Fasting; ಉಪವಾಸ ಮಾಡಿದರೆ ತೂಕ ಕಡಿಮೆಯಾಗುತ್ತಾ..?; ನಿಜಕ್ಕೂ ಏನಾಗುತ್ತೆ..?
Fasting; ಉಪವಾಸ.. ಈ ಪದ ಇತ್ತೀಚೆಗೆ ಎಲ್ಲಾ ಕಡೆ ಕೇಳಿಸುತ್ತಿರುತ್ತದೆ… ಊಟ ಮಾಡಿ ಬನ್ನಿ ಅಂತ ಕರೆದರೆ ಇಲ್ಲ, ನಾನು ಉಪವಾಸ ಇದ್ದೇನೆ ಎಂದು ಕೆಲವರು ಹೇಳುತ್ತಿರುತ್ತಾರೆ.. ಇನ್ನು ಕೆಲವರು ನಾನು ಒಂದು ಹೊತ್ತು ಊಟ ಬಿಟ್ಟಿದ್ದೇನೆ.. ದಿನಕ್ಕೆ ಎರಡನೇ ಹೊತ್ತು ಊಟ ಮಾಡೋದು ಎನ್ನುತ್ತಿರುತ್ತಾರೆ.. ಇನ್ನೂ ಕೆಲವರು ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ದಿನವಿಡೀ ಉಪವಾಸ ಮಾಡುತ್ತಿರುತ್ತಾರೆ.
ನಟ, ನಟಿಯರು, ಗಣ್ಯ ವ್ಯಕ್ತಿಗಳು ಕೂಡಾ ಉಪವಾಸದ ಬಗ್ಗೆ ಮಾತನಾಡುತ್ತಿರುತ್ತಾರೆ.. ಕೆಲವರಂತೂ ನಾನು ಊಟ ಮಾಡೋದೇ ಕಡಿಮೆ, ಬರೀ ಹಣ್ಣು, ತರಕಾರಿ ತಿಂದುಕೊಂಡು ಇರುತ್ತೇನೆ ಎನ್ನುವವರೂ ಇದ್ದಾರೆ. ಇದೆಲ್ಲಾ ನೋಡಿದರೆ ಉಪವಾಸದಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲ ಇರಬಹುದು ಎಂದು ನಾವು ಭಾವಿಸುತ್ತೇವೆ. ಆದ್ರೆ ಅದರಲ್ಲಿ ನಿಜಾಂಶ ಎಷ್ಟು..? ಉಪವಾಸ ಮಾಡೋದು ಒಳ್ಳೆಯದಾ..? ತಿಳಿಯೋಣ ಬನ್ನಿ..
ಇದನ್ನೂ ಓದಿ; Actress Trisha; 25 ಲಕ್ಷ ರೂಪಾಯಿ ಪಡೆದು ರೆಸಾರ್ಟ್‌ಗೆ ಬಂದಿದ್ದರಾ ತ್ರಿಷಾ..?
ಅಷ್ಟಕ್ಕೂ ಉಪವಾಸ ಹೇಗೆ ಮಾಡುತ್ತಾರೆ..?;
ಅಷ್ಟಕ್ಕೂ ಉಪವಾಸ ಹೇಗೆ ಮಾಡುತ್ತಾರೆ..?; ಉಪವಾಸ ಅಂದರೆ ಬೇರೇನಿಲ್ಲ. ಕೆಲ ಸಮಯದವರೆಗೆ ಏನನ್ನೂ ತಿನ್ನದೇ, ಏನನ್ನೂ ಕುಡಿಯದೇ ಇರುವುದು. ಅಥವಾ ಕೆಲವರು ಘನ ಪದಾರ್ಥ ತಿನ್ನದೆ, ದ್ರವ ಪದಾರ್ಥ ಸೇವಿಸುತ್ತಾ ಉಪವಾಸ ಮಾಡುವವರೂ ಇದ್ದಾರೆ. ಅಂದರೆ ಕೆಲ ಕ್ಯಾಲರಿಗಳಿಲ್ಲದ ದ್ರವ ಪದಾರ್ಥ ಸೇವನೆ ಮಾಡುತ್ತಾ ಉಪವಾಸ ಆಚರಿಸುವುದು ಎಂದರ್ಥ.
