ಬೆಂಕಿಗಾಹುತಿಯಾದ ಸರ್ಕಾರಿ ಬಸ್; ಘಟನೆಗೆ ಕಾರಣ ಏನು ಗೊತ್ತಾ..?
ಹೈದರಾಬಾದ್; ಹೈದರಾಬಾದ್‌ನಿಂದ ಅನಂತಪುರಕ್ಕೆ ಹೋಗುತ್ತಿದ್ದ ಆಂಧ್ರಪ್ರದೇಶದ ಸರ್ಕಾರಿ ಬಸ್‌ಗೆ ಬೆಂಕಿ ಬಿದ್ದು ಅವಾಂತರ ಸೃಷ್ಟಿಯಾಗಿದೆ.. ಮಹಬೂಬ್‌ನಗರ ಜಿಲ್ಲೆಯ ಬುರೆಡ್ಡಿಪಲ್ಲಿ ಬಳಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಬಸ್ ಸುಟ್ಟು ಭಸ್ಮವಾಗಿದೆ.. ಘಟನೆಯಲ್ಲಿ 15 ಕ್ಕೂ ಹೆಚ್ಚು ಪ್ರಯಾಣಿಕರು ಸುಟ್ಟು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಇದನ್ನೂ ಓದಿ; ದಕ್ಷಿಣ ಕನ್ನಡದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಕತ್ರಿನಾ ಕೈಫ್ ಭೇಟಿ
ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ದುರ್ಘಟನೆ ನಡೆದಿದೆ.. ಎಪಿಎಸ್‌ಆರ್‌ಟಿ ಬಸ್ ಹೈದರಾಬಾದ್‌ನಿಂದ ಅನಂತಪುರಕ್ಕೆ ಬರುತ್ತಿತ್ತು.. ಈ ಬಸ್‌ನಲ್ಲಿ ಸುಮಾರು 36 ಮಂದಿ ಪ್ರಯಾಣ ಮಾಡುತ್ತಿದ್ದರು.. ಬುರೆಡ್ಡಿಪಲ್ಲಿ ಬಳಿ ವಾಹನವೊಂದು ಯೂಟರ್ನ್ ತೆಗೆದುಕೊಳ್ಳುತ್ತಿತ್ತು.. ಈ ವೇಳೆ ಬಸ್ ಆ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಸಾಲ ಹೆಚ್ಚಾಗಲು ಮನೆಯಲ್ಲಿನ ಈ ವಸ್ತುಗಳೇ ಕಾರಣ