ರಸ್ತೆ ಸೇತುವೆಯಡಿ ಹುಲಿಯ ಮೃತದೇಹ ಪತ್ತೆ; ಕೊಂದು ತಂದು ಇಲ್ಲಿ ಹಾಕಿದರಾ..?
ತುಮಕೂರು; ತುಮಕೂರು ಜಿಲ್ಲೆ ಗುಬ್ಬಿ ಸುತ್ತಮುತ್ತ ಹುಲಿ ಇರುವ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಇರಲಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಇಲ್ಲಿ ಹುಲಿಯ ಮೃತದೇಹವೊಂದು ಪತ್ತೆಯಾಗಿದೆ. ಚೇಳೂರು ಹೋಬಳಿ ಕುಂಟರಾಮನಹಳ್ಳಿ–ಚಿಕ್ಕ ಹೆಡಿಗೆಹಳ್ಳಿ ಮಾರ್ಗದ ರಸ್ತೆ ಸೇತುವೆ ಅಡಿಯಲ್ಲಿ ಹುಲಿಯ ಮೃತದೇಹ ಸಿಕ್ಕಿದೆ. ಬೇರಡೆ ಕೊಂದು ಇಲ್ಲಿ ಹುಲಿಯ ದೇಹ ತಂದು ಹಾಕಿರಬಹುದು ಎಂದು ಶಂಕಿಸಲಾಗಿದೆ.
ಮಂಚಲದೊರೆ ಸಮೀಪ ಕೃಷ್ಣಕಲ್ ಗುಟ್ಟೆ ಅರಣ್ಯ ಪ್ರದೇಶವಿದೆ. ಇಲ್ಲಿ ಸಾಕಷ್ಟು ಗುಹೆಗಳಿವೆ. ಇಲ್ಲಿ ಹಲವಾರು ಕಾಡುಪ್ರಾಣಿಗಳಿವೆ. ಆದ್ರೆ ಹುಲಿ ಕಾಣಿಸಿಕೊಂಡಿರಲಿಲ್ಲ. ಮೇಲ್ನೋಟಕ್ಕೆ ಹುಲಿ ಸಹಜವಾಗಿಯೇ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆಯಾದರೂ, ಕೊಂದಿರುವ ಬಗ್ಗೆಯೂ ಅನುಮಾನವಿದೆ.