Districts

ಕೊಡಗಿನಲ್ಲಿ ನರಭಕ್ಷಕ ಹುಲಿ ಸೆರೆಗೆ ಕಾರ್ಯಾಚರಣೆ

ಕೊಡಗು; ಒಂದೇ ಕುಟುಂಬದ ಇಬ್ಬರನ್ನ ಬಲಿ ಪಡೆದ ನರಭಕ್ಷಕ ಹುಲಿಯನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಇಂದು ಕಾರ್ಯಾಚರಣೆ ನಡೆಯುತ್ತಿದೆ. ಫೆ.12 ರಂದು 24 ಗಂಟೆಯಲ್ಲಿ ಇಬ್ಬರನ್ನ ಕೊಂದು ಹಾಕಿದ್ದ ವ್ಯಾಘ್ರ ಹುಲಿಯನ್ನ ಸೆರೆಹಿಡಿಯಲು ಸರ್ಕಾರ ಆದೇಶ ನೀಡಿದ್ದು, ಇಂದು ಅರಣ್ಯ ಇಲಾಖೆಯಿಂದ ನರಭಕ್ಷಕ ಹುಲಿ ಸೆರೆಗೆ ಕಾರ್ಯಚರಣೆ ನಡೆಯುತ್ತಿದೆ.

ಕೊಡುಗು ಜಿಲ್ಲೆಯ ಚೂರಿಕಾಡಿನ ಕಾಫಿ ತೋಟದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದು ಆನೆ ಅಭಿಮನ್ಯು ಕಾರ್ಯಾಚರಣೆಯ ನೇತೃತ್ವ ವಹಿಸಿದೆ, 150 ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಕ್ಯಾಮೆರಾಗಳನ್ನ ಬಳಸಲಾಗಿದೆ.

ಫೆ. 12 ರಂದು ಪೊನ್ನಂಪೇಟೆ ತಾಲ್ಲೂಕಿನ ಕುಟ್ಟಾ ಗ್ರಾಮದಲ್ಲಿ 12 ವರ್ಷದ ಬಾಲಕ ಚೇತನ್ ಕೊಂದು ಹಾಕಿ ತೊಡೆ ಬಾಗವನ್ನ ತಿಂದು ಹಾಕಿತ್ತು, ಇದಾದ ಕೆಲವೇ ಗಂಟೆಗಳಲ್ಲಿ ಮೈಸೂರು ಜಿಲ್ಲೆ ಕೊಳವಿಗೆ ಹಾಡಿ ನಿವಾಸಿ ರಾಜು ಎಂಬುವವರ ಕಾಫೀ ತೋಟದಲ್ಲಿ ಕೆಲಸ ಮಾಡುವಾಗ ಹುಲಿ ದಾಳಿ ಮಾಡಿ ಕೊಂದಿತ್ತು.

ಕೇವಲ 24 ಗಂಟೆಯಲ್ಲಿ ಇಬ್ಬರನ್ನ ಕೊಂದು ಹಾಕಿದ ಹುಲಿಯಿಂದ ಆತಂಗೊಂಡ ಗ್ರಾಮಸ್ಥರು ನರಭಕ್ಷಕ ಹುಲಿಯನ್ನ ಕೊಲ್ಲುವಂತೆ ಒತ್ತಾಯಿಸಿ ಮೃತದೇಹವನ್ನ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಸರ್ಕಾರ ಹುಲಿಯನ್ನ ಸೆರೆ ಹಿಡಿಯಲು ಆದೇಶಿಸಿತ್ತು.

Share Post