HealthLifestyle

ಕುತ್ತಿಗೆಯ ಸುತ್ತ ಕಪ್ಪಾಗಿದೆಯಾ..?; ಹಾಗಾದರೆ ಈ ರೆಮಿಡೀಸ್‌ ಟ್ರೈ ಮಾಡಿ..

ತುಂಬಾ ಜನಕ್ಕೆ ಕತ್ತಿನ ಭಾಗದಲ್ಲಿ ಕಪ್ಪಗಿರುತ್ತದೆ.. ಎಷ್ಟು ಉಜ್ಜಿದರೂ ಅದರು ಹೋಗುವುದಿಲ್ಲ.. ಆ ಸಮಸ್ಯೆ ಹೋಗಲಾಡಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.. ಆದ್ರೆ ಈ ಸಮಸ್ಯೆಯನ್ನು ಕೆಲವು ಹೋಮ್ ರೆಮೆಡೀಸ್ ಬಳಸಿ ಸುಲಭವಾಗಿ ಪರಿಹರಿಸಬಹುದು. ಕುತ್ತಿಗೆಯ ಸುತ್ತ ಇರುವ ಕಪ್ಪು ಕಲೆಗಳನ್ನು ತೊಡೆದುಹಾಕುವಲ್ಲಿ ಕೆಲವು ಮನೆಯ ಚಿಕಿತ್ಸೆಗಳು ಪ್ರಯೋಜನಕಾರಿಯಾಗಿ ಕಾರ್ಯನಿರ್ವಹಿಸುತ್ತವೆ .

ಹಾಲಿನಿಂದ ಮಸಾಜ್;

ಹಾಲು ಒಂದು ಅದ್ಭುತವಾದ ಕ್ಲೆನ್ಸರ್ ಹಾಗೂ ಟೋನರ್. ಹಸಿ ಹಾಲನ್ನು ಕಾಟನ್ ಬಾಲ್ ಸಹಾಯದೊಂದಿಗೆ ಕುತ್ತಿಗೆ ಸುತ್ತಲೂ ಅಪ್ಲೈ ಮಾಡಿ ಸ್ಮೂತ್‌ ಆಗಿ ಉಜ್ಜಬೇಕು.. ಸುಮಾರು 10 ರಿಂದ 15 ನಿಮಿಷಗಳ ನಂತರ ಮೆತ್ತನೆ ಬಟ್ಟೆಯೊಂದಿಗೆ ಒರೆಸಬೇಕು.. ಪ್ರತಿ ದಿನ ಹೀಗೆ ಮಾಡುತ್ತಿದ್ದರೆ, ಕೆಲವೇ ದಿನಗಳಲ್ಲಿ ಈ ಕುತ್ತಿಗೆ ಸುತ್ತ ಇರುವ ಕಪ್ಪು ಬಣ್ಣ ಹೋಗಿ ನೈಸರ್ಗಿಕ ಬಿಳಿ ಬಣ್ಣವು ಕಾಣಿಸಿಕೊಳ್ಳುತ್ತದೆ.

ಕಡಲೆ ಹಿಟ್ಟು;

ಕಡಲೆಹಿಟ್ಟು ಚರ್ಮಸಂರಕ್ಷಣೆಯಲ್ಲಿ ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ.. ಕಡಲೆ ಹಿಟ್ಟು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.. ಎರಡು ಚಮಚ ಕಡಲೆ ಹಿಟ್ಟನ್ನು ಕಲಸಿ, ಸ್ವಲ್ಪ ಹಳದಿ ಮಿಶ್ರಣ ಮಾಡಿ, ಇದನ್ನು ಕುತ್ತಿಗೆ ಅಪ್ಲೈ ಮಾಡಬೇಕು..  15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನೊಂದಿಗೆ ಸ್ವಚ್ಛ ಮಾಡಿಕೊಳ್ಳಬೇಕು.. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಕಾಣುತ್ತದೆ.

ಅಲಿವ್ ಆಯಿಲ್‌;

ಆಲಿವ್ ಆಯಿಲ್‌ನಲ್ಲಿ ಸಕ್ಕರೆ ಬೆರೆಸಿ ಕುತ್ತಿಗೆಯ ಸುತ್ತ ಮಸಾಜ್ ಮಾಡಬೇಕು. ಹೀಗೆ ಕ್ರಮವಾಗಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಪ್ಪು ಕಲೆಗಳು ಮಾಯವಾಗುತ್ತವೆ. ಅಲಿವ್ ಎಣ್ಣೆಯಲ್ಲಿ ವಿಟಮಿನ್ ಐ, ಕೆ ತುಂಬಾ ಚೆನ್ನಾಗಿವೆ.

ನಿಂಬೆ ರಸ;

ಕುತ್ತಿಗೆಯ ಸುತ್ತ ಕಪ್ಪುಬಣ್ಣ ಹೋಗಬೇಕಾದರೆ ನಿಂಬೆರಸ ಮ್ಯಾಜಿಕ್ ಮಾಡುತ್ತದೆ. ನಿಂಬೆರಸವನ್ನು ಕುತ್ತಿಗೆ ಸುತ್ತ ಹಚ್ಚುವುದರಿಂದ  ಅದ್ಭುತ ಸ್ಕಿನ್ ಬ್ಲೀಚಿಂಗ್ ಏಜೆಂಟ್‌ ಆಗಿ ಅದು ಕಾರ್ಯನಿರ್ವಹಿಸುತ್ತದೆ. ಕುತ್ತಿಗೆಯ ಸುತ್ತ ಇರುವ ಕಪ್ಪು ಕಲೆ ಬೇಗ ಮಾಯವಾಗುತ್ತದೆ.

Share Post