Health

ಮೈಗ್ರೆನ್‌ ಸಮಸ್ಯೆ ಕಾಡುತ್ತಿದ್ದಿಯಾ? ಹಾಗಾದರೆ ಹೀಗೆ ಮಾಡಿ

ನಮಗೆ ಆಗಾಗ ಕಂಡು ಬರುವ ಆರೋಗ್ಯ ಸಮಸ್ಯೆಗಳಲ್ಲಿ ತಲೆ ನೋವು ಕೂಡ ಒಂದು. ಕೆಲವರಿಗೆ ದೀರ್ಘ ಕಾಲವಾಗಿ ಕಾಡುವ ತಲೆ ನೋವು ಕಾಡುತ್ತದೆ.ಇನ್ನು ಕೆಲವರಿಗೆ ಮೈಗ್ರೆನ್‌ ರೂಪದಲ್ಲಿ ತಲೆನೋವು ಕಾಣಿಸಿಕೊಳ್ಳತ್ತದೆ. ಎಷ್ಟೋ ಜನರು ಇಂತಹ ಮೈಗ್ರೆನ್ ತಲೆ ನೋವನ್ನು ಸಹಿಸಿಕೊಳ್ಳಲಾಗದೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಮೈಗ್ರೆನ್‌  ಬಂತು ಅಂದರೆ ಸಾಕು ವಾಂತಿ, ಜ್ವರ, ಶೀತ, ಕುತ್ತಿಗೆ ನೋವು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದು ನಿವಾರಣೆಗೆ ಮನೆಯಲ್ಲೇ ಇರುವ ಸಾಮಾಗ್ರಿಗಳನ್ನೇ ಟ್ರೈ ಮಾಡಿ ನೋಡಿ.
ಒಂದು ಕೊಬ್ಬರಿ ಗಿಟುಗು, ಹಾಲು, ಗಸಗಸೆ ಹಾಗೂ ಬಾದಾಮಿಯನ್ನು ತೆಗೆದುಕೊಳ್ಳಬೇಕು. ಒಣ ಕೊಬ್ಬರಿ ಗಿಟುಗನ್ನು ಮೇಲೆ ಒಂದು ರಂಧ್ರದ ರೀತಿಯಲ್ಲಿ ಮುಚ್ಚಲು ಬರುವ ಹಾಗೆ ಕಟ್ ಮಾಡಿಕೊಂಡು ಅದಕ್ಕೆ ಒಂದು ಚಮಚ ಗಸಗಸೆ ಹಾಗೂ ಸ್ವಲ್ಪ ಬಾದಾಮಿಯನ್ನು ಹಾಕಿ ಕೊಬ್ಬರಿಯ  ರಂಧ್ರವನ್ನು ಮುಚ್ಚಬೇಕು. ಇದನ್ನು ಹಾಲು ಇರುವ ಪಾತ್ರೆಗೆ ಹಾಕಿ ಕಡಿಮೆ ಉರಿಯಲ್ಲಿ ಇಟ್ಟು ಕುದಿಸಬೇಕು. ಇದನ್ನು 40 ನಿಮಿಷ ಹಾಲಿನಲ್ಲಿ ಕುದಿಸಬೇಕು.ಕೊಬ್ಬರಿಯನ್ನು ಹಾಲಿನಿಂದ ತೆಗೆದು ಬಿಸಿ ಆರಿದ ಮೇಲೆ ಅದನ್ನು ಕಟ್ ಮಾಡಿ ಕೊಬ್ಬರಿ, ಅದರಲ್ಲಿರುವ ಗಸಗಸೆ ಹಾಗೂ ಬಾದಾಮಿಯನ್ನು ಹಾಗೂ ಅದಕ್ಕೆ ಕಲ್ಲು ಸಕ್ಕರೆಯನ್ನು ಹಾಕಿ ಮಿಕ್ಸರ್ ಯಿಂದ ಸಣ್ಣಗೆ ಪುಡಿ ಮಾಡಿ ಇಟ್ಟು ಕೊಳ್ಳಬೇಕು.. ಈ ಪುಡಿಯನ್ನು ರಾತ್ರಿ ಮಲಗುವ ಮುಂಚೆ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಅಥಾವ ಹಾಗೆ ಈ ಪುಡಿಯನ್ನು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ಬರುವುದಿಲ್ಲ.

Share Post