CinemaHealth

ಬಾಹುಬಲಿ ಖ್ಯಾತಿಯ ಪ್ರಭಾಸ್‌ಗೆ ತೀವ್ರ ಜ್ವರ;‌ ಸಾಲಾರ್‌ ಶೂಟಿಂಗ್‌ ಕ್ಯಾನ್ಸಲ್

ಹೈದರಾಬಾದ್‌; ಬಾಹುಬಲಿ ಖ್ಯಾತಿಯ ಪ್ರಭಾಸ್‌ಗೆ ತೀವ್ರ ಜ್ವರ ಕಾಡುತ್ತಿದೆ. ಹೀಗಾಗಿ ಅವರು ಎಲ್ಲಾ ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ವಿಶ್ರಾಂತಿ ಮಾಡುತ್ತಿದ್ದಾರೆ. ಮನೆಯಲ್ಲೇ ಇರುವ ಪ್ರಭಾಸ್‌, ಮನೆಗೇ ವೈದ್ಯರನ್ನು ಕರೆಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಆತಂಕ ಬೇಕಿಲ್ಲ. ಪ್ರಭಾಸ್‌ ಅವರು ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಸದ್ಯ ಪ್ರಭಾಸ್‌ ಅವರು ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಪ್ರಭಾಸ್‌ ಶೂಟಿಂಗ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದಾರೆ. ಆದ್ರೆ ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ್ದು ಜ್ವರದ ಕಾರಣಕ್ಕೋ ಅಥವಾ ನಿಶ್ಚಿತಾರ್ಥಕ್ಕೋ ಎಂಬ ಅನುಮಾನ ಉಂಟಾಗಿದೆ. ಯಾಕಂದ್ರೆ ಪ್ರಭಾಸ್‌ ಅವರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೂಡಾ ಹರಿದಾಡುತ್ತಿದೆ.

ಬಾಲಿವುಡ್ ವಿಮರ್ಶಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್‌ ಒಂದನ್ನು ಮಾಡಿದ್ದಾರೆ.  ಸದ್ಯದಲ್ಲೇ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಮಾಲ್ಡೀವ್ಸ್‌ನಲ್ಲಿ ನಿರ್ಶಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ.

Share Post