HealthLifestyle

ನಿಮ್ಮ ನಗು ನಿಜವಾದದ್ದಾ..?; ಸ್ಮೈಲ್‌ ಡಿಪ್ರೆಷನ್‌ ಬಗ್ಗೆ ನಿಮಗೆಷ್ಟು ಗೊತ್ತು..?

ಬೆಂಗಳೂರು; ನಮ್ಮಲ್ಲಿ ತುಂಬಾ ಜನ ಒಳಗೆ ನೋವಿದ್ದರೂ ಕೂಡಾ ನಗು ಮುಖದೊಂದಿಗೆ ಹೊರಗೆ ಕಾಣಿಸಿಕೊಳ್ಳುತ್ತಾರೆ.. ಆದ್ರೆ ನಗುತ್ತಾ ಕಾಣಿಸಿಕೊಳ್ಳುವವರೆಲ್ಲಾ ಒಳಗಿನಿಂದ ಸಂತೋಷವಾಗಿರೋದಿಲ್ಲ ಅನ್ನೋದು ಮನೋವಿಜ್ಞಾನಿಗಳು ಅಭಿಪ್ರಾಯ.. ಹೊರನೋಟಕ್ಕೆ ಅವರು ನಗುತ್ತಿದ್ದರೂ, ಒಳಗೆ ಅವರಿಗೆ ಹಲವಾರು ಒತ್ತಡಗಳಿರುತ್ತವೆ.. ತೊಂದರೆಗಳ ಕಾರಣದಿಂದ ಒತ್ತಡದಲ್ಲಿದ್ದರೂ ಹೊರಗೆ ನಗುತ್ತಾ ಕಾಣಿಸಿಕೊಳ್ಳೋದಕ್ಕೆ ಪ್ರಯತ್ನ ಮಾಡುತ್ತಿರುತ್ತಾರೆ.. ಇದನ್ನೇ ಮನೋವೈದ್ಯರು ಸ್ಮೈಲ್‌ ಡಿಪ್ರೆಷನ್‌ ಎಂದು ಕರೆಯುತ್ತಾರೆ.. ಒತ್ತಡದ ನಡುವೆ ನಗುತ್ತಾ ಕಾಣಿಸಿಕೊಳ್ಳುವ ಜನರು ಸ್ಮೈಲ್‌ ಡಿಪ್ರೆಷನ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಮನೋವೈದ್ಯರು ಹೇಳುತ್ತಿದ್ದಾರೆ.. ಸ್ಮೈಲಿಂಗ್‌ ಡಿಪ್ರೆಷನ್‌ ಅನ್ನೋದು ಒಂದು ರೀತಿಯ ಖಿನ್ನತೆಯಂತೆ..!

ಇದನ್ನೂ ಓದಿ; ಮೀನೆಂದು ಭಾವಿಸಿ ಹಾವನ್ನು ಸುಟ್ಟು ತಿಂದರು!; ಮುಂದೇನಾಯ್ತು..?

ಸ್ಮೈಲ್‌ ಡಿಪ್ರೆಷನ್‌ ಪತ್ತೆ ಹಚ್ಚುವುದಕ್ಕೆ ಸದ್ಯಕ್ಕೆ ಯಾವುದೇ ರೀತಿ ಮನೋ ವೈಜ್ಞಾನಿಕ ಪರೀಕ್ಷೆ ಇಲ್ಲ.. ಆದ್ರೆ ವ್ಯಕ್ತಿಯ ನಡವಳಿಕೆಯನ್ನು ಇದು ಪ್ರತಿಬಿಂಬಿಸುತ್ತದೆ.. ಯಾವಾಗಲೂ ನಗುತ್ತಾ ಕಾಣಿಸಿಕೊಂಡರೂ, ಖಿನ್ನತೆಯಿಂದ ಬಳಸುತ್ತಿರುವ ಜನ ನಡವಳಿಕೆಯನ್ನು ಆಧರಿಸಿ ಸ್ಮೈಲಿಂಗ್‌ ಡಿಪ್ರೆಷನ್‌ ರೋಗದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಮನೋವೈದ್ಯರು ಹೇಳುತ್ತಾರೆ.. ಈ ಸಮಸ್ಯೆ ಇರುವವರು ತಮ್ಮ ಖಿನ್ನತೆಯನ್ನು ಮರೆಮಾಚಲು ನಗುವನ್ನು ಬಳಸುತ್ತಾರೆ. ಮನಸ್ಸಿನಲ್ಲಿ ತುಂಬಾ ಒತ್ತಡ ಇದ್ದರೂ ಅದು ಬೇರೆಯವರಿಗೆ ಗೊತ್ತಾಗದಂತೆ ಮ್ಯಾನೇಜ್‌ ಮಾಡುತ್ತಾರೆ.. ಅದಕ್ಕಾಗಿ ಅವರು ತನ್ನ ಆರ್ಟಿಫಿಶಿಯಲ್‌ ನಗುವನ್ನು ಬಳಸಿಕೊಳ್ಳುತ್ತಾರೆ.. ಅಂದರೆ ಮನದಲ್ಲಿ ತುಂಬಾ ನೋವಿದ್ದರೂ ಹೊರಗೆ ನಗುತ್ತಲೇ ಕಾಣಿಸಿಕೊಳ್ಳವುದು.

