Lifestyle

ಬಿಸಿಬಿಸಿಯಾದ ಬಿಸಿಬೇಳೆ ಬಾತ್‌ ಮಾಡುವ ವಿಧಾನ

ದಕ್ಷಿಣ ಭಾರತದ ಸಾಂಪ್ರದಾಯಿಕ ಅಡುಗೆಯಾಗಿರುವ ಬಿಸಿಬೇಳೆ ಬಾತ್ ಮಾಡಲು ವಿವಿಧ ತರಕಾರಿ ಹಾಗೂ ಬೇಳೆಯನ್ನು ಉಪಯೋಗಿಸುವುದರಿಂದ ಈ ರೆಸಿಪಿಯು ಖಂಡಿತವಾಗಿಯೂ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸುತ್ತದೆ. ಈಗಂತೂ ಬಿಸಿಬೇಳೆ ಬಾತ್ ಮಸಾಲೆ ಪುಡಿ ಅಂಗಡಿಗಳಲ್ಲಿ ಸಿಗುವುದರಿಂದ ಇದನ್ನು ತಯಾರಿಸುವುದು ಇನ್ನೂ ಸುಲಭದ ಕೆಲಸ. ಇದನ್ನು ಬೆಳಗಿನ ತಿಂಡಿ ಮಾತ್ರವಲ್ಲದೆ ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೂ ಬಡಿಸಬಹುದು. ಹಾಗಿದ್ದರೆ ಬಿಸಿಬಿಸಿಯಾದ ಬಿಸಿಬೇಳೆ ಬಾತ್ ಮಾಡುವುದನ್ನು ವಿವರವಾಗಿ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು
ನೀರು – ೬ ಕಪ್
ನೆನೆಸಿದ ತೊಗರಿಬೇಳೆ – ಅರ್ಧ ಕಪ್
ಅಕ್ಕಿ – ೧ ಕಪ್
ನವಿಲುಕೋಸು, ಹೆಚ್ಚಿದ್ದು – ೧
ಬೀನ್ಸ್, ಹೆಚ್ಚಿದ್ದು – ೫ ರಿಂದ ೬
ಕ್ಯಾರೆಟ್, ಹೆಚ್ಚಿದ್ದು – ೧
ಹಸಿರು ಬಟಾಣಿ – ಅರ್ಧ ಕಪ್
ಆಲೂಗಡ್ಡೆ, ಹೆಚ್ಚಿದ್ದು – ೧
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – ೧ ದೊಡ್ಡ ಚಮಚ
ಪ್ರೆಶರ್ ಕುಕ್ಕರ್ಗೆ ೬ ಕಪ್ ನೀರು ಹಾಕಿ ಕುದಿಸಿ. ನಂತರ ಅರ್ಧ ಕಪ್ ತೊಗರಿಬೇಳೆ(೧೫ ನಿಮಿಷ ನೀರಿನಲ್ಲಿ ನೆನೆಸಿಟ್ಟದ್ದು) ಹಾಗೂ ೧ ಕಪ್ ಅಕ್ಕಿಯನ್ನು ತೊಳೆದು ಹಾಕಿ ಕಲಕಿ.೧ ಹೆಚ್ಚಿದ ನವಿಲುಕೋಸು, ೫ ರಿಂದ ೬ ಹೆಚ್ಚಿದ ಬೀನ್ಸ್, ೧ ಹೆಚ್ಚಿದ ಕ್ಯಾರೆಟ್, ಅರ್ಧ ಕಪ್ ಹಸಿರು ಬಟಾಣಿ, ಹೆಚ್ಚಿದ ೧ ಆಲೂಗಡ್ಡೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ೧ ದೊಡ್ಡ ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಕಿ, ಕುಕ್ಕರ್‌ ನಲ್ಲಿ ಎರಡು ವಿಷಲ್‌ ಮಾಡಿಕೊಳ್ಳಬೇಕು. ನಂತರ ಪಾತ್ರೆಗೆ ೬ ರಿಂದ ೭ ಒಣ ಕೆಂಪುಮೆಣಸು, ಅರ್ಧ ಚಮಚ ಎಣ್ಣೆ ಹಾಕಿ ಗರಿಗರಿಯಾಗುವವರೆಗೂ ಹುರಿದು ತೆಗೆಯಿರಿ. ಅದಕ್ಕೆ ಬಿಸಿಬೇಳೆ ಬಾತ್‌ ಪೌಂಡರ್‌ ಹಾಕಿ ಮಿಕ್ಸ್‌ ಮಾಡಿ.

Share Post