಡಿದ್ದರು. ಇದಾದ ಒಂದು ವಾರದಲ್ಲೇ ಕೊಚ್ಚಿಯಲ್ಲಿ ಅಮಲಾ ಪೌಲ್ ಅವರು ಜಗತ್ ದೇಸಾಯಿ ಅವರ ಜೊತೆ ಮದುವೆಯಾಗಿದ್ದಾರೆ.
ಅಮಲಾ ಪೌಲ್ ಅವರು, ಕನ್ನಡದಲ್ಲೂ ನಟಿಸಿದ್ದಾರೆ. ಇವರು 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಲವ್ ಮಾಡಿ ಮದುವೆಯಾಗಿದ್ದರು. ಆದ್ರೆ ಮೂರು ವರ್ಷದಲ್ಲೇ ಇಬ್ಬರೂ ಬೇರೆಯಾಗಿ ಡಿವೋರ್ಸ್ ತೆಗೆದುಕೊಂಡಿದ್ದರು. ಇದೀಗ ಅಮಲಾ ಪೌಲ್ ಅವರು ಉದ್ಯಮಿ ಜಗತ್ ದೇಸಾಯಿ ಅವರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.