Districts

ಆಟೋ ಮೇಲೆ ದಿಢೀರ್‌ ಅಂತ ಕುಸಿಯಿತು ಮನೆ!; ಮುಂದೇನಾಯ್ತು..?

ಚಿಕ್ಕಮಗಳೂರು; ಭಾರೀ ಮಳೆಯಿಂದಾಗಿ ರಾಜ್ಯದ ಹಲವೆಡೆ ಮಣ್ಣು ಕುಸಿತ, ಮನೆಗಳ ಕುಸಿತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.. ಇದರಿಂದಾಗಿ ಸಾರ್ವಜನಿಕರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ.. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಮನೆಯ ಗೋಡೆಯೊಂದು ಕುಸಿದಿದ್ದು, ಮನೆಯ ಪಕ್ಕದಲ್ಲೇ ನಿಲ್ಲಿಸಿದ್ದ ಆಟೋವೊಂದು ಸಂಪೂರ್ಣ ಜಖಂಗೊಂಡಿದೆ..

ಇದನ್ನೂ ಓದಿ; ನಟ ದರ್ಶನ್‌ ಪ್ರಕರಣ; ಡಿಕೆಶಿ ಭೇಟಿಯಾದ ವಿಜಯಲಕ್ಷ್ಮೀ ಹಾಗೂ ದಿನಕರ್

ಚಿಕ್ಕಮಗಳೂರು ತಾಲ್ಲೂಕಕಿನ ಅಲ್ಲಂಪುರದಲ್ಲಿ ಮನೆಯೊಂದರ ಗೋಡೆ ಮಳೆಗೆ ನೆನೆದು ಕುಸಿದುಬಿದ್ದಿದೆ.. ಮನೆಯ ಪಕ್ಕದಲ್ಲೇ ಆಟೋ ಒಂದನ್ನು ನಿಲ್ಲಿಸಲಾಗಿತ್ತು.. ಅದರ ಮೇಲೆ ಮನೆಯ ಗೋಡೆಯ ಅವಶೇಷಗಳು ಬಿದ್ದಿವೆ.. ಇದರಿಂದಾಗಿ ಆಟೋ ಸಂಪೂರ್ಣ ಜಖಂಗೊಂಡಿದೆ.. ಅದೃಷ್ಟವಶಾತ್‌ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಅಲ್ಲಂಪುರ ಗ್ರಾಮದ ನಾಗೇಶ್‌ ಶೆಟ್ಟಿ ಎಂಬುವವರಿಗೆ ಸೇರಿದ ಮನೆ ಇದಾಗಿದೆ.. ಮನೆ ಕೂಡಾ ಬಹುತೇಕ ಕುಸಿದಿದೆ.. ಇದರಿಂದಾಗಿ ನಾಗೇಶ್‌ ಶೆಟ್ಟಿ ಕುಟುಂಬಕ್ಕೆ ಸೂರು ಇಲ್ಲದಂತಾಗಿದೆ.. ಸ್ಥಳಕ್ಕೆ ಗ್ರಾಮ ಪಂಚಾಯತ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..

ಇದನ್ನೂ ಓದಿ; ಹೆಣ್ಣು, ಗಂಡು ಎರಡೂ ಭಾವನೆ ಇರುವ ಪಕ್ಷಿ ಪತ್ತೆ..!; ವಿಜ್ಞಾನಲೋಕದಲ್ಲೊಂದು ಅಚ್ಚರಿ!

Share Post