BusinessEconomy

ತಿಂಗಳಿಗೆ 50 ಸಾವಿರ ರೂ. ಪಿಂಚಣಿ ಪಡೆಯುವುದು ಹೇಗೆ..?

ಬೆಂಗಳೂರು; ಸರ್ಕಾರಿ ಕೆಲಸವೇ ಬೇಕು ಎಂದು ಬಹುತೇಕರು ಬಯಸುತ್ತಾರೆ.. ಇದಕ್ಕೆ ಕಾರಣ ನಿವೃತ್ತಿಯ ನಂತರವೂ ಪಿಂಚಣಿ ಬರುತ್ತೆ ಅನ್ನೋದು.. ಆದ್ರೆ, ಈಗ ಪಿಂಚಣಿ ಪಡೆಯೋದಕ್ಕೆ ಸರ್ಕಾರಿ ಕೆಲಸವೇ ಬೇಕಾಗಿಲ್ಲ.. ಯಾವುದೇ ನಿರ್ದಿಷ್ಟ ಕೆಲಸ ಮಾಡದೇ ಹೋದರೂ, ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದರೂ 60 ವರ್ಷದ ನಂತರ ಪಿಂಚಣಿ ಪಡೆಯಬಹುದು.. ಅದಕ್ಕಾಗಿ ಹಲವಾರು ಯೋಜನೆಗಳಿವೆ.. ಸರ್ಕಾರವೇ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಜಾರಿಗೆ ತಂದಿದೆ.. ಇದರಲ್ಲಿ ಹಣ ಹೂಡಿಕೆ ಮಾಡುತ್ತಾ ಹೋದರೆ 60 ವರ್ಷದ ನಂತರ ನಮಗೆ ಇಂತಿಷ್ಟು ಎಂದು ಪಿಂಚಣಿ ಬರುತ್ತಾ ಹೋಗುತ್ತದೆ..

ಇದನ್ನೂ ಓದಿ; 100 ರೂಪಾಯಿಯಿಂದ ಹೂಡಿಕೆ ಆರಂಭಿಸಿ; ಕೊಟ್ಯಧಿಪತಿಗಳಾಗಿ..!

ಇದಲ್ಲದೆ ಒಂದಷ್ಟು ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಕೂಡಾ ಪಿಂಚಣಿ ಯೋಜನೆಯನ್ನು ಜಾರಿ ಮಾಡಿವೆ.. ಇದರಲ್ಲಿ ನಾವು ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ 60 ವರ್ಷದ ನಂತರ ತಿಂಗಳಿಗೆ 50 ಸಾವಿರ ರೂಪಾಯಿಯವರೆಗೂ ಪಿಂಚಣಿ ಪಡೆಯಬಹುದು.. ಇದರ ಜೊತೆಗೆ ಹಲವು ಪ್ರಯೋಜನಗಳನ್ನು ಕೂಡಾ ಪಡೆಯಬಹುದು.

ಇದನ್ನೂ ಓದಿ; ನೀವು ಐಟಿ ರಿಟರ್ನ್‌ ಸಲ್ಲಿಸಿದ್ದೀರಾ..?; 10 ದಿನದಲ್ಲಿ ರೀಫಂಡ್‌ ಆಗಿಲ್ಲವಾ..?

30 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನಿಂದ ಹೂಡಿಕೆ ಶುರು ಮಾಡಿದರೆ ನಿವೃತ್ತಿಯ ಜೀವನ ಸುಖಮಯವಾಗಿರುತ್ತದೆ.. ನೀವು ತಿಂಗಳಿಗೆ 50 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕು ಅಂದ್ರೆ ತಿಂಗಳಿಗೆ 11 ಸಾವಿರ ರೂಪಾಯಿ ಹೂಡಿಕೆ ಮಾಡಬೇಕು.. ಈ ಹಣಕ್ಕೆ ಬಡ್ಡಿ, ಚಕ್ರ ಬಡ್ಡಿ ಸಿಗುತ್ತದೆ.. ನಿವೃತ್ತಿ ವಯಸ್ಸಿಗೆ ಅದು 2.5 ಕೋಟಿ ರೂಪಾಯಿ ಆಗಿರುತ್ತದೆ.. ಆಗ ನಾವು ಪ್ರತಿ ತಿಂಗಳು 50 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಅದೇ 35 ವರ್ಷ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ ತಿಂಗಳಿಗೆ ಕನಿಷ್ಠ 19 ಸಾವಿರ ರೂಪಾಯಿ ಹೂಡಿಕೆ ಮಾಡುತ್ತಾ ಬರಬೇಕಾಗುತ್ತದೆ..

Share Post