Health

ಮುಂಬೈನಲ್ಲಿ ಕೊವಿಡ್‌ ಸೋಂಕಿತರ ಸಂಖ್ಯೆ ಭಾರಿ ಹೆಚ್ಚಳ..!

ಮುಂಬೈ: ಮುಂಬೈನಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಕಳೆದ ಹತ್ತು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಲೇ ಇದೆ. ಡಿಸೆಂಬರ್‌ 20 ರಂದು 204 ಮಂದಿ ಕೊರೋನಾ ಸೋಂಕಿತರಿದ್ದರು. ಇಂದು ಅದರ ಸಂಖ್ಯೆ 6347 ಕ್ಕೆ ತಲುಪಿದೆ. ಅಂದರೆ, ಪ್ರತಿದಿನ ಸಾವಿರಕ್ಕೂ ಸಾವಿರಕ್ಕೂ ಹೆಚ್ಚು ಜನಕ್ಕೆ ಸೋಂಕು ತಗುಲುತ್ತಿದ್ದು, ಮುಂಬೈ ಜನರಲ್ಲಿ ಆತಂಕ ಮನೆ ಮಾಡಿದೆ.

ಕಳೆದ 13 ದಿನಗಳಲ್ಲಿ ಎಷ್ಟೆಷ್ಟು ಸೋಂಕಿತರು ಜಾಸ್ತಿಯಾಗಿದ್ದಾರೆ ಎಂಬುದರ ವಿವರ ಇಲ್ಲಿದೆ.

ಡಿಸೆಂಬರ್‌ 20 – 204

ಡಿಸೆಂಬರ್‌ 21 – 327

ಡಿಸೆಂಬರ್‌ 22 – 490

ಡಿಸೆಂಬರ್‌ 23 – 602

ಡಿಸೆಂಬರ್‌ 24 – 683

ಡಿಸೆಂಬರ್‌ 25 – 757

ಡಿಸೆಂಬರ್‌ 26 – 922

ಡಿಸೆಂಬರ್‌ 27 – 809

ಡಿಸೆಂಬರ್‌ 28 – 1377

ಡಿಸೆಂಬರ್‌ 29 – 2510

ಡಿಸೆಂಬರ್‌ 30 – 3671

ಡಿಸೆಂಬರ್‌ 31 – 5631

ಜನವರಿ 01 – 6347

ದಿನೇ ದಿನೇ ಕೊರೋನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ತರುತ್ತಿದೆ. ನೈಟ್‌ ಕರ್ಫ್ಯೂ ಸೇರಿದಂತೆ ಹಲವು ನಿಯಮಾವಳಿಗಳನ್ನು ರೂಪಿಸಲಾಗಿದೆ. ಜೊತೆಗೆ 144 ಸೆಕ್ಷನ್‌ ಕೂಡಾ ಜಾರಿ ಮಾಡಲಾಗಿದೆ.

Share Post