Health

ಈ ಅಕ್ಕಿ ಬೇಯಿಸಿದರೆ ಮಾಂಸ ಆಗುತ್ತಂತೆ; ಇದು ನಾನ್‌ವೆಜ್‌ ಅಕ್ಕಿ ಕಣ್ರೀ!

ಬೆಂಗಳೂರು; ನೀವು ಮಾಂಸಪ್ರಿಯರೇ..? ಆದ್ರೆ ಪ್ರಾಣಿಗಳನ್ನು ಕೊಲ್ಲೋದಕ್ಕೆ ಇಷ್ಟವಿಲ್ಲವೇ..? ಹಾಗಾದ್ರೆ, ನಿಮಗಾಗಿಯೇ ಬಂದಿದೆ ವಿಶೇಷ ಮಾಂಸ… ಹೌದು, ಇನ್ಮೇಲೆ ಮಾಂಸ ಸೇವನೆ ಮಾಡಬೇಕಾದರೆ ಪ್ರಾಣಿಗಳನ್ನು ಸಾಯಿಸಬೇಕಾದ ಅವಶ್ಯಕತೆಯೇ ಇಲ್ಲ… ಕುಕ್ಕರ್‌ಗೆ ಅಕ್ಕಿ ಹಾಕಿ ಬೇಯಿಸಿಬಿಟ್ಟರೆ ಸಾಕು, ಮಾಂಸದ ಅಡುಗೆ ರೆಡಿ… ಅಕ್ಕಿ ಬೇಯಿಸಿದರೆ ಮಾಂಸದ ಅಡುಗೆ ಹೇಗೆ ರೆಡಿಯಾಗುತ್ತೆ ಅನ್ನೋ ಪ್ರಶ್ನೆ ನಿಮ್ಮದಾಗಿರಬಹುದು… ಆದ್ರೆ ಇದು ನಿಜ… ನೀವು ಈ ಅಕ್ಕಿ ಬೇಯಿಸಿದರೆ, ಅದು ಮಾಂಸವಾಗಿ ಬದಲಾಗುತ್ತೆ..! ಅದು ಹೇಗೆ ನೋಡೋಣ ಬನ್ನಿ..

ಲ್ಯಾಬ್‌ನಲ್ಲಿ ತಯಾರಾಗಿದೆ ನಾನ್‌ವೆಜ್‌ ಅಕ್ಕಿ;

ಲ್ಯಾಬ್‌ನಲ್ಲಿ ತಯಾರಾಗಿದೆ ನಾನ್‌ವೆಜ್‌ ಅಕ್ಕಿ; ಲ್ಯಾಬ್‌ನಲ್ಲಿ ಸಂಶೋಧಕರು ಮಾಂಸದ ರೀತಿಯ ಹೈಬ್ರೀಡ್‌ ಅಕ್ಕಿಯನ್ನು ಬೆಳೆಸಿದ್ದಾರೆ.. ಇದು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ, ಜೊತೆಗೆ ಪರಿಸರ ಸ್ನೇಹಿ ಅಕ್ಕಿ ಎಂದು ಸಂಶೋಧಕರು ಹೇಳುತ್ತಿದ್ದಾರೆ.

ಲ್ಯಾಬ್‌ನಲ್ಲಿ ಬೆಳೆಸಲಾದ ಈ ಅಕ್ಕಿಯಲ್ಲಿ ಪ್ರಾಣಿಗಳ ಮಾಂಸ ಹಾಗೂ ಕೊಬ್ಬಿನ ಕಣಗಳು ಇರುವಂತೆ ಸಂಶೋಧಕರು ನೋಡಿಕೊಂಡಿದ್ದಾರೆ. ಇದಕ್ಕಾಗಿ ಸಂಶೋಧಕರು ಮೊದಲಿಗೆ ಮೀನಿನಿಂದ ತೆಗೆದ ಜಿಗುಟು ಪದಾರ್ಥವನ್ನು ತೆಗೆದು ಅಕ್ಕಿಗೆ ಲೇಪನ ಮಾಡುತ್ತಾರೆ.. ಇದರಿಂದಾಗಿ ಪ್ರಾಣಿಯ ಮಾಂಸ ಕಣಗಳು ಅಕ್ಕಿಗೆ ಅಂಟಿಕೊಳ್ಳುತ್ತವೆ. ಅನಂತರ 11 ದಿನಗಳ ಕಾಲ ಆ ಅಕ್ಕಿಯನ್ನು ಪ್ರಾಯೋಗಿಕವಾಗಿ ಬೆಳೆಸಲಾಗುತ್ತದೆ.

