Health

Idli; ಇಡ್ಲಿ ತಿನ್ನೋದ್ರಿಂದ ಇಷ್ಟೆಲ್ಲಾ ಲಾಭಗಳಿವೆಯಾ..?

ಇಡ್ಲಿ… ಯಾರಿಗೆ ಇಷ್ಟ ಇಲ್ಲ ಹೇಳಿ… ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಬೆಳಗಿನ ತಿಂಡಿಗೆ ಅತಿಹೆಚ್ಚು ತಿನ್ನೋದೇ ಇಡ್ಲಿ. ಅದರಲ್ಲೂ ಹೋಟೆಲ್‌ಗಳಲ್ಲಿ ಕಾಮನ್‌ ತಿಂಡಿ ಇದೆ… ಇನ್ನು ಅನಾರೋಗ್ಯಕ್ಕೀಡಾದವರಿಗೆ ಇಡ್ಲಿಯನ್ನೇ ಕೊಡೋದು.. ಅದೊಂದು ಔಷಧಿ ರೀತಿ ಅಂದುಕೊಂಡಿದ್ದಾರೆ ಕೆಲವರು.. ಇಡ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಈ ಕಾರಣದಿಂದ ಎಲ್ಲರೂ ಇಡ್ಲಿಯನ್ನು ಇಷ್ಟಪಡುತ್ತಾರೆ.

ಇದನ್ನೂ ಓದಿ; Vitamin-D; ಬೆಂಗಳೂರಿನ ಶೇ.95 ಮಂದಿಗೆ Vitamin-D ಕೊರತೆ; ಬೇಗ ಎದ್ದು ಬಿಸಿಲಿಗೆ ಮೈ ಒಡ್ಡಿ!

ಈ ಇಡ್ಲಿಯಿಂದ ಏನು ಉಪಯೋಗ..?

ಇಡ್ಲಿ ಗ್ಲುಟನ್‌ ಮುಕ್ತವಾದ ಆಹಾರವಾಗಿದೆ. ಬೇರೆ ಆಹಾರಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇಡ್ಲಿಯಲ್ಲಿ ಕೇವಲ 33 ಕ್ಯಾಲೊರಿಗಳಿರುತ್ತವೆ.. ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತಿದ್ದವರು, ಈ ಇಡ್ಲಿಯನ್ನು ಸೇವಿಸುತ್ತಾರೆ. ಇಡ್ಲಿಯಿಂದ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗೋದಿಲ್ಲ. ಇಡ್ಲಿ ತಿನ್ನೋದ್ರಿಂದ ಇನ್ನೂ ನಮ್ಮ ಆರೋಗ್ಯ ವೃದ್ಧಿಸುತ್ತದೆ.

ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಹೇರಳ;

ಇನ್ನು ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿರುತ್ತವೆ. ಇದರಿಂದಾಗಿ ನಮಗೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ. ವ್ಯಾಯಾಮ ಮಾಡಿ, ಇಡ್ಲಿ ತಿಂದರೆ ನಮ್ಮ ದಿನ ಉತ್ತಮವಾಗಿ ಆರಂಭವಾಗುತ್ತದೆ ಎಂದೇ ಲೆಕ್ಕ.. ಕ್ಯಾಲೊರಿಗಳು ಕಡಿಮೆ ಇರುವುದರಿಂದ ಇಡ್ಲಿ ಬಹುಬೇಗ ಜೀರ್ಣವಾಗುತ್ತದೆ. ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಈ ಕಾರಣಕ್ಕಾಗಿ ರೋಗಿಗಳಿಗೆ ಇಡ್ಲಿಯನ್ನು ಹೆಚ್ಚಾಗಿ ತಿನ್ನಿಸುತ್ತಾರೆ.

ಇದನ್ನೂ ಓದಿ; Raagi benefits; ರಾಗಿಯನ್ನು ಇಷ್ಟೆಲ್ಲಾ ರೀತಿಯಲ್ಲಿ ಬಳಸಬಹುದಾ..?, ರಾಗಿ ನಿಮ್ಮ ಆರೋಗ್ಯದ ಸಿರಿ..!

ಅಗತ್ಯ ಪ್ರೊಟೀನ್‌ಗಳ ಮೂಲ ಇಡ್ಲಿ;

ಇಡ್ಲಿಯನ್ನು ಅಕ್ಕಿಯಿಂದ ಮಾಡುತ್ತಾರೆ. ಅಕ್ಕಿ ಹಿಟ್ಟು ರುಬ್ಬಿ, ಅದನ್ನು ಹುಳಿ ಬರುವಂತೆ ಮಾಡಿ ಅದರಿಂದ ಇಡ್ಲಿ ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ. ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನಮ್ಮ ದೇಹದ ಬೆಳವಣಿಗೆಗೂ ಅಗತ್ಯವಾದ ಪ್ರೊಟೀನ್‌ ಸಿಗುತ್ತದೆ.

