ಟಾಯ್ಲೆಟ್ ಸೀಟ್‌ಗಿಂತ ನೀರಿನ ಬಾಟಲಿಯಲ್ಲಿ 40 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾ..!
ಅಮೆರಿಕ; ನಾವು ಹೊರಗೆ ಹೋದಾಗ ನಮ್ಮ ಜೊತೆ ನೀರಿನ ಬಾಟಲಿ ತೆಗೆದುಕೊಂಡು ಹೋಗುತ್ತವೆ.. ಇದು ಉತ್ತಮವಾದ ಹವ್ಯಾಸ ಕೂಡಾ.. ಆದ್ರೆ ಬಾಟಲಿಯನ್ನು ಸರಿಯಾಗಿ ತೊಳೆಯದೇ ಹೋದರೆ ಅದ್ರಲ್ಲಿ ಹೆಚ್ಚು ಹೆಚ್ಚು ಬ್ಯಾಕ್ಟೀರಿಯಾ, ಫಂಗಸ್ ಹುಟ್ಟಿಕೊಳ್ಳುತ್ತವೆಯಂತೆ..! ಅದ್ರಲ್ಲೂ ಸಂಶೋಧಕರು ಹೇಳೋ ಪ್ರಕಾರ ಸರಿಯಾಗಿ ನಿರ್ವಹಣೆ ಮಾಡದ ವಾಟರ್ ಬಾಟಲ್‌ನಲ್ಲಿ ಟಾಯ್ಲೆಟ್ ಸೀಟ್‌ನಲ್ಲಿರುವುದಕ್ಕಿಂತ 40 ಸಾವಿರ ಪಟ್ಟು ಬ್ಯಾಕ್ಟೀರಿಯಾಗಳು ಹೆಚ್ಚಿರುತ್ತವೆಯಂತೆ..!
ಇದನ್ನೂ ಓದಿ; 110 ರೂಪಾಯಿಗೆ 300 ಎಂಎಲ್ ಪೆಟ್ರೋಲ್!; ತುಮಕೂರಿನಲ್ಲಿ ನಡೆತಿದೆಯಾ ಮೋಸದ ದಂಧೆ..?
ನೀರಿನ ಬಾಟಲ್‌ನಲ್ಲಿ ಫಂಗಸ್, ಬ್ಯಾಕ್ಟೀರಿಯಾಗಳು ಸಂಗ್ರಹವಾಗುವುದರಿಂದ ಅವುಗಳು ನಮ್ಮ ಹೊಟ್ಟೆಯೊಳಗೆ ಹೋಗಿ ಹಲವು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.. ಅಮೆರಿಕಕ್ಕೆ ಸೇರಿದ ‘ವಾಟರ್ ಫಿಲ್ಟರ್ ಗುರು’ ಎಂಬ ತಜ್ಞ ನೀರಿನ ಗುಣಮಟ್ಟ ನಿಯಂತ್ರಣ ಕಂಪನಿ ಈ ಬಗ್ಗೆ ಅಧ್ಯಯನ ಮಾಡಿ ವರದಿ ಕೊಟ್ಟಿದೆ.. ಇವರ ಪ್ರಕಾರ, ಮರುಬಳಕೆ ಮಾಡಬಹುದಾದ ಕುಡಿಯುವ ಬಾಟಲಿಯಲ್ಲಿ ಸುಮಾರು 2.8 ಕೋಟಿ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆಯಂತೆ.
ಇದನ್ನೂ ಓದಿ; ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಮೂಡಾ ಹಗರಣ..?; ಪಾದಯಾತ್ರೆಗೆ ರಾಜ್ಯ ಬಿಜೆಪಿ ಸಿದ್ಧತೆ..!
ಸಂಶೋಧಕರು ಟಾಯ್ಲೆಟ್ ಸೀಟ್, ಕಂಪ್ಯೂಟರ್ ಮೌಸ್, ಕಿಚನ್ ಸಿಂಕ್ ಸೇರಿದಂತೆ ಹಲವು ವಸ್ತುಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಪರೀಕ್ಷೆ ಮಾಡಿದ್ದಾರೆ.. ಇದರಲ್ಲಿ ಕುಡಿಯುವ ನೀರಿನ ಬಾಟಲಿಯಲ್ಲೇ ಹೆಚ್ಚು ಬ್ಯಾಕ್ಟೀರಿಯಾಗಳು ಕಂಡುಬಂದಿವೆ ಎಂದು ಸಂಶೋಧಕರು ಹೇಳಿದ್ದಾರೆ..