ಬರಗಾಲದಲ್ಲಿ ಇದು ಅತ್ಯಂತ ಉಪಯುಕ್ತ; ಇಂತಹ ಪೌಷ್ಠಿಕಾಂಶಯುಕ್ತ ಆಹಾರ ಸಾಕಷ್ಟು ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುತ್ತದೆ. ಬರಗಾಲ ಬಂದಾಗ, ಆಹಾರದ ಕೊರತೆ ಉಂಟಾದಾಗ ಹೀಗೆ ಲ್ಯಾಬ್‌ ನಲ್ಲಿ ಬರೆದ ಆಹಾರವನ್ನು ಜನ ಬಳಸಬಹುದಾಗಿದೆ. ಇನ್ನು ಗಡಿಯಲ್ಲಿ ದೇಶ ಕಾಯುವ ಯೋಧರು. ಅಂತರೀಕ್ಷ ಪ್ರಯಾಣಿಕರಿಗೆ ಕೂಡಾ ಇದು ಉಪಯೋಗವಾಗಲಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ.

ಸಾಮಾನ್ಯ ಅಕ್ಕಿಗಿಂತ ಹೆಚ್ಚು ಪ್ರೋಟೀನ್‌ ಹೊಂದಿದೆ; ಆದರೆ, ಇಂತಹ ಮಾಂಸದ ಅಕ್ಕಿ ಮಾರುಕಟ್ಟೆಗೆ ಬಂದರೆ ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಹೈಬ್ರಿಡ್ ಅಕ್ಕಿ ಸಾಮಾನ್ಯ ಅಕ್ಕಿಗೆ ಹೋಲಿಸಿದರೆ ಸ್ವಲ್ಪ ದುರ್ಬಲವಾಗಿರುತ್ತದೆ. ಆದರೆ ಮ್ಯಾಟರ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಲೇಖನದ ಪ್ರಕಾರ ಈ ಮಾಂಸದ ಅಕ್ಕಿ ಹೆಚ್ಚು ಪ್ರೋಟೀನ್  ಹೊಂದಿದೆ.

ಈ ಅಕ್ಕಿಯಲ್ಲಿ ಶೇ.8ರಷ್ಟು ಪ್ರೊಟೀನ್ ಮತ್ತು ಶೇ.7ರಷ್ಟು ಕೊಬ್ಬಿನಂಶವಿದೆ ಎಂದು ದಕ್ಷಿಣ ಕೊರಿಯಾದ ಯೊನ್ಸೆ ವಿಶ್ವವಿದ್ಯಾಲಯದ ತಂಡ ಹೇಳಿದೆ. ಸಾಮಾನ್ಯ ಪ್ರಾಣಿ ಮಾಂಸಕ್ಕೆ ಹೋಲಿಸಿದರೆ, ಇದು ಕಡಿಮೆ ಇಂಗಾಲದ ಹೊರಸೂಸುವಿಕೆ ಹೊಂದಿದೆ. ಇದರಿಂದಾಗಿ ಮಾಂಸಕ್ಕಾಗಿ ಹೆಚ್ಚಿನ ಸಂಖ್ಯೆಯ ಜಾನುವಾರುಗಳನ್ನು ಬೆಳೆಸುವ ಅಗತ್ಯವೂ ಕಡಿಮೆಯಾಗುತ್ತದೆ.

ಹೈಬ್ರಿಡ್ ಮಾಂಸದ ಅಕ್ಕಿಯಲ್ಲಿನ ಪ್ರತಿ 100 ಗ್ರಾಂ (3.5 ಔನ್ಸ್) ಪ್ರೋಟೀನ್‌ಗೆ, 6.27 ಕೆಜಿ (13.8 ಪೌಂಡ್) ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಆದರೆ ಗೋಮಾಂಸ ಉತ್ಪಾದನೆಯು 8 ಪಟ್ಟು ಹೆಚ್ಚು ಇಂಗಾಲ ಹೊರಸೂಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹೆಚ್ಚಿನ ಸಂಪನ್ಮೂಲದ ಅಗತ್ಯತೆ ಇಲ್ಲ;

