Cinema

ಅರಮನೆ ಮೈದಾನದಲ್ಲಿ ಆರ್‌ ಆರ್‌ ಆರ್ ಸಿನಿಮಾ ಪ್ರೀ ರಿಲೀಸ್- ಇವೆಂಟ್‌, ಸಿಎಂ ಉದ್ಘಾಟನೆ

ಬೆಂಗಳೂರು:ಬಹು ನಿರೀಕ್ಷೆಯ ಸಿನಿಮಾ ಆರ್‌ ಆರ್‌‌ ಆರ್ ಸಿನಿಮಾ ಇನ್ನೇನು ೬ ದಿನ ಉಳಿದಿದೆ. ಹೊಸ ವರ್ಷ ಜನವರಿ ೭ ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಲಿದೆ. ಈಗಾಗಲೇ ಪೋಸ್ಟರ್‌ ಹಾಗೂ ಟ್ರೇಲರ್‌ ನಲ್ಲೇ ಧೂಳೆಬ್ಬಿಸಿದ ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ. ಅದರಲ್ಲೂ ರಾಜಮೌಳಿ ಸಿನಿಮಾ ಅಂದರೆ ಹೇಳಬೇಕಾ. ಅಭಿಮಾನಿಗಳಿಗಂತೂ ಹೊಸ ವರ್ಷಕ್ಕೆ ಹಬ್ಬವೇ ಇದ್ದಂಗೆ ಆಗುತ್ತದೆ. ಸದ್ಯ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಸಿನಿಮಾ ಕನ್ನಡದಲ್ಲಿ ರಿಲೀಸ್‌ ಆಗುತ್ತಿದ್ದರಿಂದ ಚಿತ್ರತಂಡ ಈಗಾಗಲೇ ಬೆಂಗಳೂರಿಗೆ ಬಂದು ಪ್ರಮೋಷನ್‌ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಲು ಆರ್‌ ಆರ್‌ ಚಿತ್ರತಂಡ ನಿರ್ಧರಿಸಿದೆ.
ಹೌದು ಜನವರಿ ೨ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ಸಿದ್ದತೆ ನಡೆಸಿದೆ. ಈ ಕಾರ್ಯಮದಲ್ಲಿ ಆರ್‌ಆರ್‌ಆರ್‌ ಇಡೀ ಚಿತ್ರ ತಂಡ ಭಾಗಿ ಆಗಲಿದೆ. ಜೊತೆಗೆ ಸ್ಯಾಂಡಲ್‌ವುಡ್‌ ಗಣ್ಯರು ಕೂಡ ಭಾಗಿ ಆಗಲಿದ್ದಾರೆ.ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಚಿತ್ರ ತಂಡ ಈ ವಿಚಾರವನ್ನು ಇನ್ನೂ ಅಧಿಕೃತಗೊಳಿಸಿಲ್ಲ. ಶೀಘ್ರದಲ್ಲೇ ಎಲ್ಲವನ್ನು ಅಧಿಕೃತವಾಗಿ ಮಾಹಿತಿ ನೀಡಲಿದೆ.

Share Post