Health

ಮಹಿಳೆಗೆ ಕೋವಿಡ್‌ ದೃಢ – ವಿಮಾನದ ಟಾಯ್ಲೆಟ್‌ನಲ್ಲೇ ಐಸೋಲೇಟ್‌

ನ್ಯೂಯಾರ್ಕ್‌ : ವಿಮಾನದಲ್ಲಿ ಚಲಿಸುತ್ತಿದ್ದ ಮಹಿಳೆಗೆ ಮಾರ್ಗ ಮಧ್ಯೆಯೇ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಮಹಿಳೆಯನ್ನು ವಿಮಾನದ ಟಾಯ್ಲೆಟ್‌ನಲ್ಲಿಯೇ ೩ ಗಂಟೆಗಳ ಕಾಲ ಕ್ವಾರಂಟೈನ್‌ ಮಾಡಲಾಗಿದೆ. ಮಿಚಿಗನ್‌ ಮೂಲದ ಶಿಕ್ಷಕಿ ಮಾರಿಸಾ ಎಂಬ ಮಹಿಳೆ ಚಿಕಾಗೋದಿಂದ ಐಸ್ಲ್ಯಾಂಡ್‌ಗೆ ತೆರಳುತ್ತಿದ್ದರು.

ವಿಮಾನ ಚಲಿಸುವ ವೇಲೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ಕೂಡಲೆ ರ್ಯಾಪಿಡ್‌ ಟೆಸ್ಟ್‌ ಮಾಡಲಾಗಿದೆ. ಟೆಸ್ಟ್‌ನಲ್ಲಿ ಪಾಸಿಟಿವ್‌ ವರದಿಯಾಗಿದೆ. ಕೂಡಲೇ ಅವರನ್ನು ವಿಮಾನದ ಟಾಯ್ಲೆಟ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ವಿಮಾನ ಪ್ರಯಾಣಕ್ಕೂ ಮುನ್ನ ಆರ್‌ಟಿ-ಪಿಸಿಆರ್‌ ಹಾಗೂ ಐದು ಬಾರಿ ರ‍್ಯಾಪಿಡ್‌ ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ನೆಗೆಟಿವ್‌ ಬಂದಿತ್ತು. ಆದರೆ ಪ್ರಯಾಣದ ವೇಳೆ ಪಾಸಿಟಿವ್‌ ಬಂದಿದೆ ಎಂದು ಮಹಿಳೆ ಹೇಳಿದ್ದಾರೆ.

ಮಾರಿಸಾ ಕೋವಿಡ್‌ನ ಎರಡು ಡೋಸ್‌ ಸಮೇತ ಬೂಸ್ಟರ್‌ ಡೋಸ್‌ ಕೂಡ ತೆಗೆದುಕೊಂಡಿದ್ದಾರೆ. ಆದರೆ ಲಸಿಕೆ ಪಡೆಯದವರೊಟ್ಟಿಗೆ ಸಂಪರ್ಕ ಬೆಳೆಸಿದ್ದೇ ಇದಕ್ಕೆ ಕಾರಣ ಎಂದಿದ್ದಾರೆ.

Share Post