Technology

ವಾಟ್ಸಾಪ್‌ನಲ್ಲಿ ಬರಲಿದೆ ಫೋಟೋ, ವೀಡಿಯೋ ಎಡಿಟಿಂಗ್‌ ಫೀಚರ್

ಬೆಂಗಳೂರು : 2009ರಲ್ಲಿ ಶುರುವಾದ ವಾಟ್ಸಾಪ್‌ ಮೆಸ್ಸೆಂಜರ್‌ ಇಂದು ವಿಶ್ವದ ನಂಬರ್‌ ಒನ್‌ ಮೆಸ್ಸೆಜಿಂಗ್‌ ಅಪ್ಲಿಕೇಶನ್‌ ಆಗಿದೆ. 2014ರಲ್ಲಿ ಫೇಸ್‌ಬುಕ್‌ ಸಂಸ್ಥೆ ವಾಟ್ಸಾಪ್‌ ಅನ್ನು ಖರೀದಿ ಮಾಡಿದ  ನಂತರ ವಾಟ್ಸಾಪ್‌ ಇನ್ನಷ್ಟು ಪ್ರಚಾರ ಪಡೆಯಿತು. 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ವಾಟ್ಸಾಪ್‌ ಹೊಸ ಹೊಸ ಫೀಚರ್‌ ಮೂಲಕ ಜನರನ್ನು ಆಕರ್ಷಿಸುತ್ತಿದೆ.

ಈಗ ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌ ಬರಲಿದೆ. ಇನ್ನು ಮುಂದೆ ಫೋಟೋ ಮತ್ತು ವೀಡಿಯೋಗಳನ್ನು ಎಡಿಟ್‌ ಮಾಡಿ ಕಳಿಸುವ ಆಪ್ಷನ್‌ ಅನ್ನು ವಾಟ್ಸಾಪ್‌ ಪರಿಚಯಿಸಲಿದೆ. ನೀವು ಸ್ಟೇಟಸ್‌ಗೆ ಹಾಕುವ ಫೋಟೋ/ವೀಡಿಯೋ ಕೂಡ ಎಡಿಟ್‌ ಮಾಡಿ ಹಾಕಬಹುದಾಗಿದೆ. ಫೋಟೋಗಳನ್ನು ಹೆಚ್ಚು ಆಕರ್ಷಕವಾಗಿ ಎಡಿಟ್‌ ಮಾಡಬಹುದು, ಎಮೋಜಿ ಹಾಕಬಹುದಾಗಿದೆ ಇನ್ನು ಹತ್ತು ಹಲವು ಎಡಿಟ್‌ ಆಪ್ಷನ್‌ ಬರಲಿದೆ.

ಸಾಕಷ್ಟು ಥರ್ಡ್‌ ಪಾರ್ಟಿ ಆಪ್‌ ಮೂಲಕ ಜನರು ಎಡಿಟ್‌ ಮಾಡುತ್ತಿದ್ದಾರೆ. ವಾಟ್ಸಾಪ್‌ನಲ್ಲಿ ಈ ಫೀಚರ್‌ ಬರುವುದರಿಂದ ಸಾಕಷ್ಟು ಜನರಿಗೆ ಅನುಕೂಲ ಆಗಲಿದೆ.

ಈಗಾಗಲೇ ಬೀಟಾನಲ್ಲಿ ಅಪ್ಲಿಕೇಷನ್‌ ಇದೆ. ಇದರ ಬಗ್ಗೆ ವಾಬೀಟಾ ಮಾಹಿತಿ ಹಂಚಿಕೊಂಡಿದೆ. ಪರಿಶೀಲನೆ ಮುಗಿದ ಬಳಿಕ ಹೊಸ ಅಪ್ಡೇಟ್‌ ಬಿಡುಗಡೆಯಾಗುವುದು ಎಂದು ತಿಳಿಸಿದ್ದಾರೆ.

 

Share Post