ಯುವತಿಯ ಕಿವಿಯಲ್ಲಿದ್ದಾಗಲೇ ಸ್ಫೋಟಗೊಂಡ ಇಯರ್ ಬಡ್ಸ್!
ಟರ್ಕಿ; ಮೊಬೈಲ್‌ಗಳು ಸ್ಫೋಟಗೊಂಡಿರುವುದನ್ನು ನೋಡಿದ್ದೇವೆ.. ಆದ್ರೆ ಇಯರ್ ಬಡ್‌ಗಳು ಸ್ಫೋಟಗೊಂಡಿರುವುದನ್ನು ಇದುವರೆಗೂ ಎಲ್ಲೂ ಸುದ್ದಿಯಾಗಿರಲಿಲ್ಲ.. ಆದ್ರೆ, ಇಯರ್ ಬಡ್‌ಗಳು ಕೂಡಾ ಸ್ಫೋಟಗೊಳ್ಳುತ್ತವೆ ಅನ್ನೋದು ಈಗ ಗೊತ್ತಾಗಿದೆ.. ಯುವತಿಯೊಬ್ಬಳು ಕಿವಿಯಲ್ಲಿ ಇಯರ್ ಬಡ್ಸ್ ಇಟ್ಟುಕೊಂಡು ಹಾಡು ಕೇಳುತ್ತಿರುವಾಗಲೇ ಅವು ಸ್ಫೋಟಗೊಂಡಿವೆ.. ಟರ್ಕಿ ಮೂಲದ ವ್ಯಕ್ತಿಯೊಬ್ಬರು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ FE ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.. ಯುವತಿಯ ಕಿವಿಯಲ್ಲೇ ಈ ಸ್ಫೋಟವಾಗಿರುವುದರಿಂದ ಆಕೆ ಈಗ ಶ್ರವಣ ದೋಷ ಅನುಭವಿಸುತ್ತಿದ್ದು, ಕಿವಿಗಳು ಪೂರ್ತಿ ಕೇಳಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.. ಈ ಯುವತಿಯ ಬಳಿ ಗ್ಯಾಲಕ್ಸಿ ಎಸ್23 ಅಲ್ಟ್ರಾ ಸ್ಮಾರ್ಟ್ಫೋನ್ ಇದೆ.. ಇದರ ಜೊತೆ ಬಳಸಲು ಈಕೆ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ FE ಖರೀದಿ ಮಾಡಿದ್ದಳು ಎಂದು ತಿಳಿದುಬಂದಿದೆ.. ಇಯರ್ ಬಡ್ 36 ಪರ್ಸೆಂಟ್ ಚಾರ್ಜ್ ಇತ್ತು.. ಆದರೂ ಅದು ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.. ಇನ್ನು ಈ ಬಗ್ಗೆ ಸ್ಯಾಮ್‌ಸಂಗ್ ಮಳಿಗೆಗೆ ಹೋಗಿ ಹೇಳಿದಾಗ ಅವರು ಕ್ಷಮೆಯಾಚಿಸಿ, ಹೊಸ ಇಯರ್ ಬಡ್ಸ್ ಕೊಟ್ಟಿದ್ದಾರೆ ಎನ್ನಲಾಗಿದೆ..
ಸ್ಯಾಮ್‌ಸಂಗ್ ಅತ್ಯಂದ ವಿಶ್ವಾಸಾರ್ಹ ಕಂಪನಿಯಾಗಿದ್ದು, ಈ ಕಂನಿಯ ಗ್ಯಾಜೆಟ್‌ಗಳಿಂದ ಈ ರೀತಿ ಸಮಸ್ಯೆಗಳಾಗಿದ್ದು ಅಪರೂಪದಲ್ಲಿ ಅಪರೂಪ.. ಆದ್ರೆ ಈಗ ಈ ಕಂಪನಿ ಇಯರ್ ಬಡ್ಸ್ ಸ್ಫೋಟಗೊಂಡಿವೆ ಎಂಬ ಆರೋಪ ಕೇಳಿಬಂದಿದೆ.. ಇದ್ರಲ್ಲಿ ಯಾರ ತಪ್ಪಿದೆ ಅನ್ನೋದು ಗೊತ್ತಾಗಬೇಕಿದೆ..