Health

India Covid Update : 24ಗಂಟೆಯಲ್ಲಿ 2,38,018 ಕೋವಿಡ್‌ ಪ್ರಕರಣಗಳು ದೃಢ

ನವದೆಹಲಿ : ಮೂರನೇ ಅಲೆ ಬೇಗ ಮುಗಿದು ಹೋಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇಂದು ನೆನ್ನೆ ದಾಖಲಾಗುತ್ತಿರುವ ಕೇಸ್‌ಗಳನ್ನು ನೋಡಿದರೆ ಆ ಮಾತು ನಿಜ ಎನಿಸುತ್ತಿದೆ. ದೇಶಾದ್ಯಂತ 24ಗಂಟೆಯಲ್ಲಿ 2,38,018 ಹೊಸ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡಿವೆ.

ನಿನ್ನೆ ಸೋಮವಾರ 2,58,089 ಪ್ರಕರಣಗಳು ದಾಖಲಾಗಿದ್ದವು. ನೆನ್ನೆಗಿಂತ ಇಂದು ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡಿದೆ. ಇನ್ನು ಈ ಅವಧಿಯಲ್ಲಿ 310 ಜನ ಸಾವನ್ನಪ್ಪಿದ್ದಾರೆ.

ಈಗ ಭಾರತದಲ್ಲಿ ಒಟ್ಟು 17,36,628 ಸಕ್ರಿಯ ಪ್ರಕರಣಗಳಿವೆ. ಇನ್ನು ಈವರೆಗೆ 8891 ಓಮಿಕ್ರಾನ್‌ ಪ್ರಕರಣಗಳು ದಾಖಲಾಗಿದೆ.

 

Share Post