BengaluruCrime

ಜೈಲಿಗೆ ಹಾಕಿ ಬೇಕಾದ್ರೆ, ಹೆಂಡತಿ ಹತ್ರ ಮಾತ್ರ ಹೋಗಲ್ಲ!

ಬೆಂಗಳೂರು; ನನ್ನನ್ನು ಜೈಲಿಗೆ ಬೇಕಾದರೂ ಹಾಕಿ, ಆದ್ರೆ ಹೆಂಡತಿ ಹತ್ರ ಮಾತ್ರ ಹೋಗಲ್ಲ ಅಂತ ಎಂಜಿನಿಯರ್‌ ಒಬ್ಬ ಅಲವತ್ತುಕೊಳ್ಳುತ್ತಿದ್ದಾನೆ.. ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ಕಾಣೆಯಾಗಿದ್ದರು.. ಇದೀಗ ಕಾಣೆಯಾಗಿದ್ದ ಟೆಕ್ಕಿ ವಿಪನ್‌ ನನ್ನು ನೋಯ್ಡಾದಲ್ಲಿ ಪತ್ತೆ ಹಚ್ಚಲಾಗಿದೆ.. ಇದೀಗ ಆತ ನಾನು ಜೈಲಿಗೆ ಬೇಕಾದರೆ ಹೋಗುತ್ತೇನೆ. ಆದ್ರೆ ಹೆಂಡತಿ ಮಾತ್ರ ಹೋಗೋದಿಲ್ಲ ಎನ್ನುತ್ತಿದ್ದಾನೆ..

ಇದನ್ನೂ ಓದಿ; ಐಫೋನ್‌ ತಯಾರಿಕಾ ಸಂಸ್ಥೆ ಅಧ್ಯಕ್ಷ ರಾಜ್ಯಕ್ಕೆ; ಲಕ್ಷ ಉದ್ಯೋಗ ಸೃಷ್ಟಿ!

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ವಾಸವಿದ್ದ ವಿಪಿನ್‌ ಇಲ್ಲೇ ಕೆಲಸ ಮಾಡುತ್ತಿದ್ದ. ಆದ್ರೆ ವಾರದ ಹಿಂದೆ ವಿಪಿನ್‌ ನಾಪತ್ತೆಯಾಗಿದ್ದ.. ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.. ಇದೀಗ ನೋಯ್ಡಾದಲ್ಲಿ ವಿಪಿನ್‌ನನ್ನು ಪತ್ತೆ ಹಚ್ಚಿ ಕರೆದುಕೊಂಡು ಬರಲಾಗಿದೆ.. ವಿಚಾರಣೆ ವೇಳೆ ನಾನು ಸ್ವ ಇಚ್ಛೆಯಿಂದಲೇ ಮನೆಬಿಟ್ಟು ಹೋಗಿದ್ದೇನೆ ಎಂದು ಹೇಳಿದ್ದಾನೆ..

ಇದನ್ನೂ ಓದಿ; ಆ.17ಕ್ಕೆ ಭೂಮಿಗೆ ಅಪ್ಪಳಿಸುತ್ತಾ ಕ್ಷುದ್ರಗ್ರಹ..?; ತಡೆಯೋ ಪ್ರಯತ್ನ ಯಾಕಿಲ್ಲ..?

ವಿಪಿನ್‌ ತನಗಿಂತ ಎಂಟು ವರ್ಷ ದೊಡ್ಡವಳೊಂದಿಗೆ ಮದುವೆಯಾಗಿದ್ದ. ವಿಪಿನ್‌ಗೆ 34 ವರ್ಷವಾದರೆ ಆತನ ಹೆಂಡತಿಗೆ 42 ವರ್ಷ. ವಿಪಿನ್‌ನನ್ನು ಎರಡನೇ ಮದುವೆಯಾಗಿದ್ದ ಪತ್ನಿ ಆತನನ್ನು ಮಾನಸಿಕವಾಗಿ ಕಾಡುತ್ತಿದ್ದಳಂತೆ. ತುಂಬಾ ಕಂಟ್ರೋಲ್‌ ಮಾಡಿದ್ದ ಹೆಂಡತಿ, ಮನೆಯಲ್ಲಿ ಸಿಸಿಟಿವಿ ಹಾಕಿಸಿ ಗಂಡನ ಮೇಲೆ ತೀವ್ರ ನಿಗಾ ಇಟ್ಟಿದ್ದಳಂತೆ. ಇದರಿಂದ ಬೇಸರಗೊಂಡ ವಿಪಿನ್‌ ಮನೆ ಬಿಟ್ಟು ಹೋಗಿದ್ದ ಎಂದು ತಿಳಿದುಬಂದಿದೆ..
ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಗಂಡ ಕಾಣೆಯಾಗಿದ್ದರ ಬಗ್ಗೆ ಗೋಳು ತೋಡಿಕೊಂಡಿದ್ದಳು.. ಜೊತೆಗೆ ಪೊಲೀಸರಿಗೂ ದೂರು ನೀಡಿದ್ದಳು.. ಇದೀಗ ವಿಪಿನ್‌ ನನ್ನು ಕರೆತರಲಾಗಿದೆ.. ಆದ್ರೆ ಆತ ಹೆಂಡತಿ ಬಳಿಗೆ ಹೋಗಲ್ಲ ಎನ್ನುತ್ತಿದ್ದಾನೆ.. ಇದು ಪೊಲೀಸರಿಗೆ ತಲೆನೋವು ತರಿಸಿದೆ.

ಇದನ್ನೂ ಓದಿ; 40 ವರ್ಷಕ್ಕೇ ನಿವೃತ್ತಿಯಾಗಿ..!; ಕೂತು ತಿನ್ನಿ!

Share Post