Astrology

Horoscope; ಈ ರಾಶಿಯವರು ಅತ್ತೆ-ಮಾವಂದಿರನ್ನು ಸ್ವಂತ ಪೋಷಕರಂತೆ ನೋಡಿಕೊಳ್ತಾರೆ!!

ಅತ್ತೆ ಮಾವನ ಬಗ್ಗೆ ಸೊಸೆಯಂದಿರು ಅಸಡ್ಡೆ ಹೊಂದಿರುತ್ತಾರೆ. ಅವರೊಂದಿಗೆ ಜಗಳವಾಡುವುದು, ಅವರನ್ನು ಚೆನ್ನಾಗಿ ನೋಡಿಕೊಳ್ಳದೇ ಇರುವುದು. ಗಂಡನಿಗೆ ಅತ್ತೆ, ಮಾವಂದಿರ ಬಗ್ಗೆ ಚಾಡಿ ಹೇಳುವುದು. ಮತ್ತೊಂದು ಮನೆ ಮಾಡುವಂತೆ ಮಾಡವುದು. ಇಂತಹ ಘಟನೆಗಳು ಹಲವಾರು ಮನೆಗಳಲ್ಲಿ ನಡೆಯುತ್ತಿರುತ್ತವೆ. ಆದ್ರೆ ಕೆಲ ರಾಶಿಯವರು ತಮ್ಮ ಅತ್ತೆ, ಮಾವಂದಿರನ್ನು ಸ್ವಂತ ತಂದೆ-ತಾಯಿಯರಂತೆ ನೋಡಿಕೊಳ್ಳುತ್ತಾರೆ. ಅತ್ತೆ, ಮಾವಂದಿರ ಬಗ್ಗೆ, ಭಕ್ತಿ ಹೊಂದಿರುತ್ತಾರೆ.

ಇದನ್ನೂ ಓದಿ; Mandya Loksabha; ಮಂಡ್ಯ ಲೋಕಸಭೆಯಲ್ಲಿ ಅಖಾಡಕ್ಕಿಳಿಯೋರು ಯಾರು..?; ಹೆಚ್ಡಿಕೆ ಫಿಕ್ಸಾ..?

ಅತ್ತೆ-ಮಾವಂದಿರನ್ನು ಚೆನ್ನಾಗಿ ನೋಡಿಕೊಳ್ಳುವವರು;

ಕರ್ಕಾಟಕ ರಾಶಿ;
ಕರ್ಕಾಟಕ ರಾಶಿಯವರು ಅತ್ತೆ-ಮಾವಂದಿರೇ ಅಲ್ಲ. ಬಹುತೇಕ ಎಲ್ಲ ಮೇಲೂ ಸಹಾನೂಭೂತಿ ತೋರಿಸುತ್ತಿರುತ್ತಾರೆ. ಯಾವಾಗಲೂ ಭಾವುಕರಾಗಿರುತ್ತಾರೆ. ಅತ್ತೆ ಮನೆಗ ಹೋದರೂ, ಅಲ್ಲಿಯೋ ಕೂಡಾ ಅತ್ತೆ, ಮಾವಂದಿರನ್ನು ಸ್ವಂತ ತಂದೆ-ತಾಯಿಯಂತೆ ನೋಡಿಕೊಳ್ಳುತ್ತಾರೆ. ತಮ್ಮ ಸ್ವಂತ ಪೋಷಕರಿಗೆ ನೀಡುವ ಗೌರವಗಳನ್ನು ಅತ್ತೆ ಮಾವಂದಿರಿಗೂ ನೀಡುತ್ತಾರೆ. ಅವರ ಬಗ್ಗೆ ಭಯ, ಭಕ್ತಿ ಅವರಲ್ಲಿರುತ್ತದೆ.

ಅತ್ತೆ-ಮಾವಂದಿರ ಜನ್ಮದಿನಗಳನ್ನು ಜ್ಞಾಪಕದಲಿಟ್ಟುಕೊಂಡು ಆಚರಿಸುವುದು. ಅವರ ಮದುವೆ ವಾರ್ಷಿಕೋತ್ಸವಗಲಿಗೆ ವಿಶದದ ಮಾಡುವುದು. ಪ್ರತಿಯೊಂದು ಕೆಲಸ ಮಾಡಬೇಕೆಂದರೂ ಹಿರಿಯರ ಅನುಮತಿ ಪಡೆಯುವುದು ಮಾಡುತ್ತಿರುತ್ತಾರೆ.

ಇದನ್ನೂ ಓದಿ; Lakshmi Manthra; ಈ ಲಕ್ಷ್ಮೀ ಮಂತ್ರ ಪಠಿಸಿದರೆ ಮನೆಯಲ್ಲಿ ಹಣವೋ ಹಣ..!

