ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾಯ್ತು!; ಮಹಿಳೆಯನ್ನು ಕೊಲೆ ಮಾಡಿ ಬೆಂಕಿ ಇಟ್ಟರು!
24 ವರ್ಷ ಮಹಿಳೆಯೊಬ್ಬರು ಪ್ರೀತಿಸಿ ಮದುವೆಯಾಗಿದ್ದರಿಂದ ಆಕ್ರೋಶಗೊಂಡ ಮನೆಯವರು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಸುಟ್ಟು ಭಸ್ಮ ಮಾಡಿರುವ ಘಟನೆ ನಡೆದಿದೆ.. ರಾಜಸ್ಥಾನದ ಝಲವರ್ನಲ್ಲಿ ಈ ಘಟನೆ ನಡೆದಿದೆ..
ರವಿ ಭೀಲ್ ಎಂಬುವವರನ್ನು ಮಹಿಳೆ ಪ್ರೀತಿಸುತ್ತಿದ್ದಳು.. ಅವರನ್ನು ಮದುವೆಯಾಗಬೇಕು ಎಂದುಕೊಂಡಿದ್ದರು.. ಆದ್ರೆ ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.. ಹೀಗಾಗಿ ಮನೆಯಿಂದ ಓಡಿಹೋಗಿ ಮದುವೆಯಾಗಿದ್ದರು.. ಇಬ್ಬರೂ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ವಾಸ ಮಾಡುತ್ತಿದ್ದರು.. ಇದನ್ನು ತಿಳಿದ ಮಹಿಳೆಯ ಮನೆಯವರು ಅಲ್ಲಿಗೆ ಹೋಗಿ ಇಬ್ಬರನ್ನೂ ಅಪರಿಸಿಕೊಂಡು ಬಂದಿದ್ದಾರೆ..
ಅನಂತರ ವರನ ಎದುರೇ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.. ಅನಂತರ ಆಕೆಯ ದೇಹವನ್ನು ಸುಟ್ಟು ಹಾಕಿದ್ದಾರೆ.. ಈ ಬಗ್ಗೆ ಮಹಿಳೆ ಪತಿ ದೂರು ನೀಡಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ..