DistrictsHealth

ಗ್ರಾಮದ 70ಕ್ಕೂ ಹೆಚ್ಚು ಜನರಿಗೆ ಜ್ವರ: ಕೇಳೋರಿಲ್ಲ ಕಾಡಂಚಿನ ಗ್ರಾಮಸ್ಥರ ಗೋಳು

ಚಾಮರಾಜನಗರ: ಕೆಲವೊಮ್ಮೆ ಸರ್ಕಾರ ಇದ್ದು ಇಲ್ಲದಂತೆ ವರ್ತಿಸುತ್ತದೆ ಎನ್ನುವುದಕ್ಕರ ಸೂಕ್ತ ಉದಾಹರಣೆಗೆ ಈ ಘಟನೆಯೇ ಸಾಕ್ಷಿ. ಆರೋಗ್ಯ ಸರಿಯಿಲ್ಲ ಎಂದರೆ ಕಾಡಿನಲ್ಲಿ 11ಕಿಮೀ ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಘಟನೆ ಬೇರೆಲ್ಲೂ ಅಲ್ಲ. ಬೆಂಗಳೂರಿಗೆ 136ಕಿ.ಲೋಮೀಟರ್‌ ದೂರದಲ್ಲಿರವ ಚಾಮರಾಜನಗರದ ಮಹದೇಶ್ವರ ಬೆಟ್ಟದ ದೊಡ್ಡಾಣೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿ ಇದು.

ಗ್ರಾಮದಲ್ಲಿ ಸುಮಾರು ಎಪ್ಪತ್ತಕ್ಕೂ ಅಧಿಕ ಮಂದಿ ಜ್ವರ, ಕೆಮ್ಮು, ಶೀತ, ಮೈ-ಕೈ ನೋವಿನಿಂದ ಬಳಲುತ್ತಿದ್ದಾರೆ. ಸರಿಯಾದ ಚಿಕಿತ್ಸೆ ಪಡೆಯಬೇಕು ಅಂದ್ರೆ 11ಕಿಮೀ ಡೋಲಿ ಕಟ್ಟಿಕೊಂಡು ಕಾಡಿನಲ್ಲಿ ನಡೆದು ಬರಬೇಕಾಗಿದೆ. ಆದರೆ ಡೋಲಿ ಕಟ್ಟಿಕೊಂಡು ಹೊತ್ತು ತರುವವರಿಗೂ ಜ್ವರ ಬಂದಿದ್ದು ಸೂಕ್ತ ಚಿಕಿತ್ಸೆಗಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಳ್ವಾಡಿಗೆ ಆಸ್ಪತ್ರೆಗೆ ಬರಲು ನಡೆದು ಬರುತ್ತಿದ್ದ ಮಹಿಳೆಯೊಬ್ಬರು ಸುಸ್ತಾಗಿ ಕಾಡಿನ ಮಧ್ಯದಲ್ಲೇ ಮಲಗಿದ್ದಾರೆ. ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಇಲ್ಲಿಗೆ ಸರಿಯಾದ ಬಸ್‌ ಸೌಲಭ್ಯ ಇಲ್ಲ. ಜೀಪ್‌ ಮೂಲಕ ವೈದ್ಯರನ್ನು ಗ್ರಾಮಕ್ಕೆ ಕಳಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಇಲ್ಲಿವರೆಗೂನ ಕೊರೊನಾ ಲಸಿಕೆ ಕೂಡ ಈ ಗ್ರಾಮದ ಜನರಿಗೆ ಹಾಕಿಲ್ಲವಂತೆ ಯಾವುದೇ ರಿತಿಯ ಅಭಿವೃದ್ಧಿ ಕಾಣದೆ ಹಿಂದುಳಿದಿದೆ. ಗರ್ಭಿಣಿ, ಮಕ್ಕಳು, ವೃದ್ಧರ ಪಾಡಂತೂ ಹೇಳತೀರದಾಗಿದೆ. ಕೂಡಲೇ ಗ್ರಾಮಕ್ಕೆ ವೈದ್ಯರನ್ನು ಕಳಿಸಿಕೊಡುವಂತೆ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ ಗ್ರಾಮಸ್ಥರು.

Share Post