HealthSports

ಅಂತಾರಾಷ್ಟ್ರೀಯ ಚೆಸ್‌ ಆಟಗಾರ ಆಟವಾಡುತ್ತಿರುವಾಗಲೇ ಹೃದಯಾಘಾತಕ್ಕೆ ಬಲಿ!

ಢಾಕಾ; ಇತ್ತೀಚಿನ ದಿನಗಳಲ್ಲಿ ಯುವಕರು ಆಟವಾಡುತ್ತಿದ್ದಾಗ, ಜಿಮ್‌ ಮಾಡುತ್ತಿದ್ದಾಗ ಕುಸಿದುಬಿದ್ದು ಸಾವನ್ನಪ್ಪುತ್ತಿದ್ದಾರೆ.. ಕೆಲ ತಿಂಗಳಿಂದೀಚೆಗೆ ಹಲವು ಆಟಗಾರರು ಸಾವನ್ನಪ್ಪಿದ್ದನ್ನು ನಾವು ನೋಡಿದ್ದೇವೆ.. ಇದೀಗ ಚೆಸ್‌ ಆಟಗಾರರೊಬ್ಬರು ಆಡವಾಡುತ್ತಿದ್ದಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.. 

ಬಾಂಗ್ಲಾದೇಶದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್ ಚೆಸ್​ ಆಡುತ್ತಿರುವಾಗಲೇ ಕುಸಿದುಬಿದ್ದಿದ್ದಾರೆ.. ದಿಢೀರ್‌ ಅಂತ ಅವ ಉಸಿರು ನಿಂತಿದೆ.. ರಾಷ್ಟ್ರೀಯ ಚಾಂಪಿಯನ್‌ಶಿಪ್ 12ನೇ ಸುತ್ತಿನ ಪಂದ್ಯದ ಮೇಲೆ ಈ ದುರ್ಘಟನೆ ನಡೆದಿದೆ..

ಕುಸಿದುಬಿದ್ದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.. ಆದ್ರೆ ಅಷ್ಟರೊಳಗೆ ಅವರು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ..

 

Share Post