ನಡು ರಸ್ತೆಯಲ್ಲೇ ಪತ್ನಿಯನ್ನು ಕೊಚ್ಚಿ ಕೊಚ್ಚಿ ಕೊಂದ ಪಾಪಿ ಪತಿ!
ಬೆಂಗಳೂರು; ದಿನವೂ ಟಾರ್ಚರ್ ಕೊಡುತ್ತಿದ್ದ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದಿದ್ದಾನೆ.. ಈ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.. ಗಂಡನ ಟಾರ್ಚರ್ ತಾಳದೆ ತವರು ಸೇರಿದ್ದ ಪತ್ನಿಗೆ ಅಲ್ಲೂ ಬಂದು ಆತ ಕಂಟಕನಾಗಿದ್ದ.. ಹೀಗಾಗಿ ಆಕೆ ಪೊಲೀಸರಿಗೆ ದೂರು ನೀಡಲು ಬಂದಿದ್ದಳು.. ಈ ವೇಳೆ ಈ ಕೃತ್ಯ ಎಸಗಿದ್ದಾನೆ..
ಮಹಿಳೆಗೆ ಇಬ್ಬರು ಮಕ್ಕಳಿದ್ದು, ಪತಿ ಸೆಲ್ವಿನ್ ಫ್ರಾನ್ಸಿಸ್ ದಿನವೂ ಪತ್ನಿಗೆ ಕಾಟ ಕೊಡುತ್ತಿದ್ದನಂತೆ.. ಇದರಿಂದಾಗಿ ಆಕೆ ಆರು ತಿಂಗಳ ಹಿಂದೆ ಪತಿಯನ್ನು ತೊರೆದು ತವರು ಮನೆ ಸೇರಿದ್ದಳು.. ತಾಯಿಯೊಂದಿಗೆ ವಾಸವಿದ್ದಳು.. ಆದ್ರೆ ಅಲ್ಲೂ ಬಂದು ಆರೋಪಿ ಸೆಲ್ವಿನ್ ಫ್ರಾನ್ಸಿಸ್ ಗಲಾಟೆ ಮಾಡುತ್ತಿದ್ದನಂತೆ.. ಹೀಗಾಗಿ ಆ ಮಹಿಳೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಿದ್ದಳು..
ಇದನ್ನು ತಿಳಿದು ಅಲ್ಲಿಗೆ ಬಂದಿದ್ದ ಆರೋಪಿ ಸೆಲ್ವಿನ್ ಫ್ರಾನ್ಸಿಸ್, ತನ್ನ ಹೆಂಡತಿ ಪೊಲೀಸ್ ಠಾಣೆಯಿಂದ ಹೊರಬರುವುದನ್ನೇ ಕಾಯುತ್ತಿದ್ದ.. ಆಕೆ ಹೊರಕ್ಕೆ ಬರುತ್ತಿದ್ದಂತೆ ಗಲಾಟೆ ಶುರು ಮಾಡಿದ್ದಾನೆ.. ನಂತರ ಮೊದಲೇ ರೆಡಿ ಮಾಡಿಕೊಂಡು ಬಂದಿದ್ದ ಚಾಕು ತೆಗೆದು ನಡು ರಸ್ತೆಯಲ್ಲಿ ಪತ್ನಿಗೆ ಇರಿದಿದ್ದಾನೆ.. ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ..
ಕೊಲೆ ಮಾಡಿದ ನಂತರ ಆರೋಪಿ ಪರಾರಿಯಾಗಿದ್ದಾನೆ.. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..