ಇದನ್ನೂ ಓದಿ; ವರಲಕ್ಷ್ಮೀ ವ್ರತಾಚರಣೆ ಹೇಗಿರಬೇಕು..?, ಪೂಜಾ ಸಮಯ ಏನು..?

ಹೌದು, ತುಂಬಾ ಜನ ಒಳಗೆ ತುಂಬಾ ನೋವು ಅನುಭವಿಸುತ್ತಿರುತ್ತಾರೆ.. ಆದರೆ ಹೊರಗೆ ಸಂತೋಷವಾಗಿ ಕಾಣಿಸಿಕೊಳ್ಳುತ್ತಾರೆ.. ತೀರಾ ಒಳಹೊಕ್ಕು ನೋಡಿದರೆ ಅವರು ಖಿನ್ನತೆಗೆ ಒಳಗಾಗಿರುವುದು ಗೊತ್ತಾಗುತ್ತದೆ.. ಈ ಸ್ಮೈಲಿಂಗ್ ಡಿಪ್ರೆಶನ್ ಗೆ ಒಳಗಾದವರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ.. ರಾತ್ರಿ ವೇಳೆ ಅವರಿಗೆ ನಿದ್ದೆಯೇ ಬರೋದಿಲ್ಲ.. ಪದೇ ಪದೇ ಎದ್ದು ಕೂತುಕೊಳ್ಳುವುದು, ಯಾರೂ ಇಲ್ಲದ ಸಮಯದಲ್ಲಿ ಏನೋ ಯೋಚನೆ ಮಾಡಿಕೊಂಡು ಕೂರುವುದು, ಯಾರಾದರೂ ಬಂದರೆ ಸಾಕು ನಗುತ್ತಾ ಇರುವುದು ಮಾಡುತ್ತಾರೆ.. ಅಂತಹ ಜನರು ತಮ್ಮ ಹವ್ಯಾಸಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ; ಮೊಬೈಲ್‌ ಬದಲು ವಾಟರ್‌ ಹೀಟರ್‌ ಕಾಯಲ್‌ ಕಿವಿಗಿಟ್ಟುಕೊಂಡು ಸಾವು!

ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ನೀಡಬಹುದು ಎಂದು ತಜ್ಞರು ಹೇಳುತ್ತಾರೆ.. ಸ್ಮೈಲಿಂಗ್ ಡಿಪ್ರೆಶನ್ ಗೆ ಕಾಗ್ನಿಟಿವ್ ಬಿಹೇವಿಯರಲ್ ಟ್ರೀಟ್ಮೆಂಟ್ (CBT) ಮೂಲಕ ಚಿಕಿತ್ಸೆ ನೀಡಬಹುದು. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು, ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವುದು, ನೋವನ್ನು ಬೇರೆಯವರ ಮುಂದೆ ಮನಬಿಚ್ಚಿ ಹೇಳಿಕೊಳ್ಳುವುದು, ಇಷ್ಟವಾದ ಕೆಲಸಗಳನ್ನಷ್ಟೇ ಮಾಡುವ ಮೂಲಕ ಖಿನ್ನತೆಯಿಂದ ಹೊರಬರಬಹುದು.

Share Post