HealthNational

ಕೋಲಾಟ ಆಡುವಾಗಲೇ ಹೃದಯಾಘಾತ; ಕುಸಿದುಬಿದ್ದು ಮಹಿಳೆ ಸಾವು!

ತೆಲಂಗಾಣ; ಕೋಲಾಟ ಆಡುವ ಸಮಯದಲ್ಲಿ ಮಹಿಳೆಯೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ತೆಲಂಗಾಣದ ಕರೀಂನಗರ ಜಿಲ್ಲೆ ಕಲಾವಾಲಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ದಿನಗಟ್ಟಲೆ ಕೋಲಾಟ ಆಡಿ ಜನ ಸಂಭ್ರಮಿಸುತ್ತಾರೆ. ಅದೇ ರೀತಿ ಗ್ರಾಮದಲ್ಲಿ ಕೋಲಾಟ ಆಡುವ ವೇಳೆ ಕುಸಿದುಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು ರಾಜಮಣಿ ಎಂದು ಗುರುತಿಸಲಾಗಿದೆ.

 

Share Post