DistrictsHealth

ಕುಂದಾಪುರದ ಖ್ಯಾತ ವೈದ್ಯ ಸತೀಶ್‌ ಪೂಜಾರಿ ಹೃದಯಾಘಾತಕ್ಕೆ ಬಲಿ!

ಉಡುಪಿ; ಕುಂದಾಪುರ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ವೈದ್ಯ ಡಾ.ಸತೀಶ್‌ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.. ಇಂದು ಮುಂಜಾನೆ ಕೋಟತಟ್ಟುವಿನ ಮನೆಯಲ್ಲಿ ಸತೀಶ್‌ ಪೂಜಾರಿಯವರಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಟಾಯ್ಲೆಟ್‌ ಸೀಟ್‌ಗಿಂತ ನೀರಿನ ಬಾಟಲಿಯಲ್ಲಿ 40 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾ..!

ಸತೀಶ್‌ ಪೂಜಾರಿಯವರು ಕುಂದಾಪುರದಲ್ಲಿ ಶ್ರೀಮಾತಾ ಆಸ್ಪತ್ರೆ ಮಾಲೀಕರಾಗಿದ್ದರು.. ಜೊತೆಗೆ ಗಾಯಕರಾಗಿಯೂ ಅವರು ಹೆಸರು ಮಾಡಿದ್ದರು.. ಅವರು ಅನೇಕ ಮ್ಯೂಸಿಕ್‌ ಆಲ್ಬಂಗಳನ್ನು ತಂದಿದ್ದರು.. ಈ ಮೂಲಕ ಕರಾವಳಿ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.. ಸತೀಶ್‌ ಪೂಜಾರಿಯವರಿಗೆ 54 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ..

ಇದನ್ನೂ ಓದಿ; 110 ರೂಪಾಯಿಗೆ 300 ಎಂಎಲ್‌ ಪೆಟ್ರೋಲ್‌!; ತುಮಕೂರಿನಲ್ಲಿ ನಡೆತಿದೆಯಾ ಮೋಸದ ದಂಧೆ..?

ಫಿಟ್‌ನೆಟ್‌ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದ ಸತೀಶ್‌ ಪೂಜಾರಿ ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದ್ದಾರೆ.. ಆರೋಗ್ಯದ ಕಡೆ ಹೆಚ್ಚು ಆಸಕ್ತಿ ವಹಿಸಿದ್ದರೂ ಕೂಡಾ ಅವರು ಸಾವನ್ನಪ್ಪಿದ್ದಾರೆ. ಅವರು ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ..

Share Post