17 ವರ್ಷದ ಹಿಂದೆ ಅಪಹರಣ; ಅದೇ ಬಾಲಕ ವಕೀಲನಾಗಿ ಕೇಸ್ ಗೆದ್ದ!
ಉತ್ತರಪ್ರದೇಶ; 17 ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ ಬಾಲಕನೊಬ್ಬ ಛಲದಿಂದ ಎಲ್‌ಎಲ್‌ಬಿ ಓದಿ ವಕೀಲ, ತಾನೇ ವಾದ ಮಾಡಿ ಈ ಕೇಸ್ ಗೆದ್ದಿದ್ದಾನೆ.. ಉತ್ತರಪ್ರದೇಶದ ಆಗ್ರಾದ ಹರ್ಷ್ ಗಾರ್ಗ್ ಎಂಬಾತನೇ ಈ ಸಾಧನೆ ಮಾಡಿದ ವಕೀಲನಾಗಿದ್ದಾನೆ..
2007ರಲ್ಲಿ ಹರ್ಷ್ ಗಾರ್ಗ್ ಅವರನ್ನು ಅಪಹರಿಸಲಾಗಿತ್ತು.. ಫೆಬ್ರವರಿ 10, 2007ರಂದು ತಂದೆ ರವಿ ಗಾರ್ಗ್ ಜೊತೆಗೆ ಸ್ಥಳೀಯ ಮೆಡಿಕಲ್ ಸ್ಟೋರ್ನಲ್ಲಿ ಹರ್ಷ್ ಗಾರ್ಗ್ ಕುಳಿತಿದ್ದರು.. ಈ ವೇಳೆ ರಾಜಸ್ಥಾನ ನೋಂದಣಿಯ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ರವಿ ಗಾರ್ಗ್ ಅವರಿಗೆ ಗನ್ ತೋರಿಸಿ ಹರ್ಷ್ ಗಾರ್ಗ್ ಅವರನ್ನು ಅಪಹರಿಸಿದ್ದರು..
ಈ ವೇಳೆ ತಡೆಯಲು ಹೋದ ಹರ್ಷ್ ಗಾರ್ಗ್ ತಂದೆಯ ಮೇಲೆ ಗುಂಡಿನ ದಾಳಿ ಕೂಡಾ ನಡೆಸಲಾಗಿತ್ತು.. ಬಳಿಕ 55 ಲಕ್ಷ ರೂಪಾಯಿ ಒತ್ತೆ ಹಣಕ್ಕೆ ಬೇಡಿಕೆ ಇಡಲಾಗಿತ್ತು.. ಆದ್ರೆ 2007ರ ಮಾರ್ಚ್ 7ರಂದು ಹರ್ಷ್ ಗರ್ಗ್ ಹೇಗೋ ತಪ್ಪಿಸಿಕೊಂಡು ಬಂದಿದ್ದರು.. ಅಂದು ಚಾಲೆಂಜ್ ಮಾಡಿ ಲಾ ಓದುತ್ತೇನೆ ಎಂದಿದ್ದರು. ಅದರಂತೆ ಎಲ್‌ಎಲ್‌ಬಿ ಮಾಡಿರುವ ಅವರು ವಕೀಲನಾಗಿ ತನ್ನ ಅಪಹರಣ ಪ್ರಕರಣದ ಬಗ್ಗೆ ಕೋರ್ಟ್‌ನಲ್ಲಿ ವಾದ ಮಾಡಿ ಗೆದ್ದಿದ್ದಾರೆ..
ಹರ್ಷ್ ಗಾರ್ಗ್‌ರನ್ನು ಅಪಹರಣ ಮಾಡಿದ್ದ ಗುಡ್ಡನ್ ಕಚ್ಚಿ, ರಾಜೇರ್ಶ್ ಶರ್ಮಾ, ರಾಜ್ ಕುಮಾರ್, ಫತೇ ಸಿಂಗ್ ಅಲಿಯಾಸ್ಚಿಗ್ಗಾ, ಅಮರ್ ಸಿಂಗ್, ಬಲ್ಟೀರ್, ರಾಮ್ ಪ್ರಕಾಶ ಮತ್ತು ಭಿಕಮ್ ಅಲಿಯಾಸ್ ಭಿಕಾರಿಗೆ ಕೋರ್ಟ್ ಈಗ ಜೀವಾವಧಿ ಶಿಕ್ಷೆ ವಿಧಿಸಿದೆ.