ಉಪವಾಸ ಮಾಡೋದಕ್ಕೆ ಹಲವಾರು ಮಾರ್ಗಗಳಿವೆ. ಕೆಲವರು ದೀರ್ಘಕಾಲ ಉಪವಾಸ ಮಾಡುತ್ತಾರೆ. ಅಂದರೆ ಮೂರು ದಿನಗಳವರೆಗೆ ಏನನ್ನೂ ತಿನ್ನದೆ ಅಥವಾ ದ್ರವ ಪದಾರ್ಥಗಳನ್ನಷ್ಟೇ ಸೇವಿಸಿ ಉಪವಾಸ ಮಾಡುತ್ತಾರೆ.. ಇನ್ನು ಕೆಲವರು ದಿನಬಿಟ್ಟು ದಿನ ಉಪವಾಸ ಮಾಡುತ್ತಾರೆ.
ಇದನ್ನೂ ಓದಿ; Dangal Movie; ದಂಗಲ್ ಸಿನಿಮಾದ ಬಾಲನಟಿ ಸುಹಾನಿ ಇನ್ನಿಲ್ಲ!
ಉಪವಾಸದ ಸುಲಭ ಮಾರ್ಗ ಯಾವುದು ಗೊತ್ತಾ..?;
ಉಪವಾಸದ ಸುಲಭ ಮಾರ್ಗ ಯಾವುದು ಗೊತ್ತಾ..?; ಆದ್ರೆ ಎಲ್ಲಕ್ಕಿಂತ ಸುಲಭವಾದ ಮಾರ್ಗ ಏನು ಅಂದ್ರೆ ಆಹಾರವನ್ನು ನಿಯಂತ್ರಿಸುವುದು. ಅಂದ್ರೆ ನಾವು ದಿನವೂ ಆಹಾರ ಸೇವನೆ ಮಾಡಬಹುದು… ಆದಕ್ಕಾಗಿ ನಿಗದಿ ಮಾಡಿರುವ ಸಮಯವನ್ನು ಕಡಿಮೆ ಮಾಡುವುದು. ಹೇಗೆ ಅಂತಂದ್ರೆ, ದಿನದ 24 ಗಂಟೆಗಳ ಸಮಯದಲ್ಲಿ ನಾವು ತೆಗೆದುಕೊಳ್ಳುವ ಆಹಾರದ ಸಮಯವನ್ನು 10 ಗಂಟೆಗೆ ಇಳಿಸುವುದು. ಆ ಹತ್ತು ಗಂಟೆಗಳಲ್ಲಿ ಮಾತ ನಾವು ಆಹಾರ ಸೇವಿಸುತ್ತೇವೆ. ಉಳಿದ 14 ಗಂಟೆಗಳ ಕಾಲ ಏನನ್ನೂ ಸೇವಿಸದೇ ಇರುವುದು. ಅಂದರೆ ಹತ್ತು ಗಂಟೆಗಳಲ್ಲಿ ಒಂದೆರಡು ಬಾರಿ ಆಹಾರ ಸೇವಿಸಿ, ನಂತರದ ಸಮಯದಲ್ಲಿ ಪೂರ್ತಿ ಏನನ್ನೂ ಮುಟ್ಟದೇ ಇರುವುದು. ಇನ್ನೂ ಸ್ವಲಲ್ಪ ಕಠಿಣವಾಗಿರಲಿ ಎನ್ನುವುದಾದರೆ ಇದನ್ನು 8 ಗಂಟೆಗೆ ಇಳಿಸಿ, ಉಳಿದ 16 ಗಂಟೆಗಳಲ್ಲಿ ಏನನ್ನೂ ತಿನ್ನದೆ ಉಪವಾಸ ಆಚರಣೆ ಮಾಡಬಹುದು.
