ಮೀನೆಂದು ಭಾವಿಸಿ ಹಾವನ್ನು ಸುಟ್ಟು ತಿಂದರು!; ಮುಂದೇನಾಯ್ತು..?
ಉತ್ತರಾಖಂಡ್ (Uttarakhand); ಮೀನು ಯಾವುದು, ಹಾವು ಯಾವುದು ಅಂತ ಗುರುತಿಸುವಷ್ಟು ಬುದ್ಧ ನಮಗಿರುತ್ತೆ.. ಆದರೂ ಕೂಡಾ ಕೆಲವು ಮೀನುಗಳು ಥೇಟ್ ಹಾವಿನ ರೀತಿಯಲ್ಲೇ ಇರುತ್ತವೆ.. ಹೀಗಾಗಿ ಇಮ್ಮೊಮ್ಮೆ ಕನ್ಫ್ಯೂಷನ್.. ಇದೇ ಕನ್ಫೂಷನ್‌ನಲ್ಲಿ ಇಬ್ಬರು ಮಕ್ಕಳು ಸತ್ತುಬಿದ್ದಿದ್ದ ಹಾವನ್ನು ಮೀನೆಂದು ತಿಳಿದು ಅದನ್ನು ಸುಟ್ಟು ತಿನ್ನುತ್ತಿದ್ದರು.. ಅದನ್ನು ನೋಡಿದ ಮಕ್ಕಳ ತಾಯಿಗೆ ಅವರು ತಿನ್ನುತ್ತಿರುವುದು ಹಾವೆಂದು ಗೊತ್ತಾಗಿ ಆತಂಕಕ್ಕೊಳಗಾಗಿದ್ದಾಳೆ.. ಕೂಡಲೇ ಆ ಸುಟ್ಟ ಹಾವಿನೊಂದಿಗೆ ಹಾವು ಸಂರಕ್ಷಕನ ಬಳಿಗೆ ಹೋಗಿದ್ದಾರೆ.. ಉತ್ತರಾಖಂಡ್‌ನಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ವರಲಕ್ಷ್ಮೀ ವ್ರತಾಚರಣೆ ಹೇಗಿರಬೇಕು..?, ಪೂಜಾ ಸಮಯ ಏನು..?
ಮಕ್ಕಳ ತಾಯಿ ಆತಂಕದಿಂದ ಮಕ್ಕಳನ್ನು ಹಾಗೂ ಸುಟ್ಟ ಹಾವನ್ನು ಹಾವು ಸಂರಕ್ಷಕ ತಾಲಿಬ್ ಹುಸೇನ್ ಬಳಿ ಕರೆದುಕೊಂಡು ಹೋಗಿದ್ದಾಳೆ.. ಅದನ್ನು ಪರೀಕ್ಷಿಸಿದ ಹಾವು ಸಂರಕ್ಷಕ, ಇದು ವಿಷಪೂರಿತವಲ್ಲದ ಹಾವು.. ಹೀಗಾಗಿ ಏನೂ ಆಗಲ್ಲ ಎಂದಿದ್ದಾರೆ.. ಇದರಿಂದ ಆ ತಾಯಿ ನಿಟ್ಟುಸಿರುಬಿಟ್ಟಿದ್ದಾಳೆ.. ಉತ್ತರಾಖಂಡ್‌ನ ನೈನಿತಾಳ್ ಜಿಲ್ಲೆಯ ರಾಮನಗರದ ಪುಚ್ಚಡಿ ನಾಯ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇವರ ಕುಟುಂಬ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮಾಡಿ ಜೀವನ ನಡೆಸುತ್ತಿದೆ.. ಹಾವು ತಿಂದ ಮಕ್ಕಳಲ್ಲಿ ಒಬ್ಬನಿಗೆ 8 ವರ್ಷ ಹಾಗೂ ಮತ್ತೊಬ್ಬನಿಗೆ 10 ವರ್ಷ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಮೊಬೈಲ್ ಬದಲು ವಾಟರ್ ಹೀಟರ್ ಕಾಯಲ್ ಕಿವಿಗಿಟ್ಟುಕೊಂಡು ಸಾವು!
ಚಿಂದಿ ಹಾಯಲು ಹೋಗುತ್ತಿದ್ದ ಮಕ್ಕಳು ನೀರಿನಲ್ಲಿ ಮೀನುಗಳು ಸಿಕ್ಕರೆ ಅವುಗಳನ್ನು ತಂದು ಸುಟ್ಟುಕೊಂಡು ತಿನ್ನುತ್ತಿದ್ದರು.. ಅದೇ ರೀತಿ ಅವರಿಗೆ ಸತ್ತ ಹಾವು ಸಿಕ್ಕಿದ್ದು, ಅದು ಮೀನೇ ಇರಬೇಕೆಂದು ಭಾವಿಸಿ ಅದನ್ನು ತಂದು ಸುಟ್ಟು ತಿನ್ನುತ್ತಿದ್ದರು.. ಆದ್ರೆ ತಾಯಿಗೆ ಅದು ಹಾವು ಅನ್ನೋದು ಗೊತ್ತಾಗಿತ್ತು.. ಬಾಲಕರಿಗೆ ಗಿಡಮೂಲಿಕೆಗಳ ಮದ್ದು ನೀಡಲಾಗಿದೆ.. ಮಕ್ಕಳು ಹಾವಿನ ತಲೆ ತಿಂದಿಲ್ಲ.. ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಹಾವು ಸಂರಕ್ಷಕ ತಾಲಿಬ್ ಹುಸೇನ್ ಹೇಳಿದ್ದಾರೆ..