ತುಲಾ ರಾಶಿ;
ತುಲಾ ರಾಶಿಯವರು ಕೂಡಾ ಎಲ್ಲರೊಂದಿಗೂ ಉತ್ತಮ ಬಾಂದವ್ಯ ಇಟ್ಟುಕೊಂಡಿರುತ್ತಾರೆ. ಹಿರಿಯರೆಂದರೆ ಅವರಿಗೆ ಭಯ, ಭಕ್ತಿಭಾವ. ಹೀಗಾಗಿ, ಅತ್ತೆ-ಮಾವಂದಿರನ್ನೂ ಅವರು ದೇವರಂತೆ ಕಾಣುತ್ತಾರೆ. ತಮ್ಮ ಸ್ವಂತ ತಂದೆ-ತಾಯಿಗಳ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಅತ್ತೆ-ಮಾವಂದಿರ ಮನೆಯಲ್ಲಿ ವಿಭಿನ್ನ ಸಂಪ್ರದಾಯಗಳಿದ್ದರೂ ಅದಕ್ಕೆ ಒಗ್ಗಿಕೊಳ್ಳುತ್ತಾರೆ.. ಅವರ ಪದ್ಧತಿಗಳನ್ನು ತಿಳಿದುಕೊಂಡು ಅವರಿಗೆ ಇಷ್ಟವಾಗುವ ರೀತಿಯಲ್ಲಿಯೇ ನಡೆದುಕೊಳ್ಳುತ್ತಾರೆ.

ಕುಟುಂಬದಲ್ಲಿ ಒಗ್ಗಟ್ಟು ಇರುವಂತೆ ನೋಡಿಕೊಳ್ಳುತ್ತಾರೆ. ಕುಟುಂಬದಲ್ಲಿ ಅತ್ತೆ, ಮಾವ ಹೇಳಿದಂತೆ ಕೇಳುತ್ತಾ, ಜೀವನ ಸಾಗಿಸುತ್ತಾರೆ.

ಕನ್ಯಾ ರಾಶಿ;
ಕನ್ಯಾ ರಾಶಿಯವರು ಸಂಬಂಧಗಳನ್ನು ಬೆಸೆಯುವವರು. ಅತ್ತೆ-ಮಾವಂದಿರು ಸರಿಯಾಗಿ ನೋಡಿಕೊಳ್ಳದಿದ್ದರೂ, ಪ್ರತಿಯೊಂದಕ್ಕೂ ಕೊಂಕು ಮಾತಾಡಿದರೂ ಅದನ್ನು ಸಹಿಸಿಕೊಂಡು ಹೋಗುವಂತವರು. ಅತ್ತೆ, ಮಾವಂದಿರು ಎಷ್ಟೇ ತೊಂದರೆ ಕೊಟ್ಟರೂ ಕೋಪ ಮಾಡಿಕೊಳ್ಳದೇ ಶಾಂತ ರೀತಿಯಲ್ಲಿ ಅವರ ಸ್ವಾಭಾವವನ್ನು ಬದಲಾಯಿಸುತ್ತಾರೆ. ಅತ್ತೆ-ಮಾವಂದಿರ ಪ್ರೀತಿ ಗಳಿಸುತ್ತಾರೆ. ಮೊದಲು ಕೊಂಕು ಮಾತಾಡುತ್ತಿದ್ದ ಅತ್ತೆ-ಮಾವಂದಿರು ಸೊಸೆಯನ್ನು ಸ್ವಂತ ಮಗಳ ರೀತಿಯಲ್ಲಿ ನೋಡಿಕೊಳ್ಳುವ ವಾತಾವರಣ ಸೃಷ್ಟಿ ಮಾಡುತ್ತಾರೆ. ಸೊಸೆಯ ಸಂಸ್ಕೃತಿ, ಆಹಾರ ಕ್ರಮಗಳು ವಿಭಿನ್ನವಾಗಿದ್ದರೂ ಅತ್ತೆಯ ಮನೆಯ ಸಂಪ್ರದಾಯಗಳಿಗೆ ಒಗ್ಗಿಕೊಳ್ಳುತ್ತಾರೆ.

ವೃಷಭ ರಾಶಿ;
ವೃಷಭ ರಾಶಿಯವರು, ಕುಟುಂಬಕ್ಕೆ ಬೆಲೆ ಕೊಡುವವರು. ಅವರು ತವರು ಮನೆಯಲ್ಲಿದ್ದರೂ, ಅತ್ತೆ ಮನೆಯಲ್ಲಿದ್ದರೂ, ಆ ಕುಟುಂಬದ ಗೌರವವನ್ನು ಕಾಪಾಡುವಂತಹವರು. ಯಾವಾಗಲೂ ನಿಷ್ಠೆಯುಳ್ಳವರು. ಹಿರಿಯರು ಯಾರೇ ಆಗಿರಬಹುದು ಅವರ ಪ್ರೀತಿಯನ್ನು ಗಳಿಸುವವರು. ಅತ್ತೆ-ಮಾವಂದಿರಂತಹ ಹಿರಿಯರನ್ನು ಗೌರವಿಸುವವರು.

Share Post