LifestyleSports

ವಿರಾಟ್‌ ಕೊಹ್ಲಿ ಫಿಟ್ನೆಸ್‌ ಹಿಂದಿನ ಗುಟ್ಟೇನು..?; ಅವರು ದಿನಾ ಸೇವಿಸೋ ಆಹಾರ ಎಂತಹದ್ದು..?

ವಿರಾಟ್‌ ಕೊಹ್ಲಿ ಯಾರಿಗೆ ಗೊತ್ತಿಲ್ಲ ಹೇಳಿ.. ದೇಶ ಏನು, ಪ್ರಪಂಚದಾದ್ಯಂತ ಈ ಕ್ರಿಕೆಟರ್‌ಗೆ ಅಭಿಮಾನಿಗಳಿದ್ದಾರೆ.. ಅಂದಹಾಗೆ, ವಿರಾಟ್‌ ಕೊಹ್ಲಿ ಫಿಟ್‌ನೆಸ್‌ ಹಿಂದಿನ ಗುಟ್ಟೇನು..? ಅವರು ದಿನಾ ಯಾವ ರೀತಿಯ ಆಹಾರ ಸೇವಿಸುತ್ತಾರೆ..? ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ.. ಅಂತಹವರಿಗಾಗಿ ಈ ಮಾಹಿತಿ..

ವಿರಾಟ್‌ ಕೊಹ್ಲಿ ದಿನಾ ತಿನ್ನೋದೇನು..?;

ಕೊಹ್ಲಿಯವರು ದಿನವೂ ಆವಿಯಲ್ಲಿ ಬೇಯಿಸಿದ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ.. ಆಗೊಮ್ಮೆ ಈಗೊಮ್ಮೆ ಮಾತ್ರ ಸ್ವಲ್ಪ ಆಲಿವ್ ಎಣ್ಣೆ ಅಥವಾ ಇತರ ಮಸಾಲೆಗಳೊಂದಿಗೆ ಮಾಡಿದ ತಿಂಡಿಗಳನ್ನು ತಿನ್ನುತ್ತಾರೆ.. ಹುರಿದ ಅಥವಾ ಬಿಸಿಯಾಗಿರುವ ಆಹಾರಗಳನ್ನು ಕೊಹ್ಲಿ ಹೆಚ್ಚಾಗಿ ತಿನ್ನುವುದಿಲ್ಲ. ದಾಲ್, ರಾಜ್ಮಾ ಮತ್ತು ಅಲಸಂದೆ ಹೆಚ್ಚಾಗಿ ತಿನ್ನುತ್ತಾರೆ.. ಮಸಾಲೆಗಳಿಂದ ಆದಷ್ಟು ದೂರವಿರುತ್ತಾರೆ..

ತಾಜಾ ತರಕಾರಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ..  ಕೊಹ್ಲಿ ಕಾಫಿ ಪ್ರಿಯರಾಗಿದ್ದು, ದಿನಕ್ಕೆ ಎರಡು ಕಪ್ ಕಾಫಿ ಸೇವಿಸುತ್ತಾರೆ. ಸಂಸ್ಕರಿಸಿದ ಅಥವಾ ಹೆಚ್ಚಿನ ಸಕ್ಕರೆ ಹೊಂದಿರುವ ಪಾನೀಯಗಳನ್ನು ಯಾವ ಕಾರಣಕ್ಕೂ ಸೇವಿಸೋದಿಲ್ಲ.. ಪೌಷ್ಟಿಕ ಕಾರ್ಬೋಹೈಡ್ರೇಟ್‌ಗಳನ್ನು ಒಡೆಯಲು ಸ್ಮೂಥಿಗಳು, ಮೊಳಕೆ ಕಾಳುಗಳು ಅಥವಾ ಸಲಾಡ್‌ಗಳನ್ನು ತಿನ್ನುತ್ತಾರೆ.

ವಿರಾಟ್ ಕೊಹ್ಲಿ ಕ್ವಿನೋವಾ, ಪಾಲಾಕ್‌ ಮತ್ತು ವಿವಿಧ ಸೊಪ್ಪುಗಳು, ತರಕಾರಿಗಳನ್ನು ತಿನ್ನುತ್ತಾರೆ. ನಿಂಬೆ ರಸ, ಉಪ್ಪು ಮತ್ತು ಮೆಣಸುಗಳ ಜೊತೆಗೆ ಆಹಾರಗಳನ್ನು ತಿನ್ನಲು ಅವರು ಬಯಸುತ್ತಾರೆ.. ಕೆಲವೊಮ್ಮೆ ದೋಸೆಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದರ ಜೊತೆಗೆ ಸೂಪ್‌ಗೂ ಆದ್ಯತೆ ನೀಡುತ್ತಾರೆ.

ಕೊಹ್ಲಿ ಏನೇನು ತಿನ್ನಲ್ಲ.?
ವಿರಾಟ್ ಕೊಹ್ಲಿ ಕರಿದ ಆಹಾರಗಳು, ಗ್ರೇವಿಗಳು ಮತ್ತು ಹೆಚ್ಚು ಮಸಾಲೆಯುಕ್ತ ಭಕ್ಷ್ಯಗಳನ್ನು ಯಾವ ಕಾರಣಕ್ಕೂ ತಿನ್ನೋದಿಲ್ಲ.. ಡೈರಿ ಉತ್ಪನ್ನಗಳನ್ನು ಕೂಡಾ ಕಡಿಮೆ ಮಾಡಿದ್ದಾರೆ.. ಸಸ್ಯಾಹಾರ ಮಾತ್ರ ಈಗ ಅವರು ಸೇವನೆ ಮಾಡೋದು..

Share Post