ಐಸ್‌ಕ್ರೀಮ್‌ನಲ್ಲಿ ಮನುಷ್ಯನ ಹೆಬ್ಬೆರಳು ಪತ್ತೆ; ತಿನ್ನುತ್ತಿದ್ದ ಮಹಿಳೆಗೆ ಶಾಕ್!
ಮುಂಬೈ; ತಿನ್ನೋ ಆಹಾರದಲ್ಲಿ ಜಿರಳೆಓ, ಹುಳವೋ ಪತ್ತೆಯಾಗುವ ಉದಾಹರಣೆಗಳಿವೆ.. ಆದ್ರೆ ಮನುಷ್ಯನ ಬೆರಳು ಕಾಣಿಸಿಬಿಟ್ಟರೆ ತಿನ್ನುತ್ತಿರುವವರ ಪರಿಸ್ಥಿತಿ ಏನಾಗಿರಬೇಡ.. ಇಂತಹದ್ದೊಂದು ಘಟನೆ ಮುಂಬೈನಲ್ಲಿ ನಡೆದಿದೆ.. ಮಲಾಡ್ ನಿವಾಸಿ ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಅವರು ಆನ್‌ಲೈನ್ ಮೂಲಕ ಐಸ್‌ಕ್ರೀಂ ಆರ್ಡರ್ ಮಾಡಿ ತರಿಸಿಕೊಂಡಿದ್ದರು.. ಅದನ್ನು ತಿನ್ನುತ್ತಿರುವಾದ ಐಸ್‌ಕ್ರೀಮ್ ಮಧ್ಯೆ ಮನುಷ್ಯನ ಹೆಬ್ಬೆರಳು ಪತ್ತೆಯಾಗಿದೆ.. ಇದರಿಂದಾಗಿ ಅವರು ಆಘಾತಕ್ಕೊಳಗಾಗಿದ್ದಾರೆ..
ಅದರ ಫೋಟೋವನ್ನು ಆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಐಸ್‌ಕ್ರೀಮ್ ತಿನ್ನುವಾಗ ಏನೋ ಬಾಯಿಗೆ ಟಚ್ ಆಗಿದೆ.. ಮೊದಲಿಗೆ ಅದನ್ನು ವಾಲ್‌ನಟ್ ಇರಬಹುದು ಎಂದುಕೊಂಡಿದ್ದಾರೆ.. ಆದ್ರೆ, ಕೊಂಚ ಐಸ್‌ಕ್ರೀಂ ತಿಂದಾದ ಮೇಲೆ ಬೆರಳು ಕಾಣಿಸಿಕೊಂಡಿದ್ದು, ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಶಾಕ್‌ಗೊಳಗಾಗಿದ್ದಾರೆ.. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..
ನಾನು ಆನ್ಲೈನ್ ಮೂಲಕ ಮೂರು ಐಸ್ಕ್ರೀಂಗಳನ್ನು ಆರ್ಡರ್ ಮಾಡಿದ್ದೆ. ಅದ್ರಲ್ಲಿ ನಾನು ಬಟರ್ಸ್ಕಾಚ್ ಐಸ್ಕ್ರೈಂ ತಿನ್ನುತ್ತಿರುವಾಗ ಅದ್ರಲ್ಲಿ ಬೆರಳು ಸಿಕ್ಕಿದೆ ಎಂದು ಮಹಿಳೆ ಹೇಳಿದ್ದಾರೆ.. ಅದು ಮನುಷ್ಯನ ಹೆಬ್ಬೆರಳಿನ ಭಾಗವಾಗಿದ್ದು, ಉಗುರು ಕೂಡಾ ಇದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.. ಆಕೆ ವೈದ್ಯರೂ ಆಗಿರುವುದರಿಂದ ಅದು ಮನುಷ್ಯ ಬೆರಳೇ ಅನ್ನೋದನ್ನು ಖಚಿತಪಡಿಸಿದ್ದಾರೆ.. ಪೊಲೀಸರು ಬೆರಳಿನ ಭಾಗವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ..