CrimeNational

ಇದು ರಣಭೀಕರ ಅಪಘಾತ; ಮಿನಿ ಬಸ್‌ ಕಂದಕಕ್ಕೆ ಉರುಳಿ 28 ಮಂದಿ ದುರ್ಮರಣ!

ಬಲೂಚಿಸ್ತಾನ; ಬಲೂಚಿಸ್ತಾನದಲ್ಲಿ ರಣಭೀಕರ ರಸ್ತೆ ಅಪಘಾತ ಸಂಭವಿಸಿದೆ,, ಮಿನಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದ್ದು, 28 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಟರ್ಬತ್​ನಿಂದ ಕ್ವೆಟ್ಟಾಗೆ ತೆರಳುತ್ತಿದ್ದ ವಾಶುಕ್​​ ಪಟ್ಟಣದಲ್ಲಿ ಬರುವ ಕಂದಕಕ್ಕೆ ಉರುಳಿಬಿದ್ದು ಈ ದುರಂತ ನಡೆದಿದೆ..

ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿ 28 ಮಂದಿ ಸಾವಿಗೀಡಾಗಿದ್ದಾರೆ.. ಬಸ್‌ ಅನ್ನು ಅತಿವೇಗವಾಗಿ ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.. ವೇಗವಾಗಿ ಹೋಗುತ್ತಿದ್ದಾಗ ಬಸ್‌ ಟೈರ್‌ ಸ್ಫೋಟಗೊಂಡಿದೆ.. ಇದರಿಂದಾಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿದೆ.. ಸೀದಾ ಹೋಗಿ ಕಂದಕಕ್ಕೆ ಉರುಳಿಬಿದ್ದಿದೆ..

ದುರಂತದಲ್ಲಿ 22 ಮಂದಿ ಗಾಯಗೊಂಡಿದ್ದಾರೆ.. ಇದರಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಗಾಯಾಳುಗಳನ್ನು ಬಾಸಿಮಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

 

Share Post