CrimeHealth

ನಿದ್ದೆ ಮಂಪರಿನಲ್ಲಿ ಚಾಲಕನ ಎಡವಟ್ಟು; ಟೀ ಅಂಗಡಿಗೆ ಟ್ರಕ್‌ ನುಗ್ಗಿ 5 ಮಂದಿ ದುರ್ಮರಣ!

ಚೆನ್ನೈ; ನಿದ್ದೆ ಮಂಪರಿನಲ್ಲಿದ್ದ ಸಿಮೆಂಟ್‌ ತುಂಬಿದ್ದ ಟ್ರಕ್‌ ಡ್ರೈವರ್‌ ಎಡವಟ್ಟು ಮಾಡಿಕೊಂಡಿದ್ದಾನೆ. ಟ್ರಕ್‌ ಟೀ ಅಂಗಡಿಗೆ ನುಗ್ಗಿದ್ದು, ಘಟನೆಯಲ್ಲಿ ಐದು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ತಮಿಳುನಾಡಿದ ಪುದುಕೊಟ್ಟೈ ಬಳಿ ಈ ದುರಂತ ನಡೆದಿದೆ.

ಘಟನೆಯಲ್ಲಿ ಸುಮಾರು 19 ಮಂದಿ ಗಾಯಗೊಂಡಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಮೆಂಟ್‌ ತುಂಬಿದ ಟ್ರಕ್ ಅರಿಯಲೂರಿನಿಂದ ಶಿವಗಂಗೈಗೆ ತೆರಳುತ್ತಿತ್ತು. ಈ ವೇಳೆ ಈ ದುರ್ಘಟನೆ ನಡೆದಿದೆ.

ಟೀ ಅಂಗಡಿಯಲ್ಲಿ ಶಬರಿಮಲೈ ಯಾತ್ರಾರ್ಥಿಗಳು ಕಾರನ್ನು ನಿಲ್ಲಿಸಿ ಟೀ ಕುಡಿಯುತ್ತಿದ್ದರು. ಈ ವೇಳೆ ಟ್ರಕ್‌ ನುಗ್ಗಿದೆ. ಇದರಿಂದಾಗಿ ಟೀ ಅಂಗಡಿ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ಗಳು ಕೂಡಾ ಜಖಂಗೊಂಡಿವೆ.

 

Share Post