CrimeInternational

Breaking; ಟೇಕಾಫ್‌ ವೇಳೆ ವಿಮಾನ ಪತನ; 19 ಮಂದಿ ದುರ್ಮರಣ!

ಕಠ್ಮಂಡು; ನೇಪಾಳದ ಕಠ್ಮಂಡುವಿನಲ್ಲಿ ಭೀಕರ ವಿಮಾನ ದುರಂತ ನಡೆದಿದೆ.. ವಿಮಾನ ಟೇಕಾಫ್‌ ವೇಳೆ ತಾಂತ್ರಿಕ ಸಮಸ್ಯೆಯಿಂದ ಪತನವಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 19 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಈ ದುರಂತ ನಡೆದಿದೆ..
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶೌರ್ಯ ಏರ್‌ಲೈನ್ಸ್‌ ವಿಮಾನ ಟೇಕಾಫ್‌ ಆಗಿತ್ತು.. ಟೇಕಾಫ್‌ ಆಗುತ್ತಲೇ ಅದು ಅಲ್ಲಿಯೇ ಪತನವಾಗಿದೆ.. ಘಟನೆಯಲ್ಲಿ ವಿಮಾನದ ಸಿಬ್ಬಂದಿ ಸೇರಿ 19 ಮಂದಿ ಸಾವನ್ನಪ್ಪಿದ್ದಾರೆ.. ಪತನವಾಗುತ್ತಲೇ ವಿಮಾನ ಬೆಂಕಿಗೆ ಆಹುತಿಯಾಗಿದೆ.. ವಿಮಾನದಲ್ಲಿ ಒಟ್ಟು ಇದ್ದಿದ್ದೇ 19 ಮಂದಿ ಎಂದು ತಿಳಿದುಬಂದಿದೆ..

Share Post