ಇದನ್ನೂ ಓದಿ; Miss World 2024; ವಿಶ್ವಸುಂದರಿ ಆಗ್ತಾರಾ ಈ ಕನ್ನಡದ ಬ್ಯೂಟಿ..?
ಉಪವಾಸ ವೇಳೆ ಚಯಾಪಚಯ ಹೇಗೆ ಬದಲಾಗುತ್ತೆ..?;
ಉಪವಾಸ ವೇಳೆ ಚಯಾಪಚಯ ಹೇಗೆ ಬದಲಾಗುತ್ತೆ..?; ಉಪವಾಸದ ಸಮಯದಲ್ಲಿ ದೇಹದ ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸುವ ಆಹಾರ ಸಿಗುವುದಿಲ್ಲ. ಪೋಷಕಾಂಶಗಳು ಅದರಲ್ಲೂ ಸಕ್ಕರೆ ಅಂಶ ದೇಹಕ್ಕೆ ಸಿಗುವುದಿಲ್ಲ. ಆಗಾಗ ಉಪವಾಸ ಮಾಡುವುದರಿಂದ ದೇಹದ ಜೀವಕೋಶಗಳು ಇದಕ್ಕೆ ಹೊಂದಿಕೊಳ್ಳುತ್ತವೆ. ಇದರಿಂದಾಗಿ ಶಕ್ತಿಗಾಗಿ ದೇಹದಲ್ಲಿನ ಮೆಟಬೋಲಿಸಂ ಇತರ ಮಾರ್ಗಗಳಿಂದ ಶಕ್ತಿಯನ್ನು ಹೀರಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತದೆ.
ಅದು ಹೇಗೆ ನಡೆಯುತ್ತದೆ ಎಂದರೆ, ಉಪವಾಸ ಇರುವಾಗ ಜೀವಕೋಶಗಳು ತಮ್ಮ ಚಟುವಟಿಕೆಗಳನ್ನು ನಿಧಾನ ಮಾಡುತ್ತವೆ. ಇದರಿಂದ ಯಕೃತ್ ಕಿಟೋನ್ ಬಾಡೀಸ್ ಎಂಬ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಅವು ದೇಹದ ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸುತ್ತಾ ಹೋಗುತ್ತವೆ. ಕೊನೆಯಾದಾಗಿ ಅಂಗಾಂಶದಲ್ಲಿ ಸಂಗ್ರಹವಾಗಿರುವ ಕೊಬ್ಬು ಕೂಡಾ ಈ ಸಮಯದಲ್ಲಿ ಬಿಡುಗಡೆಯಾಗುತ್ತದೆ.
ಇದನ್ನೂ ಓದಿ; Protien; ನಮ್ಮ ದೇಹಕ್ಕೆ ಎಷ್ಟು ಪ್ರೋಟೀನ್ ಬೇಕು?; ಎಲ್ಲಿಂದ ಸಿಗುತ್ತೆ..?
ಉಪವಾಸ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?;
ಉಪವಾಸ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?; ಉಪವಾಸ ಮಾಡುವುದರಿಂದ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿನ ಕಾರ್ಯ ಮತ್ತು ದಕ್ಷತೆಯನ್ನು ಉಪವಾಸ ಸುಧಾರಿಸುದೆ. ಇದು ಆಲೋಚನೆಗಳ ಒತ್ತಡವನ್ನು ಕಡಿಮೆ ಮಾಡಿ, ಇದರೊಂದಿಗೆ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ರಕ್ತದೊತ್ತಡ ಕಡಿಮೆ ಮಾಡುತ್ತದೆ. ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಉಪವಾಸದಿಂದ ದೇಹದ ಕೊಬ್ಬು ಕಳೆದುಕೊಳ್ಳಲು ಸಹಾಯಕವಾಗುತ್ತದೆ. ಆದರೂ ಕೂಡಾ ಉಪವಾಸದಿಂದ ಸ್ನಾಯುಗಳ ಬಿಗಿತ ಕಳೆದುಕೊಳ್ಳುತ್ತವೆ.