ಹಿಟ್ಟಿನ ಹುದುಗಿವಿಕೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಇದರಿಂದ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಒಡೆಯುತ್ತವೆ. ಇದರಿಂದಾಗಿ ಜೀರ್ಣಕ್ರಿಯೆ ತುಂಬಾನೇ ಸುಲಭವಾಗುತ್ತದೆ. ಜತೆಗೆ ಹೊಟ್ಟೆಯಲ್ಲಿ ಯಾವುದೇ ಕಿರಿಕಿರಿ ಆಗುವುದಿಲ್ಲ. ನಮ್ಮ ಹೊಟ್ಟೆ ಆರಾಮವಾಗಿರುತ್ತದೆ. ಇದರಿಂದ ಮನಸು ಕೂಡಾ ಶಾಂತವಾಗಿರುತ್ತದೆ.

ವಿಟಮಿನ್‌ ಬಿ ಇಡ್ಲಿಯಿಂದ ಸಿಗುತ್ತದೆ!;

ಇಡ್ಲಿ ಹುದುಗುತ್ತದೆ. ಇದರಿಂದಾಗಿ ನಮಗೆ ವಿಟಮಿನ್‌ ಬಿ ಸಿಗುತ್ತದೆ. ಇಡ್ಲಿಯಲ್ಲಿ ಕೊಬ್ಬಿನಂಶ ಅತ್ಯಂತ ಕಡಿಮೆ ಇರುತ್ತದೆ. ಹೃದಯದ ಆರೋಗ್ಯವನ್ನು ಕೂಡಾ ಇಡ್ಲಿ ಕಾಪಾಡುತ್ತದೆ. ಇಡ್ಲಿ ಅಂಟುಮುಕ್ತವಾಗಿದ್ದು, ಅಕ್ಕಿ ಹಾಗೂ ಉದ್ದಿನ ಬೇಳೆಯಿಂದ ಇದನ್ನು ತಯಾರು ಮಾಡುತ್ತಾರೆ. ಒಟ್ಟಾರೆಯಾಗಿ ಇದು ಆರೋಗ್ಯಕ್ಕೆ ಉತ್ತಮ ಸಂಗಾತಿಯಾಗಿದೆ.

ಇಡ್ಲಿಗಾಗಿ ಹುಡುಕಿಕೊಂಡು ಬರುತ್ತಾರೆ;

ಇಡ್ಲಿ ಆರೋಗ್ಯಕ್ಕೆ ಒಳ್ಳೆಯದು.. ಈ ಇಡ್ಲಿ ಎಷ್ಟೋ ಜನಕ್ಕೆ ತುಂಬಾ ಪ್ರಿಯವಾದುದು.. ಇಡ್ಲಿ ತಿನ್ನೋದಕ್ಕೆ ಹತ್ತಾರು ಕಿಲೋ ಮೀಟರ್‌ ಹುಡುಕಿಕೊಂಡು ಬರುವವರಿದ್ದಾರೆ. ಮಲ್ಲೇಶ್ವರಂನಲ್ಲಿ ಒಂದು ಹೋಟೆಲ್‌ ಇದೆ. ಆ ಹೋಟೆಲ್‌ನಲ್ಲಿ ಇಡ್ಲಿ ತಿನ್ನಲು ದೂರದೂರಿನಿಂದ ಬರುತ್ತಾರೆ. ದೀಪಿಕಾ ಪಡುಕೋಣೆಯವರು ಕೂಡಾ ಅಲ್ಲಿಗೆ ಬಂದು ಇಡ್ಲಿ ತಿಂದು ಹೋಗುತ್ತಾರೆ. ಇನ್ನು ಬಿಡದಿಯಲ್ಲಿರುವ ಒಂದು ಹೋಟೆಲ್‌ನ ಇಡ್ಲಿ ತುಂಬಾನೇ ಫೇಮಸ್‌. ಆ ಹೋಟೆಲ್‌ನಿಂದ ಇಡ್ಲಿ ತಿನ್ನಲು ಬೆಂಗಳೂರಿನಿಂದ ಜನ ಹುಡುಕಿಕೊಂಡು ಹೋಗುತ್ತಾರೆ.

 

Share Post