ಹೆಚ್ಚಿನ ಸಂಪನ್ಮೂಲದ ಅಗತ್ಯತೆ ಇಲ್ಲ; ದೇಹಕ್ಕೆ ಹೆಚ್ಚಿನ ಪ್ರೊಟೀನ್‌ಗಾಗಿ ಜನ ಮಾಂಸ ಸೇವನೆ ಮಾಡುತ್ತಾರೆ.. ಆದ್ರೆ ಪ್ರಾಣಿಗಳಿಂದ ಮಾಂಸ ಉತ್ಪಾದನೆಗಾಗಿ ಹೆಚ್ಚಿನ ಸಂಪನ್ಮೂಲಗಳು ಹಾಗೂ ನೀರಿನ ಅಗತ್ಯವಿರುತ್ತದೆ.. ಮಾಂಸಕ್ಕಾಗಿ ಹೆಚ್ಚಿನ ಪ್ರಾಣಿಗಳ ಸಾಕಾಣಿಕೆಯಿಂದ ಇಂಗಾಲದ ಹೊರಸೂಸುವಿಕೆ ಕೂಡಾ ದೊಡ್ಡ ಪ್ರಮಾಣದಲ್ಲಿರುತ್ತದೆ.. ಹೀಗಾಗಿ ಸಂಶೋಧಕರು ಇಂತಹ ಯಾವುದೇ ಕಷ್ಟವಿಲ್ಲದೆ, ನಮಗೆ ಬೇಕಾದ ಎಲ್ಲಾ ಪೋಷಕಾಂಶಗಳಿರುವ ಪ್ರೋಟೀನ್‌ ಮಾಂಸದ ಅಕ್ಕಿಯನ್ನು ಲ್ಯಾಬ್‌ನಲ್ಲಿ ಬೆಳೆಸಿದ್ದಾರೆ. ಈ ಅಕ್ಕಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ..

ಮಾಂಸದ ರೀತಿಯ ಟೇಸ್ಟ್‌ ಕೊಡುತ್ತದೆ;

ಮಾಂಸದ ರೀತಿಯ ಟೇಸ್ಟ್‌ ಕೊಡುತ್ತದೆ; ಈ ಮಾಂಸದ ಅಕ್ಕಿ ಲ್ಯಾಬ್‌ನಲ್ಲಿ ತಯಾರಾಗಿದ್ದರೂ, ಇದರಿಂದ ಅಡುಗೆ ಮಾಡಿ ಸೇವಿಸಿದರೆ ಮಾಂಸ ಸೇವನೆ ಮಾಡಿದ ಅನುಭವವೇ ಆಗುತ್ತದೆ.. ಸೇಮ್‌ ಮಾಂಸದ ಟೇಸ್ಟ್‌ ಕೊಡುತ್ತದೆ.. ಹೀಗಾಗಿ ಮಾಂಸ ಪ್ರಿಯರು ಕಡಿಮೆ ಹಣದಲ್ಲಿ ಗುಣಮಟ್ಟದ ಮಾಂಸ ಸೇವನೆ ಮಾಡಬಹುದು..

ಅಕ್ಕಿ ಕಾಳುಗಳಲ್ಲಿ ಮಾಂಸಭರಿತ ಕೋಶಗಳನ್ನು ಬೆಳೆಯುತ್ತವೆ ಎಂದು ತಜ್ಞರು ನಿರೀಕ್ಷೆ ಮಾಡಿರಲಿಲ್ಲವಂತೆ.. ಆದ್ರೆ ಅವರ ಕಣ್ಣಮುಂದೆಯೇ ಪವಾಡ ನಡೆದುಹೋಗಿದೆ.. ಅದನ್ನು ನೋಡಿ ಸಂಶೋಧಕರು ಫುಲ್‌ ಖುಷಿಯಾಗಿದ್ದಾರೆ.. ಶೀಘ್ರದಲ್ಲೇ ಮಾಂಸದ ಅಕ್ಕಿಯನ್ನು ಮಾರುಕಟ್ಟೆಗೆ ಬಿಡಲು ಸಿದ್ಧತೆ ನಡೆಸಿದ್ದಾರೆ.

ಜನರು ಹೇಗೆ ಸ್ಪಂದನೆ ಮಾಡುತ್ತಾರೆ ಅನ್ನೋದೇ ಚಿಂತೆ!;

ಜನರು ಹೇಗೆ ಸ್ಪಂದನೆ ಮಾಡುತ್ತಾರೆ ಅನ್ನೋದೇ ಚಿಂತೆ!; ಅಕ್ಕಿಯಂತಹ ಧಾನ್ಯಗಳ ರಚನೆ ತಿರುಳಿರುವ ಕೋಶಗಳ ಬೆಳವಣಿಗೆಗೆ ಸೂಕ್ತವಾಗಿದೆ. ಇದಲ್ಲದೆ, ಅವು ಅವರಿಗೆ ಪೋಷಕಾಂಶಗಳನ್ನು ಸಹ ಒದಗಿಸುತ್ತವೆ. ಆದರೆ ಪ್ರಯೋಗಾಲಯದಲ್ಲಿ ಮಾಂಸ ಉತ್ಪನ್ನಗಳನ್ನು ಬೆಳೆಯುವುದು ಈ ತಂಡದಿಂದ ಪ್ರಾರಂಭವಾಗಲಿಲ್ಲ.

