ಬಾಳೆ ಎಲೆಯಲ್ಲಿ ಊಟ ಮಾಡಿದರೆ ಮುಖದ ಅಂದ ಹೆಚ್ಚಾಗುತ್ತದಂತೆ!
ಬೆಂಗಳೂರು; ಬಾಳೆ ಎಲೆ ಊಟ ಅಂದ್ರೆ ಜನ ಹುಡುಕಿಕೊಂಡು ಹೋಗುತ್ತಾರೆ.. ಬಾಳೆಯಲ್ಲಿ ಊಟ ಮಾಡಿದರೆ ಎಲ್ಲದಕ್ಕೂ ಒಳ್ಳೆಯದು ಅಂತ ಹೇಳುತ್ತಾರೆ.. ಹೀಗಾಗಿ ವಿಶೇಷ ಸಂದರ್ಭಗಳಲ್ಲೆಲ್ಲಾ ನಾವು ಬಾಳೆ ಎಲೆಯಲ್ಲಿ ಊಟ ಮಾಡುತ್ತೇವೆ.. ಕೆಲವು ಹೋಟೆಲ್‌ಗಳಲ್ಲಿ ವರ್ಷವಿಡೀ ಬಾಳೆ ಎಲೆಯಲ್ಲೇ ಊಟ ಬಡಿಸುತ್ತಾರೆ.. ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಹಾರದ ರುಚಿ ಹೆಚ್ಚುವುದಲ್ಲದೆ ಪರಿಮಳ ಕೂಡಾ ಚೆನ್ನಾಗಿರುತ್ತದೆ.. ಬಾಳೆಎಲೆ ಊಟ ಮಾಡುವುದರಿಂದ ಅದರಲ್ಲಿ ನೈಸರ್ಗಿಕ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಇರುತ್ತವೆ.. ಇದರಿಂದಾಗಿ ಹಾನಿಕಾರಣ ಬ್ಯಾಕ್ಟೀರಿಯಾಗಳುನಾಶ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.. ಇದಿಷ್ಟೇ ಅಲ್ಲ, ಬಾಳೆ ಎಲೆ ಊಟದಿಂದ ನಮ್ಮ ಸೌಂದರ್ಯ ಕೂಡಾ ಹೆಚ್ಚಾಗುತ್ತದೆ..
ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!
ಬಾಳೆ ಎಲೆಗಳಲ್ಲಿ ಪಾಲಿಫಿನಾಲ್‌ಗಳು, ವಿಟಮಿನ್ ಎ, ವಿಟಮಿನ್ ಸಿ ಸೇರಿ ಹಲವಾರು ಪೋಷಕಾಂಶಗಳಿರುತ್ತವೆ.. ಈ ಎಲೆಯಲ್ಲಿ ಬಿಸಿಯಾದ ಆಹಾರ ಬಡಿಸುವುದರಿಂದ ಎಲೆಯಲ್ಲಿ ಪೋಷಕಾಂಶಗಳು ಆಹಾರಕ್ಕೆ ವರ್ಗಾವಣೆಯಾಗುತ್ತವೆ.. ಅದರ ಪೌಷ್ಟಿಕಾಂಶದ ಮೌಲ್ಯವನ್ನು ಸುಧಾರಿಸುತ್ತದೆ.. ಬಾಳೆ ಎಲೆಗಳು ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಮಣ್ಣಿನಲ್ಲಿ ಸುಲಭವಾಗಿ ಸೇರಿಕೊಳ್ಳುತ್ತವೆ. ಬಾಳೆ ಎಲೆಯಲ್ಲಿ ಊಟ ಮಾಡಿದರೆ ಕೂದಲಿಗೆ ಕೂಡ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ..
ಇದನ್ನೂ ಓದಿ; ಡ್ರಗ್ಸ್ ಕೇಸ್‌ನಲ್ಲಿ ನಟಿ ರಕುಲ್ ಪ್ರೀತ್‌ಸಿಂಗ್ ಸಹೋದರ ಅರೆಸ್ಟ್!
ಬಾಳೆ ಎಲೆಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೆ, ಬಾಳೆ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಳಿವೆ.. ಇವುಗಳನ್ನು ತಿಂದರೆ ಆಹಾರದ ಮೂಲಕ ಯಾವುದೇ ರೋಗಾಣುಗಳು ನಮ್ಮ ದೇಹವನ್ನು ಸೇರುವುದಿಲ್ಲ. ಬಾಳೆ ಎಲೆಯು ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಸಹ ಉಪಯುಕ್ತವಾಗಿದೆ. ಬಾಳೆ ಎಲೆಯ ಮೇಲೆ ಶುಂಠಿ ಎಣ್ಣೆಯನ್ನು ಹಚ್ಚಿ ಮತ್ತು ದೇಹದ ಸುಟ್ಟ ಭಾಗದಲ್ಲಿ ಕಟ್ಟಿಕೊಳ್ಳಬೇಕು. ಹಾಗೆ ಮಾಡಿದರೆ ಗಾಯ ವಾಸಿಯಾಗುತ್ತದೆಂಬ ನಂಬಿಕೆ ಇದೆ..
ಇದನ್ನೂ ಓದಿ; ಶಾಲಾ ವಾಹನಗಳ ಕಲರ್ YELLOWನೇ ಯಾಕಿರುತ್ತೆ ಗೊತ್ತಾ..?
ಬಾಳೆ ಎಲೆಗಳಲ್ಲಿ ನಿಯಮಿತವಾಗಿ ಆಹಾರ ಸೇವನೆ ಮಾಡುವುದರಿಂದ ರಕ್ತವನ್ನು ಶುದ್ಧೀಕರಿಸುತ್ತದೆ. ರಾತ್ರಿ ಕುರುಡುತನದಂತಹ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಬಾಳೆ ಎಲೆ ತಿನ್ನುವುದರಿಂದ ತ್ವಚೆಗೂ ಒಳ್ಳೆಯದು. ಚರ್ಮದ ಮೇಲೆ ಹುಣ್ಣುಗಳು, ಮೊಡವೆಗಳು ಮತ್ತು ಕಲೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದುಬಂದಿದೆ..