Vitamin-D; ಬೆಂಗಳೂರಿನ ಶೇ.95 ಮಂದಿಗೆ Vitamin-D ಕೊರತೆ; ಬೇಗ ಎದ್ದು ಬಿಸಿಲಿಗೆ ಮೈ ಒಡ್ಡಿ!
ಬೆಂಗಳೂರು; ಮುಂಜಾನೆಯ ಸೂರ್ಯನ ಬೆಳಕಿನಲ್ಲಿ ವಿಟಮಿನ್-ಡಿ (Vitamin-D) ಇದೆ. ಮುಂಜಾನೆ ಬಿಸಿಲಿಗೆ ಮೈ ಒಡ್ಡಿದರೆ ನಮಗೆ ಬೇಕಾದಷ್ಟು ವಿಟಮಿನ್ ಡಿ ಸಿಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ವೈದ್ಯರು ಕೂಡಾ ಬೆಳಗಿನ ಹೊತ್ತು ಸೂರ್ಯನಿಗೆ ಮುಖವೊಡ್ಡಿ ಎಂದು ಹೇಳುತ್ತಿರುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಸಿಸುವ ಜನರು ತಮ್ಮ ಬ್ಯುಸಿ ಲೈಫ್‌ನಲ್ಲಿ ಸೂರ್ಯೋದಯ, ಸೂರ್ಯಾಸ್ತ ಎರಡನ್ನೂ ನೋಡೋದಕ್ಕೆ ಆಗುತ್ತಿಲ್ಲ. ಇದರಿಂದಾಗಿ ಬಹುತೇಕ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ.
ಶೇ.95 ಮಂದಿಗೆ ವಿಟಮಿನ್-ಡಿ ಕೊರತೆ..!;
ಶೇ.95 ಮಂದಿಗೆ ವಿಟಮಿನ್-ಡಿ ಕೊರತೆ..!; ವಿಟಿಮಿನ್ ಡಿ ಯಿಂದಾಗಿ ನಮ್ಮ ದೇಹದ ಚರ್ಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಆದ್ರೆ ಕೆಲಸ ಮಾಡುವ ಬಹುತೇಕ ಮಂದಿ ಸೂಯ್ತಾಸ್ತಕ್ಕೆ ಮೊದಲೇ ಕಚೇರಿ ಸೇರಿಕೊಂಡಿರುತ್ತಾರೆ. ಇಲ್ಲವೇ ರಾತ್ರಿ ಲೇಟಾಗಿ ಮನೆಗೆ ಬಂದು, ಬೆಳಗ್ಗೆ ಲೇಟಾಗಿ ಏಳುತ್ತಾರೆ. ಇದರಿಂದಾಗಿ ಬೆಳಗ್ಗೆ ಹಾಗೂ ಸಂಜೆಯ ಸೂರ್ಯನ ಶಾಖ ಜನಕ್ಕೆ ತಗಲುವುದೇ ಇಲ್ಲ. ಇದರಿಂದಾಗಿಯೇ ಬೆಂಗಳೂರಿನ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ.
ಸುಮಾರು ಶೇ 95 ರಷ್ಟು ಬೆಂಗಳೂರಿಗರು ವಿಟಮಿನ್-ಡಿ ಕೊರತೆಯನ್ನು ಹೊಂದಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದರಿಂದಾಗಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸೂರ್ಯನ ಅಲರ್ಜಿ ಜಾಸ್ತಿಯಾಗುತ್ತಿದೆ;
ಸೂರ್ಯನ ಅಲರ್ಜಿ ಜಾಸ್ತಿಯಾಗುತ್ತಿದೆ; ಎಷ್ಟೋ ತಿಂಗಳು ಅಥವಾ ವರ್ಷಗಳ ಕಾಲ ನಗರಗಳಲ್ಲಿ ಜನ ಸೂರ್ಯೋದಯ, ಸೂರ್ಯಾಸ್ತವನ್ನೇ ನೋಡೋದಿಲ್ಲ. ಇದರಿಂದಾಗಿ ಯಾವಾಗಾದರೂ ಒಮ್ಮೆ ಸೂರ್ಯನಿಗೆ ಮೈ ಒಡ್ಡಿದಾಗ ಅವರಿಗೆ ಅಲರ್ಜಿ ಶುರುವಾಗುತ್ತಿದೆ.. ಸೂರ್ಯನಿಂದ ಅಲರ್ಜಿ ಉಂಟಾಗುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ವೈದ್ಯರಿಗೂ ಒಂದು ರೀತಿಯ ಸವಾಲಾಗಿ ಪರಿಣಮಿಸಿದೆ.
ಸೂರ್ಯನಿಗೆ ಮೈ ಒಡ್ಡಲು ಶಿಫಾರಸು ಮಾಡೋದಕ್ಕೆ ಹಿಂದೇಟು;
ಸೂರ್ಯನಿಗೆ ಮೈ ಒಡ್ಡಲು ಶಿಫಾರಸು ಮಾಡೋದಕ್ಕೆ ಹಿಂದೇಟು; ಮೂಳೆಚಿಕಿತ್ಸಕರು, ಚರ್ಮರೋಗ ತಜ್ಞರು ಮತ್ತು ಆಂಕೊಲಾಜಿಸ್ಟ್‌ಗಳು ಸೇರಿ ವೈದ್ಯರಿಗೆ ಇದೊಂದು ವಿಚಾರ ತುಂಬಾ ಕಳವಳಕಾರಿಯಾಗಿದೆ. ಎಷ್ಟೋ ವರ್ಷಗಳ ಹಂತ ನಂತರ ಸೂರ್ಯನಿಗೆ ಮೈ ಒಡ್ಡಿದರೆ ಅವರಿಗೆ ಅಲರ್ಜಿ ಉಂಟಾಗುತ್ತಿದೆ. ಹೀಗಾಗಿ ವಿಟಮಿನ್ ಡಿ ಕೊರತೆ ಇದ್ದರೂ, ಸೂರ್ಯನಿಗೆ ಮೈ ಒಡ್ಡುವಂತೆ ತಿಳಿಸೋದಕ್ಕೆ ವೈದ್ಯರು ಹಿಂಜರಿಯುತ್ತಿದ್ದಾರೆ.
ಇದನ್ನೂ ಓದಿ; Raagi benefits; ರಾಗಿಯನ್ನು ಇಷ್ಟೆಲ್ಲಾ ರೀತಿಯಲ್ಲಿ ಬಳಸಬಹುದಾ..?, ರಾಗಿ ನಿಮ್ಮ ಆರೋಗ್ಯದ ಸಿರಿ..!
ಯಾವ ಸಮಯದಲ್ಲಿ ಸೂರ್ಯನಿಗೆ ಮೈ ಒಡ್ಡಬೇಕು;
ಯಾವ ಸಮಯದಲ್ಲಿ ಸೂರ್ಯನಿಗೆ ಮೈ ಒಡ್ಡಬೇಕು; ಬೆಳಿಗ್ಗೆ 8 ಗಂಟೆಗೆ ಮೊದಲು ಹಾಗೂ ಮಧ್ಯಾಹ್ನ 3.30 ರಿಂದ ಸಂಜೆ 5ರ ನಡುವೆ ಸೂರ್ಯನಿಗೆ ಮೈ ಒಡ್ಡಬಹುದು. ಯಾಕಂದ್ರೆ ಈ ಸಮಯದಲ್ಲಿ ನಮ್ಮ ಮೈಗೆ ವಿಟಮಿನ್ ಡಿ ಸೂರ್ಯನ ಮೂಲಕ ಹೇರಳವಾಗಿ ದೊರೆಯುತ್ತಿದೆ. ಜೊತೆಗೆ ಸೂರ್ಯ ಕಿರಣಗಳು ಕೂಡಾ ಹೆಚ್ಚು ಕಠಿಣವಾಗಿರುವುದಿಲ್ಲ.
ಇನ್ನು ಮೊದಲೆಲ್ಲಾ ಜನರು ಬೆಳಗ್ಗೆ ಎದ್ದ ಕೂಡಲೇ ಬಿಸಿಲಿಗೆ ಕೂರುತ್ತಿದ್ದರು. ಕನಿಷ್ಠ 20 ನಿಮಿಷಗಳ ಕಾಲ ಬಿಸಿಲಲ್ಲಿ ಕೂರುತ್ತಿದ್ದರು. ಇದರಿಂದಾಗಿ ಮೈಗೆ ವಿಟಮಿನ್ ಡಿ ಹೇರಳವಾಗಿ ಸಿಗುತ್ತಿತ್ತು. ಆದ್ರೆ ಈಗ 5 ರಿಂದ 10 ನಿಮಿಷ ಕೂಡಾ ಬಿಸಲಿಗೆ ಮೈ ಒಡ್ಡುತ್ತಿಲ್ಲ. ಇದರಿಂದಾಗಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಬೆಂಗಳೂರಿನ ಶೇಕಡಾ 95 ರಷ್ಟು ಮಂದಿ ವಿಟಿಮಿನ್ ಡಿ ಕೊರತೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿನ ಜನಕ್ಕೆ ಚರ್ಮದ ಕಾಯಿಲೆಗಳು ಸೇರಿದಂತೆ ಹಲವಾರು ರೀತಿಯ ಕಾಯಿಲೆಗಳು ವಕ್ಕರಿಸುತ್ತಿವೆ.
ಸೂರ್ಯನ ಅಲರ್ಜಿಯಿಂದ ಬಳಲುವವರು ಹೆಚ್ಚಾಗುತ್ತಿದ್ದಾರೆ;
ಸೂರ್ಯನ ಅಲರ್ಜಿಯಿಂದ ಬಳಲುವವರು ಹೆಚ್ಚಾಗುತ್ತಿದ್ದಾರೆ; ಚರ್ಮದ ಕಿರಿಕಿರಿ, ಮೈಮೇಲೆ ದದ್ದುಗಳು, ಚರ್ಮದ ಪಿಗ್ಮೆಂಟೇಶನ್ ಮತ್ತು ಪಾಲಿಮಾರ್ಫಿಕ್ ಲೈಟ್ ಎರಪ್ಷನ್ ಮುಂತಾದ ಸೂರ್ಯನ ಅಲರ್ಜಿಯಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಸುಮಾರು ಶೇಕಡಾ 20 ರಷ್ಟು ರೋಗಿಗಳು ಪ್ರತಿದಿನ ಇಂತಹ ಸಮಸ್ಯೆಗಳನ್ನು ಹೇಳಿಕೊಂಡೇ ಆಸ್ಪತ್ರೆಗಳಿಗೆ ಬರುತ್ತಿದ್ದಾರಂತೆ. ಮಕ್ಕಳ ಮೇಲೆ ಇದರ ಪರಿಣಾಮ ಇನ್ನೂ ಹೆಚ್ಚು ಹೇಳಲಾಗುತ್ತಿದೆ. ಇದರಿಂದ ಪ್ರತಿ ಆರು ತಿಂಗಳಿಗೊಮ್ಮೆ ಚರ್ಮ ಹಾಗೂ ವಿಟಮಿನ್ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ,.
ಇದನ್ನೂ ಓದಿ; Ghee Health Benefits; ತುಪ್ಪವನ್ನು ಹೀಗೆ ತಿಂದರೆ ನಿಮ್ಮ ಕಾಯಿಲೆಗಳೆಲ್ಲಾ ಮಾಯ!