ಲ್ಯಾಬ್ ನಿರ್ಮಿತ ಬರ್ಗರ್ ಅನ್ನು 2013 ರಲ್ಲಿ ಲಂಡನ್‌ನಲ್ಲಿ ಕಂಡುಹಿಡಿಯಲಾಯಿತು. ಅಂತಹ ಮಾಂಸವನ್ನು ಮಾರುಕಟ್ಟೆಗೆ ತರಲು ಪ್ರಪಂಚದಾದ್ಯಂತ ಅನೇಕ ಕಂಪನಿಗಳು ಪ್ರಯತ್ನಿಸುತ್ತಿವೆ. ಪ್ರಪಂಚದಲ್ಲೇ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ತಯಾರಿಸಿದ ಕೋಳಿ ಉತ್ಪನ್ನಗಳನ್ನು ಸಿಂಗಾಪುರ ದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ.

ಮತ್ತೊಂದೆಡೆ, ಇಟಲಿ ಸರ್ಕಾರ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ರಕ್ಷಿಸುವ ಸಲುವಾಗಿ ಪ್ರಯೋಗಾಲಯದಲ್ಲಿ ಬೆಳೆದ ಮಾಂಸವನ್ನು ನಿಷೇಧಿಸುವ ಮಸೂದೆ ತಂದಿದೆ. ಪ್ರಯೋಗಾಲಯದಲ್ಲಿ ಬೆಳೆದ ಮಾಂಸದಲ್ಲಿ ಯಾವುದೇ ಸಂಶ್ಲೇಷಿತ ಅಂಶ ಇರುವುದಿಲ್ಲ ಎಂದು ವಿಮರ್ಶಕರು ಹೇಳುತ್ತಿದ್ದಾರೆ. ಅವು ನೈಸರ್ಗಿಕ ಮಾಂಸ ಕೋಶಗಳಿಂದ ಮಾತ್ರ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ಆದ್ದರಿಂದ ಈ ಮಾಂಸದ ಅಕ್ಕಿ ಮಾರುಕಟ್ಟೆಗೆ ಬಂದರೆ ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಲ್ಯಾಬ್‌ನಲ್ಲಿ ತಯಾರಾದ ಆಹಾರದ ಬಗ್ಗೆ ಜನರಿಗೆ ಈಗಲೂ ನಂಬಿಕೆ ಕಡಿಮೆ. ಇದರಿಂದಾಗಿ ಆರೋಗ್ಯದ ಸಮಸ್ಯೆ ಉಂಟಾಗಬಹುದು ಎಂಬ ಭೀತಿಯೂ ಇದೆ.. ಹೀಗಾಗಿ, ಇದನ್ನು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು.

ಸಂಶೋಧಕರು ಈ ಬಗ್ಗೆ  ಹೇಳೋದೇನು..?;

ಸಂಶೋಧಕರು ಈ ಬಗ್ಗೆ  ಹೇಳೋದೇನು..?;  ಸಂಶೋಧನೆಗಳು ಭವಿಷ್ಯದಲ್ಲಿ ಆರೋಗ್ಯಕರ, ಹವಾಮಾನ ಸ್ನೇಹಿ ಆಹಾರವನ್ನು ಉತ್ಪಾದಿಸುವ ಭರವಸೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

ವೆಚ್ಚ ಮತ್ತು ಹವಾಮಾನದ ಪ್ರಭಾವದ ದೃಷ್ಟಿಯಿಂದ ನೋಡಿದಾಗ ಈ ಎಲ್ಲಾ ಮಾಹಿತಿಯು ತುಂಬಾ ಧನಾತ್ಮಕವಾಗಿ ಕಾಣುತ್ತದೆ. ಇಲ್ಲದಿದ್ದರೆ, ಈ ಲ್ಯಾಬ್ ಮಾಡಿದ ಆಹಾರ ಜನರ ಹಸಿವಿನ ಮೇಲೆ ಕಠಿಣ ಪರೀಕ್ಷೆಯಂತಿದೆ ಎಂದೂ ಸಂಶೋಧಕರು ಹೇಳುತ್ತಿದ್ದಾರೆ.

ಈ ಲ್ಯಾಬ್-ನಿರ್ಮಿತ ಮಾಂಸವು ಸಂಸ್ಕರಿಸಿದ ಮಾಂಸಕ್ಕೆ ಪರ್ಯಾಯವಾಗಿದೆ. ಜನರ ಆರೋಗ್ಯ ಮತ್ತು ಪರಿಸರಕ್ಕೆ ಉತ್ತಮವಾದ ಆಹಾರವನ್ನು ಅಭಿವೃದ್ಧಿಪಡಿಸುವುದು ದೊಡ್ಡ ಸವಾಲು. ಈ ಅಧ್ಯಯನದಿಂದ ಅದು ಸಾಧ್ಯವಾಗುತ್ತಿದೆ ಎಂದೂ ಸಂಶೋಧಕರು ಭರವಸೆ ನೀಡುತ್ತಿದ್ದಾರೆ.

Share Post