ಶ್ರೀಲಂಕಾದಲ್ಲಿ ಮೊದಲ ಮಂಕಿಪಾಕ್ಸ್ ಪತ್ತೆ; ಜನರಲ್ಲಿ ಹೆಚ್ಚಿದ ಆತಂಕ
ಕೊಲೊಂಬೊ; ಶ್ರೀಲಂಕಾದಲ್ಲಿ ಮೊದಲ ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ದುಬೈನಿಂದ ಬಂದಿದ್ದ 20 ವರ್ಷದ ಯುವಕನಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಆತನನನ್ನು ತೀವ್ರ ವಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶ್ರೀಲಂಕಾದ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಮಂಕಿಪಾಕ್ಸ್ ಸೋಂಕಿತ ಯುವಕ ಮಂಗಳವಾರ ಕೊಲಂಬೋಗೆ ಆಗಮಿಸಿದ್ದ. ಮಂಕಿಪಾಕ್ಸ್ ಸೋಂಕು ವೈರಸ್ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಭೀತಿ ಶುರುವಾಗಿದೆ. ಹೀಗಾಗಿ ಆ ಯುವಕ ಪ್ರಯಾಣ ಮಾಡಿದ ವಿಮಾನದಲ್ಲಿದ್ದ ಪ್ರಯಾಣಿಕರ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಲಾಗಿದೆ.