BengaluruHealth

ಕ್ಯಾನ್ಸರ್‌ ತಡೆಗಟ್ಟುವುದಕ್ಕಾಗಿ ಕ್ಯಾನ್ಸರ್‌ ಕಾರ್ಯಪಡೆ ರಚನೆ

ಬೆಂಗಳೂರು; ಐವತ್ತು ವರ್ಷ ಒಳಪಟ್ಟವರಲ್ಲಿ ಕ್ಯಾನ್ಸರ್‌ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕ್ಯಾನ್ಸರ್‌ ತಡೆಗಟ್ಟುವ ಸಲುವಾಗಿ FICCI ಕ್ಯಾನ್ಸರ್ ಕಾರ್ಯಪಡೆ ರಚಿಸಲಾಗಿದೆ. ಇದರ ಸಭೆ ಇಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆಯಿತು. ಈ ಸಭೆಯಲ್ಲಿ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಸ್ಪೀಕರ್‌ ಯು,ಟಿ.ಖಾದರ್‌ ಭಾಗವಹಿಸಿದ್ದರು.

ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ನಿರ್ದೇಶಕರಾದ ಡಾ ಎಲ್ ಸ್ವಸ್ತಿಚರಣ್ ಅವರು ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಸಾವುಗಳು ಕೂಡಾ ಜಾಸ್ತಿಯಾಗುತ್ತಿವೆ. ಅದರಲ್ಲೂ ಐವತ್ತು ವರ್ಷದೊಳಗಿನವರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇದನ್ನು ತಡೆಗಟ್ಟು ಕುರಿತಂತೆ ಚರ್ಚೆ ನಡೆಸಲಾಯಿತು.

ಎಫ್‌ಐಸಿಸಿಐ ಕ್ಯಾನ್ಸರ್ ಕೇರ್‌ನಲ್ಲಿ ಬಹು-ಸ್ಟೇಕ್‌ಹೋಲ್ಡರ್ ಟಾಸ್ಕ್ ಫೋರ್ಸ್ ಅನ್ನು ರಚಿಸಿದೆ. ಇದು ಕ್ಯಾನ್ಸರ್ ಕೇರ್ ಪೂರೈಕೆದಾರರು, ಹಿರಿಯ ವೈದ್ಯರು, ಮೆಡ್‌ಟೆಕ್ ಮತ್ತು ಫಾರ್ಮಾ ಕಂಪನಿಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಂದ ಪ್ರಾತಿನಿಧ್ಯವನ್ನು ಹೊಂದಿದೆ.

 

Share Post